ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಜೆಟ್ ಹಾರಿಸಲಿದ್ದಾರೆ ಮಹಿಳಾ ಪೈಲಟ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ಅಂಬಾಲಾ ವಾಯುನೆಲೆಯಲ್ಲಿನ ಸಂಪೂರ್ಣ ಪುರುಷ ಪೈಲಟ್‌ಗಳ ರಫೇಲ್ ತಂಡಕ್ಕೆ ಶೀಘ್ರದಲ್ಲಿಯೇ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ.

ಭಾರತೀಯ ವಾಯು ಪಡೆಯಲ್ಲಿ ಸಕ್ರಿಯರಾಗಿರುವ ಹತ್ತು ಮಹಿಳಾ ಪೈಟರ್ ಪೈಲಟ್‌ಗಳಲ್ಲಿ ಪ್ರಸ್ತುತ ಪರಿವರ್ತನೆ ತರಬೇತಿ ಪಡೆದುಕೊಳ್ಳುತ್ತಿದ್ದು, 17 ವಾಯುತಂಡದಲ್ಲಿ ರಫೇಲ್ ಜೆಟ್ ಹಾರಾಟ ನಡೆಸುವ ಸಂಪೂರ್ಣ ಚಟುವಟಿಕೆಯಲ್ಲಿ ಶೀಘ್ರವೇ ತೊಡಗಿಸಿಕೊಳ್ಳಲಿದ್ದಾರೆ.

Video: ಸರ್ವಧರ್ಮ ಪೂಜೆಯೊಂದಿಗೆ ರಫೇಲ್ ವಾಯುಪಡೆಗೆ ಸೇರ್ಪಡೆVideo: ಸರ್ವಧರ್ಮ ಪೂಜೆಯೊಂದಿಗೆ ರಫೇಲ್ ವಾಯುಪಡೆಗೆ ಸೇರ್ಪಡೆ

ಐಎಎಫ್‌ನ ಮೊದಲ ಐದು ರಫೇಲ್ ಯುದ್ಧ ವಿಮಾನಗಳನ್ನು ಅಂಬಾಲಾದಲ್ಲಿರುವ ಗೋಲ್ಡನ್ ಆರೋ ಪಡೆಗೆ ಸೆ. 10ರಂದು ಸೇರ್ಪಡೆ ಮಾಡಲಾಗಿತ್ತು. ಆಗಸ್ಟ್‌ನಿಂದಲೂ ಲಡಾಖ್ ಮೇಲ್ಭಾಗದಲ್ಲಿ ಪರೀಕ್ಷಾರ್ಥ ಹಾರಾಟ ಅಭ್ಯಾಸ ನಡೆಸುತ್ತಿರುವ ರಫೇಲ್ ಯುದ್ಧ ವಿಮಾನ ಲೇಹ್‌ನಲ್ಲಿ ಹಲವು ಬಾರಿ ಇಳಿಯುವ ಮೂಲಕ ಅದರ ಸಂಪೂರ್ಣ ಕಾರ್ಯಚಟುವಟಿಕೆಗಳಿಗೆ ತಯಾರಿ ಮಾಡುತ್ತಿದೆ.

Woman Pilot To Join IAFs Rafale Squadron Soon

ಮಹಿಳಾ ಪೈಲಟ್‌ಗಳು ತಮ್ಮ ಪುರುಷ ಸಹೋದ್ಯೋಗಿಗಳೊಂದಿಗೆ ರಫೇಲ್ ಚಾಲನೆಯ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲವರು ಮಿಗ್-21 ಯುದ್ಧ ವಿಮಾನಗಳನ್ನು ಚಲಾಯಿಸುತ್ತಿದ್ದು, ಅವರನ್ನು ರಫೇಲ್ ಜೆಟ್ ಚಲಾಯಿಸುವ ಮಟ್ಟಕ್ಕೆ ತರಬೇತಿ ನೀಡಲಾಗುತ್ತಿದೆ. ರಫೇಲ್ ಯುದ್ಧ ವಿಮಾನದ ಚಾಲನೆಯು ಸಂಪೂರ್ಣ ವಿಭಿನ್ನವಾಗಿದ್ದು, ಹೆಚ್ಚು ಆಧುನಿಕವಾಗಿದೆ. ಹೀಗಾಗಿ ಮಹಿಳಾ ಪೈಲಟ್‌ಗಳಲ್ಲಿ ಕೆಲವರನ್ನು ರಫೇಲ್ ಚಾಲನೆಗೆ ಸಜ್ಜುಗೊಳಿಸಲಾಗುತ್ತಿದೆ.

ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್ ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್

ಐಎಎಫ್‌ನ ಹತ್ತು ಮಹಿಳಾ ಪೈಲಟ್‌ಗಳು ಎಸ್‌ಯು-30 ಎಂಕೆಐ ಮತ್ತು ಮಿಕ್ 29 ಯುಪಿಜಿ ಸೇರಿದಂತೆ ವಿವಿಧ ಜೆಟ್‌ಗಳನ್ನು ಹಾರಿಸುತ್ತಿದ್ದಾರೆ. ಅವನಿ ಚತುರ್ವೇದಿ, ಭಾವನಾ ಕಾಂತ್ ಮತ್ತು ಮೋಹನಾ ಸಿಂಗ್, 2016ರಲ್ಲಿ ಮೊದಲ ಮೂವರು ಮಹಿಳಾ ಪೈಲಟ್‌ಗಳಾಗಿ ಸೇರ್ಪಡೆಯಾಗಿದ್ದರು.

English summary
India Air Force (IAF) Rafale squadron in ambala to get first woman fighter pilot soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X