ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ಅಪ್ಪಳಿಸಲಿದೆ 'ಫ್ಯಾನಿ' ಚಂಡಮಾರುತ,ಎಲ್ಲೆಲ್ಲಿ ಮಳೆ ಸಾಧ್ಯತೆ?

|
Google Oneindia Kannada News

Recommended Video

ಸದ್ಯದಲ್ಲೇ ತಮಿಳುನಾಡಿಗೆ ಅಪ್ಪಳಿಸಲಿದೆ ಫ್ಯಾನಿ ಚಂಡಮಾರುತ | Oneindia Kannada

ಚೆನ್ನೈ, ಏ.25: ತಮಿಳುನಾಡಿಗೆ 'ಫ್ಯಾನಿ' ಚಂಡಮಾರುತ ಅಪ್ಪಳಿಸಲಿದ್ದು, ದಕ್ಷಿಣ ಭಾರತದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಮುಂದಿನ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿದುಬಂದಿದೆ. ಸುಮಾರು 50 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ.

ಮೊಜಾಂಬಿಕ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿ ಪಡೆದ 'ಇದಾಯಿ' ಚಂಡಮಾರುತಮೊಜಾಂಬಿಕ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿ ಪಡೆದ 'ಇದಾಯಿ' ಚಂಡಮಾರುತ

ಚಂಡಮಾರುತ ಬಂಗಾಳಕೊಲ್ಲಿಯ ಪೂರ್ವ ಭಾಗದಿಂದ ದಕ್ಷಿಣ ಭಾರತ ಪ್ರವೇಶಿಸಲಿದೆ. ಆದರೆ ಇದು ದೃಢ ಪಟ್ಟಿಲ್ಲ, ತಜ್ಞರು ಈ ಕುರಿತು ಅಧ್ಯಯನ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.

With Cyclone Fani brewing in Bay pre-Monsoon rains in Tamil Nadu

ಸೋಮವಾರದಿಂದ ಬುಧವಾರದವರೆಗೆ ಸಾಮಾನ್ಯವಾಗಿದ್ದ ಸಮುದ್ರದ ಅಲೆಗಳು ಬುಧವಾರದ ಬಳಿಕ ಏಕಾಏಕಿ ಬದಲಾವಣೆ ಕಂಡಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಚಂಡಮಾರುತದ ಪರಿಣಾಮ ಗೋಚರಿಸಲಿದೆ.

ಬರುವ ಭಾನುವಾರ ತಮಿಳುನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಇವೆಲ್ಲಾ ಭಾಗಗಳಲ್ಲೂ ಮಳೆಯಾಗಲಿದೆ.

ಅಮೆರಿಕದಲ್ಲಿ'ಬಾಂಬ್ ಸೈಕ್ಲೋನ್' ಅಬ್ಬರ: 1,339 ವಿಮಾನಗಳ ಹಾರಾಟ ಸ್ಥಗಿತಅಮೆರಿಕದಲ್ಲಿ'ಬಾಂಬ್ ಸೈಕ್ಲೋನ್' ಅಬ್ಬರ: 1,339 ವಿಮಾನಗಳ ಹಾರಾಟ ಸ್ಥಗಿತ

ಏಪ್ರಿಲ್ ಬಳಿಕ ಚಂಡಮಾರುತದ ಕಾಲ ಆರಂಭವಾಗುತ್ತದೆ. ಇದು ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳುತ್ತದೆ. ಅತಿ ಹೆಚ್ಚು ಉಷ್ಣಾಂಶದಿಂದಾಗಿ ಗಾಳಿಯಲ್ಲಿ ಏರು ಪೇರು ಉಂಟಾಗಿ ಅದು ಚಂಡಮಾರುತಕ್ಕೆ ಕಾರಣವಾಗುತ್ತದೆ.

ಮೂರು, ನಾಲ್ಕಕ್ಕಿಂತ ಹೆಚ್ಚು ಚಂಡಮಾರುತಗಳು ಬಂಗಾಳಕೊಲ್ಲಿಯಿಂದ ಆರಂಭಗೊಳ್ಳುತ್ತವೆ. ಒಟ್ಟಿನಲ್ಲಿ ಮುಂದಿನ ವಾರಪೂರ್ತಿ ದೇಶಾದ್ಯಂತ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ.

English summary
Tamil Nadu has seen a good amount of rainfall activity during the last three to four days, particularly over the interior parts. During the pre-Monsoon season, the state gets to see rains on account of two reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X