ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟ್ಯಧಿಪತಿ ಶಾಸಕರ ಪಟ್ಟಿ ಕರ್ನಾಟಕಕ್ಕೆ ಅಗ್ರಸ್ಥಾನ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಅತ್ಯಧಿಕ ಸ್ಥಿತಿವಂತ ಶಾಸಕರನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನ ಗಳಿಸಿದೆ. ಒಟ್ಟಾರೆ 3,145 ಶಾಸಕರ ವಾರ್ಷಿಕ ಆದಾಯ 24.59 ಲಕ್ಷ ರು ನಷ್ಟಿದೆ. ದಕ್ಷಿಣ ವಲಯದ 711 ಶಾಸಕರ ಸರಾಸರಿ ವಾರ್ಷಿಕ ಆದಾಯ 51.99 ಲಕ್ಷ ರು ನಷ್ಟಿದೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ ಸಂಸ್ಥೆ ತಿಳಿಸಿದೆ.

ಕರ್ನಾಟಕದ ಅತ್ಯಂತ ಶ್ರೀಮಂತ ಶಾಸಕರು ಯಾರು..? ಇಲ್ಲಿದೆ ಪಟ್ಟಿ ಕರ್ನಾಟಕದ ಅತ್ಯಂತ ಶ್ರೀಮಂತ ಶಾಸಕರು ಯಾರು..? ಇಲ್ಲಿದೆ ಪಟ್ಟಿ

ಎಡಿಆರ್ ಸಂಸ್ಥೆ ನೀಡಿರುವ ವರದಿಯ ಮುಖ್ಯಾಂಶಗಳು :
* ಪೂರ್ವ ವಲಯದಲ್ಲಿ 614 ಶಾಸಕರಿದ್ದು ಅತಿ ಕಡಿಮೆ ವಾರ್ಷಿಕ ಆದಾಯ ಹೊಂದಿದ್ದಾರೆ. ವಾರ್ಷಿಕ ಆದಾಯದ ಸರಾಸರಿ 8.53 ಲಕ್ಷ ರು ಮಾತ್ರ.
* ಕರ್ನಾಟಕದ 203 ಶಾಸಕರ ಆದಾಯ ಸರಾಸರಿ 111.4 ಲಕ್ಷ ರು ನಷ್ಟಿದೆ. ಎರಡಣೆ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು, 256 ಶಾಸಕರ ಆದಾಯದ ಸರಾಸರಿ 43.4 ಲಕ್ಷ ರು. ನಷ್ಟಿದೆ.

* ಛತ್ತೀಸ್ ಗಢದ 63 ಶಾಸಕರ ಆದಾಯ ಸರಾಸರಿ 5.4 ಲಕ್ಷ ರು ಹಾಗೂ ಜಾರ್ಖಂಡ್ ನ 72 ಶಾಸಕರ ಆದಾಯದ ಸರಾಸರಿ 7.4 ಲಕ್ಷ ರು ಮಾತ್ರ.

ಶಾಸಕರ ಉದ್ಯೋಗ ಮಾಹಿತಿ

ಶಾಸಕರ ಉದ್ಯೋಗ ಮಾಹಿತಿ

ಒಟ್ಟಾರೆ, 3145 ಶಾಸಕರ ಅಸ್ತಿ ವಿವರಗಳನ್ನು ಪರಿಶೀಲಿಸಲಾಗಿದೆ. 55 ಶಾಸಕರು ತಮ್ಮ ಉದ್ಯೋಗ ಮಾಹಿತಿಯನ್ನು ನೀಡಿಲ್ಲ.
* 3145ರಲ್ಲಿ 771(ಶೇ 25) ರಷ್ಟು ಶಾಸಕರು ತಾವು ವ್ಯಾಪಾರಿಗಳು ತಮ್ಮ ವೃತ್ತಿ ವಿಭಾಗದಲ್ಲಿ ಹೇಳಿಕೊಂಡಿದ್ದಾರೆ.
* 758(ಶೇ 24) ಶಾಸಕರು ಕೃಷಿ ಅಥವಾ ರೈತ ಎಂದು ಹೇಳಿದ್ದಾರೆ.
* 393(ಶೇ 13) ರಷ್ಟು ಶಾಸಕರು ಕೃಷಿ, ತೋಟಗಾರಿಕೆ ಸಂಬಂಧಿತ ವೃತ್ತಿ ಹೊಂದಿದ್ದು ಇವರೆಲ್ಲರ ವಾರ್ಷಿಕ ಆದಾಯ ಸರಾಸರಿ 57.81 ಲಕ್ಷ ರು

ಶಾಸಕರ ರಿಯಲ್ ಎಸ್ಟೇಟ್ ವ್ಯವಹಾರ

ಶಾಸಕರ ರಿಯಲ್ ಎಸ್ಟೇಟ್ ವ್ಯವಹಾರ

ರಿಯಲ್ ಎಸ್ಟೇಟ್ ವ್ಯವಹಾರ, ನಟನೆ/ ಚಿತ್ರರಂಗದ ನಂಟು ಹೊಂದಿರುವ ಶಾಸಕರು ಶೇ 1ರಷ್ಟು ಮಾತ್ರ ಇದ್ದಾರೆ. ಆದರೆ, ಗಳಿಕೆಯಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಟಾಪ್ 4 ಹೆಚ್ಚು ಗಳಿಕೆ ಹೊಂದಿದವರಲ್ಲಿ ಇವರು ಸೇರಿದ್ದಾರೆ. ವಾರ್ಷಿಕ ಆದಾಯದ ಸರಾಸರಿ 39.69 ಲಕ್ಷ ರು ಹಾಗೂ 28.48 ಲಕ್ಷ ರು ನಷ್ಟಿದೆ.

ಗೃಹಿಣಿ, ಶಿಕ್ಷಕ, ಪಿಂಚಣಿದಾರ, ವಕೀಲ ವೃತ್ತಿ ಹೊಂದಿರುವವರು ಅತಿ ಕಡಿಮೆ ಗಳಿಕೆ ವೃತ್ತಿಪರರ ವಿಭಾಗದಲ್ಲಿದ್ದಾರೆ.

ಶಾಸಕರ ಶೈಕ್ಷಣಿಕ ಹಿನ್ನಲೆ

ಶಾಸಕರ ಶೈಕ್ಷಣಿಕ ಹಿನ್ನಲೆ

* 1052(33%) ಶಾಸಕರು ತಮ್ಮ ವಿದ್ಯಾರ್ಹತೆ ಬಗ್ಗೆ ಹೇಳಿಕೊಂಡಿದ್ದಾರೆ. 5ನೇ ತರಗತಿಯಿಂದ 12ನೇ ತರಗತಿ ತನಕ ಓದಿದವರು ವಾರ್ಷಿಕ 31.03 ಲಕ್ಷ ರು.
* 1997(63%) ಶಾಸಕರು ತಾವು ಪದವೀಧರರು ಎಂದು ಘೋಷಿಸಿಕೊಂಡಿದ್ದಾರೆ. ಇವರೆಲ್ಲರ ವಾರ್ಷಿಕ ಆದಾಯದ ಸರಾಸರಿ 20.87 ಲಕ್ಷರು.
* 139 ಶಾಸಕರು 8ನೇ ತರಗತಿ ತನಕ ಮಾತ್ರ ಓದಿದ್ದು 89.88 ಲಕ್ಷ ರು ವಾರ್ಷಿಕ ಆದಾಯ ಹೊಂದಿದ್ದಾರೆ.
* ಯಾವುದೇ ವಿದ್ಯಾರ್ಹತೆ ಇಲ್ಲದವರು ಕೂಡಾ 9.3 ಲಕ್ಷ ರು ವಾರ್ಷಿಕ ಆದಾಯ ಗಳಿಸುತ್ತಿದ್ದಾರೆ.

ವಯೋಮಿತಿ ಸರಾಸರಿ ಹೇಗಿದೆ

ವಯೋಮಿತಿ ಸರಾಸರಿ ಹೇಗಿದೆ

* 25 ರಿಂದ 50 ವರ್ಷ ದೊಳಗೆ 1402 ಶಾಸಕರಿದ್ದು, ಅವರೆಲ್ಲರ ವಾರ್ಷಿಕ ಆದಾಯ ಸರಾಸರಿ 18.25 ಲಕ್ಷ ರು.
* 1727 ಶಾಸಕರು 51 ರಿಂದ 80 ವರ್ಷ ವಯಸ್ಸಿನ ಕೆಟಗೆರಿಯಲ್ಲಿದ್ದು, ವಾರ್ಷಿಕ ಆದಾಯ ಸರಾಸರಿ 29.32 ಲಕ್ಷ ರು ಹೊಂದಿದ್ದಾರೆ.
* 11 ಶಾಸಕರು 81 ರಿಂದ 90 ವರ್ಷ ವಯಸ್ಸಿನವರಾಗಿದ್ದು, ವಾರ್ಷಿಕ87.71 ಲಕ್ಷ ರು ಗಳಿಸುತ್ತಿದ್ದಾರೆ.
* 2 ಶಾಸಕರು 90 ವರ್ಷ ಮೇಲ್ಪಟ್ಟವರಾಗಿದ್ದು, ವಾರ್ಷಿಕ 60.91 ಲಕ್ಷ ರು ಗಳಿಕೆ ಹೊಂದಿದ್ದಾರೆ.
* 258(8%) ಮಹಿಳಾ ಶಾಸಕಿಯರ ವಾರ್ಷಿಕ ಆದಾಯ ಗಳಿಕೆ ಸರಾಸರಿ 25.85 ಲಕ್ಷ ರು ನಷ್ಟಿದೆ.

English summary
The average annual income of 3,145 sitting MLAs is Rs.24.59 Lakhs. 711 MLAs in Southern Region have the highest average annual income worth Rs. 51.99 Lakhs, says a report by the Association for Democratic Reforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X