• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀನ್ಸ್ ತೊಟ್ಟು ಆಕರ್ಷಿಸುವ ಮಹಿಳೆಯರನ್ನು ಸಮುದ್ರಕ್ಕೆ ಎಸೆಯಬೇಕು

|

ತಿರುವನಂತಪುರಂ, ಮಾ 1: ಜೀನ್ಸ್, ಟಿ-ಶರ್ಟ್ ತೊಟ್ಟು ಪುರುಷರನ್ನು ಆಕರ್ಷಿಸುವಂತಹ ಮಹಿಳೆಯರನ್ನು ಸಮುದ್ರಕ್ಕೆ ಎಸೆಯಬೇಕೆಂದು ಪಾದ್ರಿಯೊಬ್ಬರು ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ಅರೆನಗ್ನ ಬಟ್ಟೆ ಧರಿಸುವ ಮಹಿಳೆಯರನ್ನೂ ಸಮುದ್ರದಲ್ಲಿ ಮುಳುಗಿಸಬೇಕೆಂದು ಪಾದ್ರಿ ನೀಡಿರುವ ಹೇಳಿಕೆಯ ವಿಡಿಯೋವನ್ನು ಕೇರಳದ ಶಾಲೋಮ್ ಟಿವಿ ತನ್ನ ಫೇಸ್ ಬುಕ್ ಟೈಂಲೈನಿನಲ್ಲಿ ಪ್ರಕಟಿಸಿದೆ.

ಮಲಯಾಳಂ ಭಾಷೆಯಲ್ಲಿರುವ ಈ ವಿಡಿಯೋ ತುಣುಕು ಹನ್ನೊಂದು ತಿಂಗಳ ಹಿಂದೆ ಯುಟ್ಯೂಬ್ ನಲ್ಲಿ ಪ್ರಸಾರವಾಗಿದ್ದರೂ, ಫೆಬ್ರವರಿ 25ರಂದು ಶಾಲೋಮ್ ಟಿವಿ ಈ ವಿಡಿಯೋ ಮರುಬಿತ್ತರಿಸಿದ ನಂತರ ಈ ವಿಡಿಯೋ ಈಗ ವೈರಲ್ ಆಗಿದೆ.

 Kerala priest says women wearing jeans, T-shirt arouse men, wants them drowned in the sea

ಪವಿತ್ರ ದಿನದಂದು ಪ್ರಾರ್ಥನೆಗೆಂದು ಚರ್ಚಿಗೆ ಹೋದಾಗ ಕೆಲವು ಮಹಿಳೆಯರು ಧರಿಸುವ ಬಟ್ಟೆಯನ್ನು ನೋಡಿದಾಗ, ಅಂತವರನ್ನು ಚರ್ಚಿನಿಂದ ಹೊರಗಟ್ಟಬೇಕು ಎನ್ನುವಷ್ಟು ಸಿಟ್ಟು ಬರುತ್ತದೆ ಎಂದು ಪಾದ್ರಿ ಹೇಳಿದ್ದಾರೆ.

ಚರ್ಚಿಗೆ ಬರುವ ಕೆಲವು ಮಹಿಳೆಯರು ಜೀನ್ಸ್, ಟಿ-ಶರ್ಟ್ ಧರಿಸಿ ಕೈಯಲ್ಲೊಂದು ಮೊಬೈಲ್ ಇಟ್ಟುಕೊಂಡು, ತಲೆಯನ್ನೂ ಬಾಚಿಕೊಳ್ಳದೇ ಬರುತ್ತಾರೆ. ಅವರಿಗೆ ಚರ್ಚಿಗೆ ಹೇಗೆ ಬರಬೇಕೆನ್ನುವ ಕನಿಷ್ಠ ಜ್ಞಾನವೂ ಇರುವುದಿಲ್ಲ ಎಂದು ಪಾದ್ರಿ ನೀಡಿರುವ ಹೇಳಿಕೆ ವಿಡಿಯೋದಲ್ಲಿದೆ.

ಕ್ಯಾಥೋಲಿಕ್ ಚರ್ಚ್ ಅಥವಾ ಬೈಬಲ್ ನಲ್ಲಿ ಪುರುಷರು ತೊಟ್ಟಂತೇ ಮಹಿಳೆಯರೂ ಬಟ್ಟೆಗಳನ್ನು ಧರಿಸಬಹುದೆಂದು ಎಲ್ಲಾದರೂ ಉಲ್ಲೇಖಿಸಲಾಗಿದೆಯಾ ಎಂದು ಪ್ರಶ್ನಿಸಿರುವ ಪಾದ್ರಿ, ಮಹಿಳೆಯರು ಧರಿಸುವ ಬಟ್ಟೆಯನ್ನು ಪುರುಷರು ಮತ್ತು ಪುರುಷರು ಧರಿಸುವ ಬಟ್ಟೆಯನ್ನು ಮಹಿಳೆಯರು ಧರಿಸಬಾರದೆಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A video sourced from Shalom TV posted on Facebook shows a Kerala priest saying women who wear jeans, T-shirt and shirts, and arouse men by wearing half-nude attire, should be drowned in the sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more