ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಮಾ ವಿರುದ್ಧ ಮಹಿಳೆಯರಿಂದ ಉಪವಾಸ ಸತ್ಯಾಗ್ರಹ

By Mahesh
|
Google Oneindia Kannada News

ವಿಶಾಖಪಟ್ಟಣಂ, ಫೆಬ್ರವರಿ 22: ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಗಾಡ್ ಸೆಕ್ಸ್ ಅಂಡ್ ಟ್ರೂಥ್' (ಜಿಎಸ್ಟಿ) ವಿರುದ್ಧ ಮಹಿಳಾ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ಈ ವೆಬ್ ಸರಣಿ ನಿರ್ಮಿಸಿದ್ದಕ್ಕಾಗಿ ಪೊಲೀಸರಿಂದ ವಿಚಾರಣೆಗೊಳಲ್ಪಟ್ಟ ವರ್ಮಾ ಅವರು ನಿಟ್ಟುಸಿರು ಬಿಡುವಷ್ಟರಲ್ಲೇ ಮತ್ತೊಂದು ಆತಂಕ ಎದುರಾಗಿದೆ.

'ಗಾಡ್, ಸೆಕ್ಸ್, ಟ್ರೂಥ್' ಎಂದ ವರ್ಮಾಗೆ ಪೊಲೀಸರಿಂದ ಡ್ರಿಲ್'ಗಾಡ್, ಸೆಕ್ಸ್, ಟ್ರೂಥ್' ಎಂದ ವರ್ಮಾಗೆ ಪೊಲೀಸರಿಂದ ಡ್ರಿಲ್

ಅಖಿಲ ಭಾರತ ಡೆಮೊಕ್ರಾಟಿಕ್ ಮಹಿಳೆ ಅಸೋಸಿಯೇಷನ್ (ಎಐಡಿಡಬ್ಲ್ಯೂಎ) ನ ಸದಸ್ಯರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.ವರ್ಮಾ ವಿರುದ್ಧ ವೈಜಾಗ್ ಪೊಲೀಸರು ಎಫ್ಐಆರ್ ಹಾಕಲು ಹಿಂದೇಟು ಹಾಕಿದ ಹಿನ್ನಲೆಯಲ್ಲಿ ಈ ರೀತಿ ಪ್ರತಿಭಟಿಸುತ್ತಿದ್ದಾರೆ.

Women activists stage 48-hr hunger strike, seeks RGV's arrest

ಭಾರತೀಯ ಚಿತ್ರರಂಗದ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಗಾಡ್ ಸೆಕ್ಸ್ ಅಂಡ್ ಟ್ರೂಥ್' (ಜಿಎಸ್ಟಿ) ಮತ್ತೆ ಸುದ್ದಿಯಲ್ಲಿದೆ. ಆದರೆ, ಈಗ ಇದ್ದಕ್ಕಿದ್ದಂತೆ ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ತಿರುಗಿ ಬಿದ್ದಿದ್ದು, ಅವರನ್ನು ಪೋರ್ನ್ ಸ್ಟಾರ್ ಎಂದು ಕರೆದಿದ್ದಾರೆ.

ವರ್ಮಾ ಅವರ ಗಾಡ್ ಸೆಕ್ಸ್ ಟ್ರೂಥ್ ವೆಬ್ ಸರಣಿ ವಿರುದ್ಧ ಮಹಿಳಾ ಸಂಘಟನೆಗಳು ದೂರು ನೀಡಿದ್ದರು. ಈ ವಿಷಯವಾಗಿ ಸೆಂಟ್ರಲ್ ಕೈಂ ವಿಭಾಗ ಪೊಲೀಸರ ಮುಂದೆ ಹಾಜರಾಗಿದ್ದ ವರ್ಮಾ ಅವರು ಪೊಲೀಸರ ಪ್ರಶ್ನೆಗಳ ಸುರಿಮಳೆಯನ್ನು ಎದುರಿಸಿದ್ದಾರೆ. ಚಿತ್ರದ ಬಗ್ಗೆ ಆಕ್ಷೇಪವಲ್ಲದೆ, ಚಿತ್ರದ ಆರ್ಥಿಕ ವ್ಯವಹಾರ, ಸೈಬರ್ ಕ್ರೈಂ, ಕಾಪಿರೈಟ್ ಬಗ್ಗೆ ಕೂಡಾ ಪ್ರಶ್ನೆಗಳು ಬಂದಿತ್ತು. ಆದರೆ, ಇಡೀ ವೆಬ್ ಸರಣಿಯನ್ನು ವಿದೇಶದಲ್ಲಿ ಚಿತ್ರೀಕರಿಸಲಾಗಿದ್ದು, ಅಲ್ಲಿನ ಕಾನೂನಿನ ಪ್ರಕಾರ ಎಲ್ಲಾ ನಿಯಮ ಪಾಲಿಸಿದ್ದೇವೆ ಎಂದು ವರ್ಮಾ ಹೇಳಿದ್ದರು.

ಈ ಚಿತ್ರದಲ್ಲಿ ಮಹಿಳೆಯನ್ನು ಅಶ್ಲೀಲವಾಗಿ ತೋರಿಸಲಾಗಿದೆ. ಇದನ್ನು ಯಾರು ನೋಡಬೇಕು, ನೋಡಬಾರದು ಎಂಬ ನಿರ್ಬಂಧವೂ ಇಲ್ಲ. ವೆಬ್ ನಲ್ಲಿ ಮುಕ್ತವಾಗಿ ಬಿಡಲಾಗಿದೆ. ಹೀಗಾಗಿ, ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಕಾರ್ಯಕರ್ತೆ ಮಣಿ ಎಂಬುವರು ವಿಶಾಖಪಟ್ಟಣಂನ ವೈಜಾಗ್ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.

English summary
Members of several women associations, led by All India Democratic Women Association (AIDWA), on Wednesday, staged a 48-hour hunger strike against Vizag police for not filing FIR against film-maker Ram Gopal Varma, over his latest film ' 'God, Sex And Truth'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X