ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೀಟ್ ಮಾಡಿ ಕಾಮುಕನಿಂದ ಮುಕ್ತಿ ಪಡೆದ ಯುವತಿ

|
Google Oneindia Kannada News

ಮುಂಬೈ, ನವೆಂಬರ್, 29: ರೈಲಿನಲ್ಲಿ ಕಾಮಾಂಧರು ಕಿರುಕುಳ ನೀಡಿದರೆ ಏನು ಮಾಡಬೇಕು? ಸಹಾಯವಾಣಿಗೆ ಕರೆ ಮಾಡಿ, ಇಲ್ಲವೇ ಸಹಪ್ರಯಾಣಿಕರ ನೆರವು ಪಡೆದುಕೊಳ್ಳಿ ಎಂಬ ಸಲಹೆಗಳು ಬರಬಹುದು. ಆದರೆ ಇಲ್ಲೊಬ್ಬರು ಯುವತಿ ಕಿರುಕುಳ ನೀಡುತ್ತಿದ್ದ ಪ್ರಕರಣವನ್ನು ನೇರವಾಗಿ ರೈಲ್ವೆ ಇಲಾಖೆಗೆ ಮತ್ತು ಸಚಿವರಿಗೆ ಟ್ವಿಟ್ ಮಾಡಿ ತಿಳಿಸಿದ್ದಾರೆ. ಅಲ್ಲದೇ ಇಲಾಖೆ ತಕ್ಷಣವೇ ಅವರ ನೆರವಿಗೆ ಧಾವಿಸಿದೆ.

ಮಹಾರಾಷ್ಟ್ರದ ಶಿಗ್ಗಾಂವ್ ರೈಲು ನಿಲ್ದಾಣದ ಸಮೀಪ ರೈಲು ಚಲಿಸುತ್ತಿದ್ದಾಗ ಒಬ್ಬಂಟಿ ಮಹಿಳೆಯೊಂದಿಗೆ ಕಾಮುಕನೊಬ್ಬ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ಇದನ್ನು ಸಹಿಸದ ನಮ್ರತಾ ಪ್ರಭು ಮಹಾಜನ್ ತಕ್ಷಣ ರೈಲ್ವೆ ಇಲಾಖೆಯ ಹ್ಯಾಂಡಲ್ ಹಾಕಿ ರಕ್ಷಣೆ ಕೋರಿ ಟ್ವೀಟ್ ಮಾಡಿದ್ದಾರೆ. ರೈಲು ಮುಂದಿನ ನಿಲ್ದಾಣ ಸೇರುವ ಮುನ್ನ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯುವತಿಗೆ ನೆರವು ನೀಡಿದ್ದಾರೆ.[ಕಾಯ್ದಿರಿಸದ ರೈಲ್ವೆ ಟಿಕೆಟ್ ಮೊದಲೇ ಪಡೆಯಲು ಹೊಸ ಆಪ್!]

Woman Passenger in Distress Gets Help After Her Tweet to Indian Railway

'ದಯವಿಟ್ಟು ನನಗೆ ಸಹಾಯ ಮಾಡಿ, ನಾನು 18030 ಸಂಖ್ಯೆಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ಶಿಗ್ಗಾಂವ್ ರೈಲ್ವೆ ನಿಲ್ದಾಣದಿಂದ ಪುರುಷ ಪ್ರಯಾಣಿಕನೊಬ್ಬ ನನ್ನೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದಾನೆ. ನಾನು ಭಯಭೀತಗೊಂಡಿದ್ದು ಏನು ಮಾಡಬೇಕೆಂದು ತೋಚುತ್ತಿಲ್ಲ' ಈ ಬಗೆಯಾಗಿ ಯುವತಿ ಟ್ವೀಟ್ ಮಾಡಿದ್ದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರೈಲ್ವೆ ಇಲಾಖೆ ನಿಮ್ಮ ಪಿಎನ್ ಆರ್ ಸಂಖ್ಯೆ ಕಳುಹಿಸಿಕೊಡುವಂತೆ ಕೇಳಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಅಸಭ್ಯವಾಗಿ ವರ್ತಿಸುತ್ತಿದ್ದ ಪ್ರಯಾಣಿಕನ್ನು ಬೇರೆಡೆಗೆ ಶಿಫ್ಟ್ ಮಾಡಿದರು. ಭುವಸಾಲ್ ರೈಲು ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಧಾವಿಸಿ ನಮ್ರತಾ ಅವರಿಗೆ ನೆರವಾದರು. ಇಂಥ ಪರಿಸ್ಥಿತಿ ಎದುರಾದಲ್ಲಿ ರೈಲ್ವೆ ಪ್ರಯಾಣಿಕರು ರಾಷ್ಟ್ರೀಯ ಹೆಲ್ಪ್‌ಲೈನ್ ಸಂಖ್ಯೆ 182ಗೆ ಕರೆ ಮಾಡಬಹುದು.

English summary
A woman passenger travelling alone on an outstation train in Maharashtra was immediately attended to by authorities after she sought help through a tweet directed to the Twitter handle of Railway Minister Suresh Prabhu. The commuter, identified as Namrata Mahajan, had posted the tweet, which was directed to Prabhu's handle @RailMinIndia, at 6.59 pm while she was passing through Shegaon railway station on Thursday. Meta Keys
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X