ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಿ ಎಂದು ಸುಳ್ಳು ಹೇಳಿ ಪ್ರಿಯಕರನ ಜೊತೆ ಮಹಿಳಾ ಪೊಲೀಸ್ ಕ್ವಾರಂಟೈನ್

|
Google Oneindia Kannada News

ನಾಗ್ಪುರ, ಜುಲೈ 17: ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್ ಒಬ್ಬರು ಸುಳ್ಳು ಹೇಳಿ ವಿವಾಹಿತ ಪ್ರಿಯಕರನ ಜೊತೆ ಕ್ವಾರಂಟೈನ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.

ಕೊರೊನಾ ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಕಾರಣ ಮಹಿಳಾ ಕಾನ್ಸ್‌ಟೇಬಲ್‌ನ್ನು ಕ್ವಾರಂಟೈನ್ ಆಗಲು ಆರೋಗ್ಯ ಅಧಿಕಾರಿಗಳು ಸೂಚಿಸಿದ್ದರು. ಈ ವೇಳೆ ನನ್ನ ಜೊತೆ ನನ್ನ ಪತಿಯನ್ನು ಕ್ವಾರಂಟೈನ್ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆ ಇಬ್ಬರನ್ನು ಕ್ವಾರಂಟೈನ್ ಮಾಡಲಾಯಿತು.

ಕೊರೊನಾ ಕುರಿತು ಮೋದಿ ಸರ್ಕಾರಕ್ಕೆ ಬಲವಾದ ಎಚ್ಚರಿಕೆ ನೀಡಿದ ರಾಹುಲ್ಕೊರೊನಾ ಕುರಿತು ಮೋದಿ ಸರ್ಕಾರಕ್ಕೆ ಬಲವಾದ ಎಚ್ಚರಿಕೆ ನೀಡಿದ ರಾಹುಲ್

ಮೂರು ದಿನಗಳ ಬಳಿಕ ತಡವಾಗಿ ಗೊತ್ತಾಗಿದ್ದು ಏನಂದರೆ ಆತ ಪೊಲೀಸ್ ಕಾನ್ಸ್‌ಟೇಬಲ್ ಹೇಳಿದಂತೆ ಆಕೆಯ ಪತಿಯಲ್ಲ, ಪ್ರಿಯಕರ ಎಂದು. ಏನಿದು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಲವ್ ಸ್ಟೋರಿ? ಮುಂದೆ ಓದಿ...

ಪೊಲೀಸ್ ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್!

ಪೊಲೀಸ್ ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್!

ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಕೆಯ ಪತಿ ಎಂದು ನಮೂದಿಸಿದ ವ್ಯಕ್ತಿಯನ್ನು ನಾಗ್ಪುರದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದಲ್ಲಿ ಅಧಿಕಾರಿಗಳು ಕ್ವಾರಂಟೈನ್ ಮಾಡಿದರು. ಮೂರು ದಿನಗಳ ಬಳಿಕ ಪೊಲೀಸ್ ತರಬೇತಿ ಕೇಂದ್ರದ ಬಳಿ ಪ್ರಿಯಕರ ಪತ್ನಿ ತನ್ನ ಪತಿಯನ್ನು ಹುಡುಕಿಕೊಂಡು ಬಂದಳು.

ವಿವಾಹಿತನ ಜೊತೆ ಕಾನ್ಸ್‌ಟೇಬಲ್ ಸಂಬಂಧ!

ವಿವಾಹಿತನ ಜೊತೆ ಕಾನ್ಸ್‌ಟೇಬಲ್ ಸಂಬಂಧ!

ತನ್ನ ಗಂಡ ಕ್ವಾರಂಟೈನ್ ಆಗಿರುವ ವಿಚಾರ ತಿಳಿಯದ ಪತ್ನಿ ಮೂರು ದಿನವಾದರೂ ಮನೆಗೆ ಬರಲಿಲ್ಲ ಎಂದು ಗಾಬರಿಯಾಗಿದ್ದಾರೆ. ಬಳಿಕ, ಹೇಗೋ ಮಹಿಳಾ ಕಾನ್ಸ್‌ಟೇಬಲ್ ಜೊತೆ ಸಂಬಂಧ ಹೊಂದಿರುವುದು ತಿಳಿದ ಆಕೆ ನೇರವಾಗಿ ಕ್ವಾರಂಟೈನ್ ಆಗಿರುವ ವಿಚಾರ ತಿಳಿದು ಪೊಲೀಸ್ ತರಬೇತಿ ಕೇಂದ್ರದ ಬಳಿ ಬಂದಿದ್ದಾರೆ. ಆದರೆ ಗೇಟ್‌ ಒಳಗೆ ಸಿಬ್ಬಂದಿ ಆಕೆಗೆ ಪ್ರವೇಶ ನೀಡಲಿಲ್ಲ.

ಪತಿಯ ವಿರುದ್ಧ ಪೊಲೀಸ್ ದೂರು

ಪತಿಯ ವಿರುದ್ಧ ಪೊಲೀಸ್ ದೂರು

ನಂತರ ಈ ಕುರಿತು ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸ್ ಕಮಿಷನರ್ ಭೂಷಣ್ ಕುಮಾರ್ ಉಪಾಧ್ಯಾಯ ಅವರಿಗೂ ವಿಷಯ ಮುಟ್ಟಿಸಿದ್ದಾರೆ. ಈ ದೂರಿನ ಅನ್ವಯ ತನಿಖೆಗೆ ಸಹ ಆದೇಶ ಮಾಡಲಾಗಿದೆ.

ಸರ್ಕಾರಿ ಕಾರ್ಯಕ್ರಮದಲ್ಲಿ ಪರಿಚಯ

ಸರ್ಕಾರಿ ಕಾರ್ಯಕ್ರಮದಲ್ಲಿ ಪರಿಚಯ

ಕಳೆದ ಅಕ್ಟೋಬರ್‌ ತಿಂಗಳಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಇಬ್ಬರಿಗೂ ಪರಿಚಯ ಆಗಿದೆ. ಆ ಪರಿಚಯದಿಂದ ಸಂಬಂಧ ಬೆಳದಿದೆ ಎಂದು ತಿಳಿದಿದೆ. ಇವರಿಬ್ಬರು ಸುಳ್ಳಿನ ಕಥೆ ತಿಳಿದ ಅಧಿಕಾರಿಗಳು, ಪ್ರಿಯಕರನನ್ನು ಪ್ರತ್ಯೇಕ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಹಾಗೂ ಈ ಪ್ರಕರಣ ಕುರಿತು ತನಿಖೆಗೆ ಮುಂದಾಗಿದ್ದಾರೆ.

English summary
Women police Constable attached to Nagpur police was quarantined with married boyfriend in nagpur. after knowing this, his wife lodged complaint against husband.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X