ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

488 ಸಂಸದರ ಮತಗಳೊಂದಿಗೆ ನಾಯ್ಡು ಮುಂದಿನ ಉಪರಾಷ್ಟ್ರಪತಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದಹಲಿ, ಜುಲೈ 20: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಸುಲಭ ಜಯಗಳಿಸಲಿದ್ದಾರೆ. ಆಗಸ್ಟ್ 5 ರಂದು ನಡೆಯಲಿರುವ ಚುನಾವಣೆಯಲ್ಲಿ ನಾಯ್ಡು ವಿರುದ್ಧ ವಿಪಕ್ಷಗಳ ಻ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ ಕಣದಲ್ಲಿದ್ದಾರೆ.

ಒಟ್ಟು 788 ಸದಸ್ಯರಲ್ಲಿ ನಾಯ್ಡು 488 ಸದಸ್ಯರ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಇತ್ತೀಚೆಗೆ ಬಿಜೆಪಿಯ ವಿನೋದ್ ಖನ್ನಾ ಮತ್ತು ಅನಿಲ್ ಮಾಧವ್ ದವೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದರಿಂದ ಸದಸ್ಯ ಬಲ 790 ರಿಂದ 788ಕ್ಕೆ ಇಳಿಕೆಯಾಗಿತ್ತು.

With backing of 488 members, Naidu set to become next Vice President of India

ಲೋಕಸಭೆಯ 544 (ವಿನೋದ್ ಖನ್ನಾ ಸ್ಥಾನ ಖಾಲಿ) ಸ್ಥಾನಗಳಲ್ಲಿ ಎನ್ಡಿಎ ಮೈತ್ರಿಕೂಟ 337 ಸದಸ್ಯರನ್ನು ಹೊಂದಿದೆ. ಇನ್ನು ರಾಜ್ಯಸಭೆಯಲ್ಲಿ 244ರಲ್ಲಿ 77 ಸಂಸದರು ಎನ್ಡಿಎಗೆ ಸೇರಿದ್ದಾರೆ.

ಇದಲ್ಲದೆ ಎನ್ಡಿಎ ಹೊರತಾದ ಪಕ್ಷಗಳಾದ ಎಐಎಡಿಎಂಕೆ, ಟಿಆರ್ಎಸ್, ವೈಎಸ್ಆರ್ ಕಾಂಗ್ರೆಸ್ ವೆಂಕಯ್ಯ ನಾಯ್ಡುಗೆ ಬೆಂಬಲ ಸೂಚಿಸಿವೆ. ಹೀಗಾಗಿ ಲೋಕಸಭೆಯಲ್ಲಿ 54 ಹಾಗೂ ರಾಜ್ಯಸಭೆಯಲ್ಲಿ 17 ಹೆಚ್ಚುವರಿ ಮತಗಳು ಎನ್ಡಿಎ ಅಭ್ಯರ್ಥಿಗೆ ಸಿಗಲಿದೆ.

ಹೀಗೆ ಒಟ್ಟಾರೆ ಶೇಕಡಾ 60 ಮತಗಳನ್ನು ಪಡೆಯುವ ಮೂಲಕ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಲಿದ್ದಾರೆ.

English summary
Venkaiah Naidu the NDA's candidate for the vice presidential election is heading for a comfortable win. Naidu was selected by the NDA to take on the opposition's candidate Gopalkrishna Gandhi in the VP poll to be held on August 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X