ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಡಕಟ್ಟು ಜನರ ಆರೋಗ್ಯ ತಪಾಸಣೆಗೆ 10 ಕಿ.ಮೀ ಚಾರಣ: ಆರೋಗ್ಯ ಕಾರ್ಯಕರ್ತೆಯರು ಸಾಹಸ

|
Google Oneindia Kannada News

ಛತ್ತೀಸ್‌ಗಢ : ಇಬ್ಬರು ಮಹಿಳಾ ಆರೋಗ್ಯ ಕಾರ್ಯಕರ್ತರು ತಮ್ಮ ತಂಡಗಳೊಂದಿಗೆ ಕಡಿದಾದ ಭೂಪ್ರದೇಶ ಮತ್ತು ಗುಡ್ಡಗಾಡು ಕಾಡುಗಳ ಮೂಲಕ ಬರೋಬ್ಬರಿ 10 ಕಿ.ಮೀ ಪಾದಯಾತ್ರೆ ನಡೆಸಿ ಬಲರಾಂಪುರ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಝಲ್ವಾಸಾ ಗ್ರಾಮದಲ್ಲಿ ಜನರ ಆರೋಗ್ಯ ತಪಾಸಣೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಬಲರಾಮ್‌ಪುರದ ದಟ್ಟ ಅರಣ್ಯದಲ್ಲಿರುವ ಬುಡಕಟ್ಟು ಜನರಿರುವ ಗ್ರಾಮಗಳಲ್ಲಿ ಜಿಲ್ಲಾಡಳಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ. ಇದು ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ಸಹಯೋಗದೊಂದಿಗೆ ಶಿಬಿರಗಳನ್ನು ನಡೆಸಲಾಗುತ್ತಿದೆ. ಸಬಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಝಲ್ವಾಸಾ ಗ್ರಾಮವನ್ನು ತಲುಪುವುದಕ್ಕೆ ಸರಿಯಾದ ರಸ್ತೆಯಿಲ್ಲ. ಆದರೂ ಈ ಆರೋಗ್ಯ ಕಾರ್ಯತೆಯರ ತಂಡ ಸುಮಾರು 10 ಕಿಲೋಮೀಟರ್ ಗುಡ್ಡಗಾಡು ಮತ್ತು ದುರ್ಗಮ ಅರಣ್ಯ ಮಾರ್ಗವನ್ನು ಕಾಲುನಡಿಗೆಯಲ್ಲಿ ದಾಟಿ ಗ್ರಾಮವನ್ನು ತಲುಪಿದ್ದು, ಸುಮಾರು 28 ಕುಟುಂಬಗಳ ಜನರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಈ ಸ್ಥಳದಲ್ಲಿ 20 ವಿಶೇಷ ಹಿಂದುಳಿದ ಬುಡಕಟ್ಟು ಕುಟುಂಬಗಳಿವೆ ಎಂದು

ವಿಡಿಯೋ: ನಾಯಿ ಮೇಲೆ ಏರಿ ಹಗಲು ದರೋಡೆ ಮಾಡಿದ ಐನಾತಿ ಕೋತಿ ತಿಳಿದಬಂದಿದೆ.ವಿಡಿಯೋ: ನಾಯಿ ಮೇಲೆ ಏರಿ ಹಗಲು ದರೋಡೆ ಮಾಡಿದ ಐನಾತಿ ಕೋತಿ ತಿಳಿದಬಂದಿದೆ.

ತಂಡದಲ್ಲಿ ಇಬ್ಬರು ಮಹಿಳೆಯರು

ತಂಡದಲ್ಲಿ ಇಬ್ಬರು ಮಹಿಳೆಯರು

ಕಾಡಿನ ಮಧ್ಯೆ ಇರುವ ಕುಗ್ರಾಮಕ್ಕೆ ತೆರಳುವ ದೈರ್ಯ ಎಲ್ಲರಿಗೂ ಇರುವುದಿಲ್ಲ. ಆದರೂ ತಂಡದ ಜೊತೆಗೆ ಇಬ್ಬರು ಮಹಿಳೆಯರು ಚಾರಣ ನಡೆಸಿದ್ದಾರೆ. ತಂಡದಲ್ಲಿ ಹಲ್ಮಿ ಟಿರ್ಕಿ ಮತ್ತು ಸುಚಿತಾ ಸಿಂಗ್ ಎಂಬ ಮಹಿಳೆಯರು ತಮ್ಮ ಕೆಲಸವನ್ನು ಗೌರವಿಸಿ ಕಾಡಿನ ಮಧ್ಯೆ ಸಂಚರಿಸಿ ಮೇಲಿನ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಲ್ಮಿ ಟರ್ಕಿ, "ನಾನು ಸಬಗ್ ಆರೋಗ್ಯ ಕೇಂದ್ರದಿಂದ ಎಎನ್‌ಎಂ ಆಗಿದ್ದೇನೆ. ನಾವು ಬೆಟ್ಟಗಳು ಮತ್ತು ಕಾಡುಗಳನ್ನು ದಾಟಿ ನಾವು ಇಲ್ಲಿಗೆ ತಲುಪಿದ್ದೇವೆ. ಜಿಲ್ಲಾಡಳಿತದ ಆರೋಗ್ಯ ಶಿಬಿರದ ಆಯೋಜನೆ ಕ್ರಮವಾಗಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲು ಇಲ್ಲಿಗೆ ಬಂದಿದ್ದೇವೆ " ಎಂದು ಹೇಳಿದರು.

ಕಣ್ಣುಗಳ ಪೊರೆಯ ಕಾರಣಗಳೇನು, ತಡೆಗಟ್ಟುವಿಕೆ, ಚಿಕಿತ್ಸೆ ಹೇಗೆ?ಕಣ್ಣುಗಳ ಪೊರೆಯ ಕಾರಣಗಳೇನು, ತಡೆಗಟ್ಟುವಿಕೆ, ಚಿಕಿತ್ಸೆ ಹೇಗೆ?

ನಮ್ಮ ಎಎನ್‌ಎಂಗಳಿಂದ ಉತ್ತಮ ಕಾರ್ಯ

ನಮ್ಮ ಎಎನ್‌ಎಂಗಳಿಂದ ಉತ್ತಮ ಕಾರ್ಯ

ಬಲರಾಂಪುರ ಜಿಲ್ಲಾಧಿಕಾರಿ ಕುಂದನ್ ಕುಮಾರ್ ಅವರು ಮಹಿಳಾ ಆರೋಗ್ಯ ಕಾರ್ಯಕರ್ತರಾದ ಹಲ್ಮಿ ಮತ್ತು ಸುಚಿತಾ ಸಿಂಗ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. "ಕಾಡಿನ ಮಧ್ಯೆ ಅತ್ಯಂತ ದೂರದಲ್ಲಿ ಝಲ್ವಾಸಾ ಗ್ರಾಮವಿದ್ದು, ಇದೊಂದು 10 ಕಿಲೋಮೀಟರ್ ಟ್ರೆಕ್ ಆಗಿದೆ. ನಿನ್ನೆ ನಮ್ಮ ತಂಡಗಳು ಅಲ್ಲಿಗೆ ಹೋಗಿದ್ದವು. ಇಬ್ಬರು ಎಎನ್‌ಎಂಗಳಾದ ಹಲ್ಮಿ ಮತ್ತು ಸುಚಿತಾ ಸಿಂಗ್ ಅಲ್ಲಿಗೆ ಹೋಗಿ ಜನರ ಆರೋಗ್ಯ ತಪಾಸಣೆ ಮಾಡುವ ಮೂಲಕ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ನಾವು ಇಂತಹ ಹಲವು ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ ಎಂದು ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ.

ಬಿಪಿ, ಸುಗರ್ ಪರೀಕ್ಷೆ

ಬಿಪಿ, ಸುಗರ್ ಪರೀಕ್ಷೆ

ಝಲ್ವಾಶಾ ಅಂತಹ ಹಲವು ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಅವಶ್ಯಕತೆಯುಳ್ಳ ಜನರಿಗೆ ಚಿಕಿತ್ಸೆ ನೀಡಲು ದಟ್ಟವಾದ ಅರಣ್ಯಕ್ಕೆ ದೈರ್ಯದಿಂದ ಹೋಗುತ್ತಿದ್ದಾರೆ. ಅಲ್ಲಿನ ಜನರ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ, ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಜನರ ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಪ್ರಸ್ತುತ ಕ್ಯಾಂಪ್‌ನ ಪ್ರಕಾರ ಅಲ್ಲಿನ ಜನರ ಆರೋಗ್ಯ ಉತ್ತಮವಾಗಿದೆ " ಎಂದು ಕುಮಾರ್ ಹೇಳಿದ್ದಾರೆ.

Recommended Video

Japan ಹುಡುಗನ ಜೋತೆ Modi ಸಂವಾದ | #Japan | Oneindia Kannada
ಗ್ರಾಮೀಣ ಭಾರತದ ಆರೋಗ್ಯ ಸುಧಾರಣೆ

ಗ್ರಾಮೀಣ ಭಾರತದ ಆರೋಗ್ಯ ಸುಧಾರಣೆ

ಆಶಾ ಕಾರ್ಯಕರ್ತರು ಅಥವಾ ಆರೋಗ್ಯ ಕಾರ್ತರಯರು ಕಳೆದ ಎರಡು ವರ್ಷಗಳಿಂದ ಕೋವಿಡ್‌ 19 ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕಠಿಣ ಸಂದರ್ಭದಲ್ಲಿ ಮನೆಮನೆಗೆ ತೆರಳಿ ಕೊರೊನಾ ಪೀಡಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ. ಸಮೂದಾಯದ ಗರ್ಭಿಣಿಯರ ಕಾಳಜಿ, ಮಕ್ಕಳಿಗೆ ರೋಗ ನಿರೋಧಕ ಲಸಿಕೆ, ಪೋಲಿಯೋ ಲಸಿಕೆ, ಸಮುದಾಯದ ಆರೋಗ್ಯ ರಕ್ಷಣೆ , ಕ್ಷಯರೋಗ ಚಿಕಿತ್ಸೆಗೆ ಸಿಗುವಂತೆ ಆಶಾ ಕಾರ್ಯಕರ್ತರು ನೆರವಾಗುತ್ತಿದ್ದಾರೆ. ಅವರ ಈ ಸೇವೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೂಸ್‌ ಅಧಾನಮ್ ಗೇಬ್ರೆಯಸ್‌ 6 ಪ್ರಶಸ್ತಿಗಳನ್ನು ಘೋಷಿಸಿದ್ದಾರೆ.

English summary
Two women health workers with their teams trekked 10 km through steep terrain and hilly forests to conduct health checkups of people in tribal-dominated Jhalwasa village in Balrampur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X