ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೈ ತೆನೆ ಪತನ, 'ಕಾಂಗ್ರೆಸ್ ಮುಕ್ತವಾದ ದಕ್ಷಿಣ ಭಾರತ'

|
Google Oneindia Kannada News

ಬೆಂಗಳೂರು, ಜುಲೈ 24: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವು ಮಂಗಳವಾರ(ಜುಲೈ23)ದಂದು ವಿಶ್ವಾಸಮತ ಕಳೆದುಕೊಳ್ಳುವ ಮೂಲಕ ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತಿದ್ದಂತೆ, ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಈಗ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ.

ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ, ಬಿಜೆಪಿ ಕನಸು ನನಸಾಯ್ತು!ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ, ಬಿಜೆಪಿ ಕನಸು ನನಸಾಯ್ತು!

ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಅಧಿಕಾರದಲ್ಲಿದ್ದರೆ, ಆಂಧ್ರಪ್ರದೇಶದಲ್ಲಿ ವೈಎಸ್ಸಾರ್ ಕಾಂಗ್ರೆ ಪಕ್ಷ ಇತ್ತೀಚೆಗೆ ಅಧಿಕಾರ ಪಡೆದುಕೊಂಡಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಆಡಳಿತ ನಡೆಸುತ್ತಿದೆ. ಕೇರಳದಲ್ಲಿ ಎಲ್ ಡಿ ಎಫ್ ಹಾಗೂ ಕಮ್ಯೂನಿಸ್ಟ್ ಪಾರ್ಟಿ ಮೈತ್ರಿ ಸರ್ಕಾರವಿದೆ.

With the fall of the Karnataka coalition, Congress rules only one southern state
ಒಂದು ವಾರಕ್ಕೂ ಅಧಿಕ ಕಾಲ ನಾಟಕೀಯ ತಿರುವು ಪಡೆದ ಕರ್ನಾಟಕ ರಾಜಕೀಯ ಕ್ಷೇತ್ರದ ಬೆಳವಣಿಗೆಗಳು ಮಂಗಳವಾರದಂದು ಒಂದು ಅಧ್ಯಾಯ ಮುಗಿಸಿತು ಎನ್ನಬಹುದು. 15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎಚ್. ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ನಿಲುವಳಿ ಬಗ್ಗೆ ಸುದೀರ್ಘ ಚರ್ಚೆ, ಸಾಂವಿಧಾನಿಕ ಹುದ್ದೆಗಳ ಅಧಿಕಾರ, ಜನಪ್ರತಿನಿಧಿ ಕಾಯ್ದೆ, ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ಸುದೀರ್ಘ ಚರ್ಚೆಯನ್ನು ನಾಡಿನ ಜನತೆ ಕಾಣುವ ಯೋಗ ಸಿಕ್ಕಿತ್ತು.

ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು? ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ನೇತೃತ್ವದ ವಹಿಸಿಕೊಂಡಿದ್ದ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ವಿದಾಯ ಭಾಷಣ ಮಾಡಿ, ವಿಶ್ವಾಸಮತವನ್ನು ಡಿವಿಷನ್ ಮೂಲಕ ತಲೆ ಎಣಿಕೆ ಮಾಡಲು ಒಪ್ಪಿಕೊಂಡರು. ಈ ಪರೀಕ್ಷೆಯಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲುಂಟಾಯಿತು.

ಅಂತಿಮ ಫಲಿತಾಂಶ:
ಒಟ್ಟು ಸದಸ್ಯರು : 204
ಮ್ಯಾಜಿಕ್ ನಂಬರ್ : 103
ಬಿಜೆಪಿ: 105
ಕಾಂಗ್ರೆಸ್ -ಜೆಡಿಎಸ್ ಮೈತ್ರಿ : 99
ಫಲಿತಾಂಶ : ಪ್ರಸ್ತಾಪದ ಪರ -ವಿರೋಧ ಸದಸ್ಯರ ತಲೆ ಎಣಿಕೆಯನ್ನು ಅಧಿಕಾರಿಗಳು ಪ್ರತ್ಯೇಕವಾಗಿ ಮಾಡಿದ್ದಾರೆ.
ಗೈರಾದವರು: 20

ಮೋದಿ 'ಕಾಂಗ್ರೆಸ್ ಮುಕ್ತ ಭಾರತ' ಕನಸು ಸಾಕಾರಗೊಳಿಸುತ್ತೇವೆ: ಬಿಎಸ್‌ವೈ ವಾಗ್ದಾನಮೋದಿ 'ಕಾಂಗ್ರೆಸ್ ಮುಕ್ತ ಭಾರತ' ಕನಸು ಸಾಕಾರಗೊಳಿಸುತ್ತೇವೆ: ಬಿಎಸ್‌ವೈ ವಾಗ್ದಾನ

ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಸೋಲುಂಟಾಗುತ್ತಿದ್ದಂತೆ ಯಡಿಯೂರಪ್ಪ ಅವರು ತಮ್ಮ ಶಾಸಕರ ಜತೆಗೂಡಿ ಗುಂಪಾಗಿ ಗೆಲುವಿನ ಚಿಹ್ನೆ ತೋರುತ್ತಾ ಫೋಟೋಗೆ ಪೋಸ್ ನೀಡಿದರು.

English summary
The Congress-JD(S) lost the trust vote on Tuesday and paved the way for the BJP to form the government in Karnataka. Incidentally, this was the only state in South India apart from Puducherry that was ruled by the Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X