ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಪ್ರದೇಶದ ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಆರೋಪ

|
Google Oneindia Kannada News

ಇಟಾನಗರ್ (ಅರುಣಾಚಲ ಪ್ರದೇಶ), ಅಕ್ಟೋಬರ್ 15: ಅರುಣಾಚಲ ಪ್ರದೇಶದ ಬಮೆಂಗ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಗುರುಕ್ ಪೋರ್ಡುಂಗ್ ವಿರುದ್ಧ ವೈದ್ಯೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದಾರೆ. ಇಟಾನಗರದ ಹೋಟೆಲ್ ಗೆ ಕರೆಸಿಕೊಂಡು, ಅತ್ಯಾಚಾರ ಎಸಗಿ, ಈ ವಿಚಾರ ಹೊರಗೆ ತಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆತ ಬೆದರಿದ್ದಾಗಿ ದೂರಿದ್ದಾರೆ.

ಇಟಾನಗರ್ ಪೊಲೀಸರು ಗುರುಕ್ ಪೋರ್ಡುಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಅದರೆ ಶಾಸಕ ಕೂಡ ಪ್ರತಿಯಾಗಿ ದೂರು ದಾಖಲಿಸಿದ್ದು, ಒಪ್ಪಿಗೆಯ ಲೈಂಗಿಕ ಸಂಪರ್ಕಕ್ಕೆ ಮಹಿಳೆಯೇ ತಾನಾಗಿ ಹೋಟೆಲ್ ಗೆ ಬಂದಿದ್ದು ಎಂದು ಹೇಳಿದ್ದಾರೆ.

ಅಮೆಜಾನ್ ಡೆಲಿವರಿ ಬಾಯ್ ಯಿಂದ ಅತ್ಯಾಚಾರ ಯತ್ನ, ಪ್ರಕರಣಕ್ಕೆ ವಿಚಿತ್ರ ತಿರುವುಅಮೆಜಾನ್ ಡೆಲಿವರಿ ಬಾಯ್ ಯಿಂದ ಅತ್ಯಾಚಾರ ಯತ್ನ, ಪ್ರಕರಣಕ್ಕೆ ವಿಚಿತ್ರ ತಿರುವು

ದೂರಿನ ಪ್ರಕಾರ, ಮುಖ್ಯಮಂತ್ರಿ ಪೇಮಾ ಖಂಡು ಹಾಗೂ ಕೇಂದ್ರ ಸಚಿವ ಕಿರೇನ್ ರಿಜಿಜುಗೆ ಅಪ್ತರಾದ ಶಾಸಕ ಗುರುಕ್ ಪೋರ್ಡುಂಗ್, ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ ಚರ್ಚಿಸಲು ಶನಿವಾರ ಸಂಜೆ ಹೋಟೆಲ್ ಗೆ ಕರೆದಿದ್ದರು. ಕೋಣೆಯೇ ಒಳ ಹೋಗುತ್ತಿದ್ದಂತೆ ಅತ್ಯಾಚಾರ ಎಸಗಿದರು ಎಂದು ಹೇಳಲಾಗಿದೆ.

 Woman Filed Rape Case Against Arunachal Pradesh BJP MLA

ಈ ವಿಚಾರವನ್ನು ಹೊರಗೆ ಬಾಯಿ ಬಿಟ್ಟರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ ನಂತರವೇ ಹೋಟೆಲ್ ನ ಕೋಣೆಯಿಂದ ಹೊರಗೆ ಬಿಟ್ಟರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವರೆಗೆ ಶಾಸಕರನ್ನು ಪೊಲೀಸರು ವಿಚಾರಣೆ ಮಾಡಿಲ್ಲ, ವಶಕ್ಕೂ ಪಡೆದಿಲ್ಲ. ಇನ್ನು ಅರುಣಾಚಲ ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ.

English summary
Rape case filed against Arunachal Pradesh BJP MLA by woman doctor. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X