ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದು ಜಾಣತನ; ICMR

|
Google Oneindia Kannada News

ನವದೆಹಲಿ, ಜುಲೈ 21: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗುತ್ತಿದ್ದು, ಶಾಲೆಗಳನ್ನು ಪುನರಾರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ಪ್ರೌಢ ಶಾಲೆಗಳನ್ನು ತೆರೆಯುವುದಕ್ಕಿಂತ ಮೊದಲು ಪ್ರಾಥಮಿಕ ತರಗತಿಗಳನ್ನು ಆರಂಭಿಸುವುದು ಸೂಕ್ತ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಸಲಹೆ ನೀಡಿದೆ.

ಈ ಕುರಿತು ಮಾತನಾಡಿದ ಐಸಿಎಂಆರ್‌ನ ಮಹಾನಿರ್ದೇಶಕ ಡಾ. ಬಲರಾಂ ಭಾರ್ಗವ್, "ವಯಸ್ಕರಿಗಿಂತ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ. ಮಕ್ಕಳಲ್ಲಿ ಸೋಂಕು ತಗುಲಿದರೂ ಅದರ ವಿರುದ್ಧ ಹೋರಾಟ ಮಾಡಲು ಅವರ ದೇಹದಲ್ಲಿ ಪ್ರತಿಕಾಯಗಳಿವೆ. ಕೆಲವು ದೇಶಗಳು ಕೊರೊನಾ ಸೋಂಕು ಹೆಚ್ಚಾಗಿದ್ದ ಸಮಯದಲ್ಲಿ ಕೂಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಿರಲಿಲ್ಲ" ಎಂದು ಹೇಳಿದರು.

Wise To Reopen Primary Sections First Says ICMR

"ಇದೀಗ ದೇಶದಲ್ಲಿಯೂ ಶಾಲೆಗಳನ್ನು ತೆರೆಯುವ ಕುರಿತು ಆಲೋಚಿಸಬೇಕಿದೆ. ಮೊದಲು ಪ್ರಾಥಮಿಕ ಶಾಲೆಗಳನ್ನು ತೆರೆದು ಆನಂತರ ಪ್ರೌಢಶಾಲೆಗಳನ್ನು ತೆರೆಯುವುದು ಜಾಣತನ ಎನಿಸುತ್ತದೆ. ಆದರೆ ಶಾಲೆಯ ವಾಹನದ ಚಾಲಕನಿಂದ ಹಿಡಿದು ಶಿಕ್ಷಕರು, ಇನ್ನಿತರ ಬೋಧಕೇತರ ಸಿಬ್ಬಂದಿಯೂ ಲಸಿಕೆ ಪಡೆದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.

ಮಂಗಳವಾರ ಈ ಕುರಿತು ದೆಹಲಿಯ ಏಮ್ಸ್‌ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ಕೂಡ ಸಲಹೆ ನೀಡಿದ್ದರು. "ಸೋಂಕಿನ ಪ್ರಮಾಣ ಕಡಿಮೆಯಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ಆರಂಭಿಸಿದರೆ ಯಾವುದೇ ತೊಂದರೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಅಂಥ ಕಡೆಗಳಲ್ಲಿ ಶಾಲೆಗಳನ್ನು ತೆರೆಯಬೇಕಿದೆ. 5%ಗೂ ಕಡಿಮೆ ಪಾಸಿಟಿವಿಟಿ ದರವಿರುವ ಕಡೆಗಳಲ್ಲಿ ಶಾಲೆಗಳನ್ನು ತೆರೆಯಲು ಹಂತಹಂತವಾಗಿ ಯೋಜನೆಗಳನ್ನು ರೂಪಿಸುವತ್ತ ಸರ್ಕಾರ ಯೋಜನೆ ರೂಪಿಸಬೇಕಿದೆ" ಎಂದು ಹೇಳಿದ್ದರು.

ಸಮೀಕ್ಷೆ ವರದಿ; ಕರ್ನಾಟಕದಲ್ಲಿ ಶಾಲೆಯಿಂದ ಹೊರಗುಳಿದ 60 ಸಾವಿರ ಮಕ್ಕಳುಸಮೀಕ್ಷೆ ವರದಿ; ಕರ್ನಾಟಕದಲ್ಲಿ ಶಾಲೆಯಿಂದ ಹೊರಗುಳಿದ 60 ಸಾವಿರ ಮಕ್ಕಳು

ಈಗ ಶಾಲೆಗಳನ್ನು ತೆರೆದು ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಡಲೇಬೇಕಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತಿ ಮುಖ್ಯವಾದ್ದರಿಂದ ಅವರಿಗೆ ಶೈಕ್ಷಣಿಕ ಜೀವನವನ್ನು ಕಟ್ಟಿಕೊಡಬೇಕಾದ್ದು ನಮ್ಮ ಜವಾಬ್ದಾರಿಯಾಗಿದೆ. ಜೊತೆಗೆ ಇಂಟರ್‌ನೆಟ್ ಲಭ್ಯತೆಯ ಅಸಮಾನತೆಯನ್ನೂ ಕೊನೆಗಾಣಿಸಬೇಕಿದೆ ಎಂದು ಹೇಳಿದ್ದರು.

ಭಾರತದಲ್ಲಿ ಮಕ್ಕಳು ಈಗಾಗಲೇ ಕೊರೊನಾ ವೈರಸ್‌ಗೆ ಒಡ್ಡಿಕೊಂಡಿದ್ದಾರೆ ಹಾಗೂ ಅವರಲ್ಲಿ ಅನೇಕರಿಗೆ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಿದೆ. ಹೀಗಾಗಿ ಭಾರತದಲ್ಲಿ ದೊಡ್ಡವರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೆರೊ ಪಾಸಿಟಿವಿಟಿ ದರ ಹೆಚ್ಚಾಗಿದೆ ಎಂಬುದನ್ನು ಸಮೀಕ್ಷೆಗಳು ಕೂಡ ಸಾಕ್ಷೀಕರಿಸಿವೆ. ಶೀಘ್ರವೇ ಶಾಲೆಗಳನ್ನು ಪುನರಾರಂಭಿಸುವ ಕುರಿತು ಆಲೋಚಿಸಬೇಕು ಎಂದು ತಿಳಿಸಿದ್ದರು.

Recommended Video

ಜಪಾನ್ ಗೆ ಸಹಾಯ ಮಾಡದಂತೆ ಖಡಕ್ ವಾರ್ನಿಗ್ ಕೊಟ್ಟ ಚೀನಾ! | Oneindia Kannada

ಕಳೆದ ವರ್ಷ ಮಾರ್ಚ್‌ ತಿಂಗಳಿನಲ್ಲಿ ಕೊರೊನಾ ಕಾರಣವಾಗಿ ಮೊದಲ ಬಾರಿ ದೇಶಾದ್ಯಂತ ಲಾಕ್‌ಡೌನ್ ಹೇರಿದ ಸಂದರ್ಭ ಶಾಲೆಗಳನ್ನು ಮುಚ್ಚಲಾಗಿತ್ತು. ಆನಂತರ ಕೊರೊನಾ ಹರಡುವಿಕೆ ತಗ್ಗಿಸಲು, ಶಾಲೆಗಳನ್ನು ತೆರೆಯದೇ ಆನ್‌ಲೈನ್ ಪರ್ಯಾಯ ಆಯ್ಕೆಯಲ್ಲಿ ಶಿಕ್ಷಣ ನೀಡಲು ಆರಂಭಿಸಲಾಯಿತು.

English summary
ICMR on tuesday suggested to reopen primary schools first before secondary schools in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X