ಇದೆಂಥ ಅಮಾನವೀಯತೆ?! ಪತ್ನಿಯನ್ನು ಮರಕ್ಕೆ ಕಟ್ಟಿ ಥಳಿಸಿದ ನಿರ್ದಯಿ ಪತಿ!

Posted By:
Subscribe to Oneindia Kannada

ಲಕ್ನೊ, ಮಾರ್ಚ್ 23: ಪತ್ನಿ ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ದೂರಿ, ಆಕೆಯನ್ನು ಆಕೆಯ ಪತಿ ಮರವೊಂದಕ್ಕೆ ಕಟ್ಟಿ, ಥಳಿಸಿದ ಘಟನೆ ಉತ್ತರ ಪ್ರದೇಶದ ಬುಲಂದ್ಶರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪತ್ನಿಗೆ ಪತಿಯೇ ಹೊಡೆಯುವಂತೆ ಇಲ್ಲಿನ ಪಂಚಾಯತಿಯೇ ಆದೇಶ ನೀಡಿತ್ತು ಎಂಬುದು ಮತ್ತಷ್ಟು ದಿಗ್ಭ್ರಮೆ ಮೂಡಿಸುವ ಸಂಗತಿ. ಆಕೆಯ ಮೈಮೇಲೆಲ್ಲ ರಕ್ತ ಸುರಿಯುವಂತೆ ಪತಿ ಥಳಿಸುತ್ತಿದ್ದರೂ ಅಲ್ಲಿ ನೆರೆದಿದ್ದ ನೂರಾರು ಜನರಲ್ಲಿ ಯಾರೊಬ್ಬರೂ ಇದನ್ನು ತಡೆಯದಿರುವುದು ಅಮಾನವೀಯತೆಯ ಪರಾಕಾಷ್ಠೆ ಅನ್ನಿಸಿದೆ.

ಅಮಾಯಕ ಆದಿವಾಸಿಯ ಹತ್ಯೆ, ಸೆಲ್ಫಿ ಮತ್ತು ಸಾಮಾಜಿಕ ಮಾಧ್ಯಮ!

ಅಷ್ಟೇ ಅಲ್ಲ, ಆಕೆಯನ್ನು ರಕ್ತ ಬರುವಂತೆ ಥಳಿಸಿದ ನಂತರ, ರೂಮ್ ವೊಂದಕ್ಕೆ ಆಕೆಯನ್ನು ಎಳೆದೊಯ್ದು ಗ್ರಾಮದ ಮುಖ್ಯಸ್ಥನೊಬ್ಬ ಆಕೆಗೆ ಲೈಂಗಿಕ ಕಿರುಕುಳವನ್ನೂ ನೀಡಿದ್ದಾನೆಂಬ ಮಾಹಿತಿ ತಮಗೆ ದೊರಕಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪತಿಯ ಅಮಾನವೀಯ ವರ್ತನೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರಪುರುಷನೊಂದಿಗೆ ಆಕೆ ಸಂಬಂಧ ಹೊಂದಿದ್ದಾಳೆಂಬ ಅನುಮಾನಕ್ಕೆ(ಸಾಬೀತಾಗದಿದ್ದರೂ) ಇಂಥ ಕ್ರೂರ ಶಿಕ್ಷೆ ವಿಧಿಸುವುದು ಸರಿಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.

Woman tied to tree, beaten by husband publically in UP

ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 25 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A village panchayat in Bulandshahr district of western Uttar Pradesh ordered the beating of a woman for allegedly having an affair and eloping with her lover.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ