ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಟು ಮುಗ್ಧ ಕಂದಮ್ಮಗಳಿಗೆ ಹಿಂಸೆ ಕೊಟ್ಟ ವೃದ್ಧೆ

|
Google Oneindia Kannada News

ಪಣಜಿ, ಏಪ್ರಿಲ್ 17: ಆ ಮನೆಯಲ್ಲಿ ಇದ್ದದ್ದು ಒಂದಲ್ಲ, ಎರಡಲ್ಲ ಎಂಟು ಹೆಣ್ಣು ಮಕ್ಕಳು. ವಯಸ್ಸು ಆರರಿಂದ ಹನ್ನೆರಡು ವರ್ಷವಷ್ಟೇ. ಅವರ ಮೈಯಲ್ಲೆಲ್ಲ ಪರಚಿದ, ಹರಿತದ ವಸ್ತುವಿನಿಂದ ಬರೆ ಎಳೆದ ಗಾಯದ ಕಲೆಗಳು. ಈ ಮುಗ್ಧ ಪುಟ್ಟ ಕಂದಮ್ಮಗಳಿಗೆ ಹೀಗೆ ಹಿಂಸೆ ನೀಡುತ್ತಿದ್ದದ್ದು 65ರ ವೃದ್ಧೆ.

ಗೋವಾದ ವಾಸ್ಕೊ ನಗರದ ಬೈನಾದ ಫ್ಲಾಟ್ ಒಂದರಲ್ಲಿ ವೃದ್ಧೆಯ ದೌರ್ಜನ್ಯಕ್ಕೆ ಒಳಗಾಗಿ ಹಿಂಸೆ ಅನುಭವಿಸುತ್ತಿದ್ದ ಎಂದು ಪುಟ್ಟ ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.

ಚರ್ಚ್‌ಗೆ ಬಂದಿದ್ದ ಬಾಲಕಿಯೊಬ್ಬಳ ಕೈಯಲ್ಲಿ ಗಾಯದ ಕಲೆ ನೋಡಿದ ವ್ಯಕ್ತಿಯೊಬ್ಬರು ಏನಾಗಿದ್ದೆಂದು ಆಕೆಯನ್ನು ವಿಚಾರಿಸಿದ್ದರು. ಆಕೆ ಬಿಡಿಸಿಟ್ಟ ಕಥೆ ಕೇಳಿ ಆಘಾತಗೊಂಡ ಆ ವ್ಯಕ್ತಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.

woman arrested for torturing children

ಎನ್‌ಜಿಒ ಒಂದರ ಸಹಾಯದೊಂದಿಗೆ ಫ್ಲಾಟ್‌ ಮೇಲೆ ದಾಳಿ ನಡೆಸಿದ ಪೊಲೀಸರು ಎಲ್ಲ ಮಕ್ಕಳನ್ನು ರಕ್ಷಿಸಿ, ವೃದ್ಧೆಯನ್ನು ಬಂಧಿಸಿದರು.

ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವೃದ್ಧೆ
ವೆನಸ್ ಹಬೀಬ್ ಎಂಬ ವೃದ್ಧೆ ಈ ಪುಟ್ಟ ಮಕ್ಕಳೆಲ್ಲರನ್ನೂ ದತ್ತು ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾಳೆ. ಎಂಟು ಮಕ್ಕಳಿಗೂ ಹೊಡೆದು ಬಡಿದು ಹಿಂಸೆ ಕೊಡುತ್ತಿದ್ದ ಹಬೀಬ್, ಬಿಸಿ ಮಾಡಿದ ಚಾಕುವಿನಿಂದ ಬರೆಯನ್ನೂ ಹಾಕುತ್ತಿದ್ದಳಂತೆ.

ಸಣ್ಣ ಪುಟ್ಟ ವಿಷಯಗಳಿಗೂ ಹಿಂಸಿಸುತ್ತಿದ್ದ ಆಕೆ, ಪೈಪ್ ಮತ್ತು ಕಾದ ಚಾಕುವಿನಿಂದ ಕೈ ಕಾಲುಗಳ ಮೇಲೆ ಬಾರಿಸುತ್ತಿದ್ದಳು ಎಂದು ಮಕ್ಕಳು ಹೇಳಿಕೊಂಡಿದ್ದಾರೆ.

ಈ ಮಕ್ಕಳು ಆಕೆಯ ಬಳಿ ಹೇಗೆ ಸೇರಿಕೊಂಡಿದ್ದವು, ಯಾವ ಕಾರಣಕ್ಕೆ ಆಕೆ ಹಿಂಸೆ ನೀಡುತ್ತಿದ್ದಳು ಎಂಬ ಮಾಹಿತಿ ಬಹಿರಂಗವಾಗಿಲ್ಲ.

ವೃದ್ಧೆ ಮೇಲೆ ಅಪಹರಣ, ಅಪಾಯಕಾರಿ ಆಯುಧಗಳಿಂದ ಉದ್ದೇಶಪೂರ್ವಕ ಹಲ್ಲೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ರಕ್ಷಿಸಲಾದ ಮಕ್ಕಳನ್ನು ರಾಜ್ಯ ಸರ್ಕಾರದ ಮಕ್ಕಳ ಆಶ್ರಯ ಮನೆ ಅಪ್ನಾ ಘರ್್ಗೆ ಸೇರಿಸಲಾಗಿದೆ.

English summary
Eight girls were rescued from a flat owned by a 65 years old woman in Goa's Vasco city on Monday. Girls are sent to sate government's shelter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X