ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರಿಯನ್ನು ಮದುವೆಯಾಗಿ, 'ತಲಾಖ್' ಹೇಳಿಸಿಕೊಂಡ ನತದೃಷ್ಟೆ!

|
Google Oneindia Kannada News

ಹಾಪುರ(ಉತ್ತರ ಪ್ರದೇಶ), ಜನವರಿ 29: ಅತ್ತ ಸಂಸತ್ತಿನಲ್ಲಿ ಇಂದಿನಿಂದ ಆರಂಭವಾಗಿರುವ ಬಜೆಟ್ ಅಧಿವೇಶನದಲ್ಲಿ ವಿವಾದಾತ್ಮಕ ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗುವ ಸಾದ್ಯತೆ ಇದೆ. ಆದರೆ ಇದೇ ದಿನ (ಜ.29) ಉತ್ತರ ಪ್ರದೇಶದ ಹಾಪುರ ಎಂಬಲ್ಲಿ ಈ ಅನಿಷ್ಟ ಪದ್ಧತಿಗೆ ಮಹಿಳೆಯೊಬ್ಬಳು ತುತ್ತಾದ ಘಟನೆ ನಡೆದಿದೆ.

ಇಲ್ಲಿನ ಗ್ರಾಮ ಪಂಚಾಯಿತಿಯ ಆದೇಶದಂತೆ ಈ ಮುಸ್ಲಿಂ ಮಹಿಳೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದರು. ಆದರೆ ಇದಾಗಿ ಕೆಲವೇ ದಿನಗಳಲ್ಲಿ ಅತ್ಯಾಚಾರ ಎಸಗಿದ ವ್ಯಕ್ತಿ ಪತ್ನಿಗೆ 'ತಲಾಖ್' ಹೇಳುವ ಮೂಲಕ ವಿಚ್ಛೇದನ ನೀಡಿದ್ದಾನೆ!

ತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಮದುವೆಯಾದ ನಂತರದಿಂದಲೂ ಮಹಿಳೆಯ ಮೇಲೆ ಈತ ಮಾನಸಿಕ ಮತ್ತು ದೈಹಿಕವಾಗಿ ದೌರ್ಜನ್ಯ ಎಸಗುತ್ತಿದ್ದ. ಆಕೆಯೇ ಹೇಳುವ ಪ್ರಕಾರ, ಆಕೆ ಮತ್ತು ಆಕೆಯ ತಂದೆಯನ್ನು ಮರುಭೂಮಿಯಂಥ ಪ್ರದೇಶಕ್ಕೆ ಕರೆದೊಯ್ದು, ಡೈವೋರ್ಸ್ ಪೇಪರ್ ಗಳ ಮೇಲೆ ಸಹಿ ಮಾಡುವಂತೆ ಒತ್ತಡ ಹೇರಲಾಗಿತ್ತು. ಇಲ್ಲದಿದ್ದರೆ ಸಾಯಿಸುವುದಾಗಿ ಬೆದರಿಸಲಾಗಿತ್ತು.

Woman married off to rapist, given Triple Talaq

ಪತಿಯ ವಿರುದ್ಧ ಆಕೆ ನೀಡಿದ ಹೇಳಿಕೆಯ ಆಧಾರದ ಮೇಲೆ ಪತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

English summary
Ahead of the Triple Talaq discussion in the Rajya Sabha, another woman in Uttar Pradesh's Hapur fell victim to the practice. "She got married to her rapist on the order of the village Panchayat, but soon after that, he gave triple talaq to her", the victim's uncle told the media here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X