ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋದಿಂದ ಅಮೆರಿಕದ ದೊಡ್ಡ ಕಂಪನಿ ಖರೀದಿ

By Srinath
|
Google Oneindia Kannada News

Wipro acquires US-based Opus CMC mortgage bpo for Rs 465 crore
ಬೆಂಗಳೂರು, ಡಿ.3: ಕರ್ನಾಟಕದ ಹೆಮ್ಮೆಯ ಸಾಫ್ಟ್ ವೇರ್ ಕಂಪನಿಯಾದ ವಿಪ್ರೋ ಸಂಸ್ಥೆಯು ಅಮೆರಿಕದ ಬಹುದೊಡ್ಡ ಕಂಪನಿಯನ್ನು ಖರೀದಿಸಿದೆ.

ಅಮೆರಿಕದ ಅಡಮಾನ ಸಾಲ ಕಂಪನಿಯಾದ Opus CMC (Opus Capital Markets Consultants) ಅನ್ನು ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತು ಕಂಪನಿ ವಿಪ್ರೋ ಸಂಸ್ಥೆಯು 465 ಕೋಟಿ ರೂಪಾಯಿಗೆ (75 ದಶಲಕ್ಷ ಡಾಲರ್) ಖರೀದಿಸಿದೆ.
( ನೆದರ್ ಲ್ಯಾಂಡ್ಸ್ ನಲ್ಲೂ ಆರಂಭವಾಯ್ತು ಇನ್ಫಿ ಬಿಪಿಒ! )

ಉತ್ತರ ಅಮೆರಿಕದಲ್ಲಿ ತನ್ನ ಕಾರ್ಯಾಚರಣೆ ಜಾಲ ವಿಸ್ತರಿಸುವ ಉದ್ದೇಶದಿಂದ 'ಓಪಸ್ ಸಿಎಂಸಿ'ಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ವಿಪ್ರೊ ತಿಳಿಸಿದೆ. ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (Q4: ಜನವರಿ-ಮಾರ್ಚ್) ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಕಂಪನಿಯ ಗೃಹ ಸಾಲಗಳಿಗೆ ಸಂಬಂಧಿಸಿದ ಐಟಿ ಪರಿಹಾರ ಮತ್ತು ಹೊರಗುತ್ತಿಗೆ ಉದ್ಯಮ ಬಲಪಡಿಸುವುದು ಈ ಸ್ವಾಧೀನದ ಉದ್ದೇಶ ಎಂದು ವಿಪ್ರೊ ತಿಳಿಸಿದೆ. 'ಓಪಸ್ ಸಿಎಂಸಿ'ಯಲ್ಲಿ ಪ್ರಸ್ತುತ 490 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಅಮೆರಿಕದ ಐದು ಕಡೆ ಕಾರ್ಯಾಚರಣೆ ನಡೆಸುತ್ತಿದೆ. ಅಮೆರಿಕದ ಇಲಿನಾಯ್ ನಲ್ಲಿರುವ Opus CMC ಕಂಪನಿಯು 2005ರಲ್ಲಿ ಸ್ಥಾಪನೆಗೊಂಡಿದೆ.

Opus CMC ಖರೀದಿಯಿಂದ ವಿಪ್ರೋದ ಹರಿವು ವಿಸ್ತಾರಗೊಳ್ಳಲಿದೆ. ಬಿಪಿಒ ವಲಯದಲ್ಲಿ ಇದು ನಿಜಕ್ಕೂ ಸವಾಲಿನದ್ದಾಗಿದೆ ಎಂದು ವಿಪ್ರೋ ಬಿಪಿಒ ಮುಖ್ಯಸ್ಥ ಮನೋಜ್ ಪುಂಜಾ ತಿಳಿಸಿದ್ದಾರೆ.

English summary
Wipro has signed a definitive agreement to acquire Opus CMC (Opus Capital Markets Consultants), a US-based mortgage, due diligence and risk management service provider for Rs 465 crore ($75 million) that includes a deferred earn-out component. The acquisition will strengthen Wipro's mortgage solutions and outsourcing business and complement its existing offerings in mortgage origination, servicing and secondary market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X