ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಗಡಿ ಸಂಘರ್ಷ: ಮೋದಿ ಸಂಪುಟದ ಆಯಕಟ್ಟಿನ ಸ್ಥಾನಕ್ಕೆ ಮೇಜರ್ ಸರ್ಜರಿ?

|
Google Oneindia Kannada News

ಚೀನಾ, ಭಾರತದ ಗಡಿ ಪ್ರದೇಶವನ್ನು ಆಕ್ರಮಿಸಿರುವುದಕ್ಕೆ ಹಲವು ಸಾಕ್ಷ್ಯ ಚಿತ್ರಗಳು ಲಭ್ಯವಾಗಿವೆ. ಗಾಲ್ವಾನ್ ನದಿ ಕಣಿವೆಯಲ್ಲಿ ಭಾರತೀಯ ಪ್ರದೇಶಕ್ಕೆ ಚೀನೀ ಸೈನಿಕರು ನುಗ್ಗಿರುವುದುಕ್ಕೆ ಪ್ರಬಲ ಸಾಕ್ಷಿಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ.

Recommended Video

Corona updates,Mysore : ಹೆಚ್ಚಾದ ಸೋಂಕು, ಮೈಸೂರಿನಲ್ಲಿ ಬದಲಾದ ಕರ್ಫ್ಯೂ ಸಮಯ | Oneindia Kannada

ಈ ಚಿತ್ರಗಳನ್ನು ಬಲವಾದ ಸಾಕ್ಷಿಯೆಂದು ನಂಬುವುದಾದರೆ, ಮೋದಿ ಸರಕಾರದ ಪಾಲಿಗೆ ತೀರಾ ಮುಖಭಂಗದ ವಿದ್ಯಮಾನವಿದು. ಈ ಸಂದರ್ಭದಲ್ಲಿ,ಕೇಂದ್ರ ಸಂಪುಟದಲ್ಲಿ ಹಲವು ತುರ್ತು ಬದಲಾವಣೆಗಳು ಆಗಲಿವೆ ಎನ್ನುವ ಮಾತು ಕೇಳಿ ಬರುತ್ತಿವೆ.

ಚಿತ್ರಸಾಕ್ಷ್ಯ: ಭಾರತೀಯ ಗಡಿ ಪ್ರದೇಶದಲ್ಲಿ ಚೀನಾ ಆಡಿದ್ದೇ ಆಟ!ಚಿತ್ರಸಾಕ್ಷ್ಯ: ಭಾರತೀಯ ಗಡಿ ಪ್ರದೇಶದಲ್ಲಿ ಚೀನಾ ಆಡಿದ್ದೇ ಆಟ!

ಜೆ.ಪಿ.ನಡ್ಡಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಮತ್ತು ಕೋವಿಡ್-19 ಮಾರ್ಗಸೂಚಿಯಲ್ಲಿ ಸಡಿಲತೆ ಬಂದ ನಂತರ, ರಾಜಕೀಯ ಮತ್ತೆ ಗರಿಗೆದರುವ ಸಾಧ್ಯತೆಯಿಲ್ಲದಿಲ್ಲ ಎನ್ನುವುದು ಬಿಜೆಪಿ ಪಡಶಾಲೆಯಲ್ಲಿ ಕೇಳಿಬರುತ್ತಿರುವ ಮಾತು.

ಗಾಲ್ವಾನ್ ಸಂಘರ್ಷ: ಚೀನಾ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿಗಾಲ್ವಾನ್ ಸಂಘರ್ಷ: ಚೀನಾ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿ

ಕೇಂದ್ರ ಸಚಿವ ಸಂಪುಟದಲ್ಲಿ ಹಲವು ಮಹತ್ವದ ಖಾತೆ ಬದಲಾವಣೆಯಾಗುವ ಸಾಧ್ಯತೆಯಿದೆ ಎನ್ನುವ ಸುದ್ದಿಯ ನಡುವೆ, ಹಾಲೀ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್, ತಮ್ಮ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದಾರೆ ಎನ್ನುವ ಮಾತೂ ಚಾಲ್ತಿಯಲ್ಲಿದೆ ಎನ್ನುವುದು ಗಮನಿಸಬೇಕಾದ ವಿಚಾರ.

ಗಾಲ್ವಾನ್ ಕಣಿವೆ ಬಳಿ ಭಾರತದ ವ್ಯಾಪ್ತಿಗೆ ಸೇರಿದ 423 ಮೀಟರ್ ಪ್ರದೇಶ

ಗಾಲ್ವಾನ್ ಕಣಿವೆ ಬಳಿ ಭಾರತದ ವ್ಯಾಪ್ತಿಗೆ ಸೇರಿದ 423 ಮೀಟರ್ ಪ್ರದೇಶ

ಗಾಲ್ವಾನ್ ಕಣಿವೆ ಬಳಿ ಭಾರತದ ವ್ಯಾಪ್ತಿಗೆ ಸೇರಿದ 423 ಮೀಟರ್ ಪ್ರದೇಶದೊಳಗೆ ಚೀನಾ ಸೇನೆಯು ಪ್ರವೇಶ ಮಾಡಿರುವುದು ಉಪಗ್ರಹದಲ್ಲಿ ಸೆರೆಯಾದ ಚಿತ್ರಗಳಲ್ಲಿ ಗೋಚರಿಸುತ್ತಿದೆ. ಇದರ ಜೊತೆಗೆ, ಚೀನಾದ ಜೊತೆಗೆ Aap ನಿರ್ಬಂಧಿಸುವ ಮೂಲಕ ವಾಣಿಜ್ಯ ವ್ಯವಹಾರಕ್ಕೂ ನಿಷೇಧ ಹೇರಿರುವುದರಿಂದ, ಎರಡು ದೇಶಗಳ ನಡುವಿನ ಉದ್ವಿಗ್ನತೆ ಇನ್ನೊಂದು ಮಜಲಿಗೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಹೀಗಿರುವಾಗ, ಹಾಲೀ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮರ್ಥರೇ ಎನ್ನುವ ಪ್ರಶ್ನೆ ಎದುರಾಗಿದೆ.

ಮೋದಿ - 2 ಸರಕಾರದ ಎರಡನೇ ಅವಧಿಯಲ್ಲಿ ಅಮಿತ್ ಶಾ, ಗೃಹ ಸಚಿವ

ಮೋದಿ - 2 ಸರಕಾರದ ಎರಡನೇ ಅವಧಿಯಲ್ಲಿ ಅಮಿತ್ ಶಾ, ಗೃಹ ಸಚಿವ

ನರೇಂದ್ರ ಮೋದಿ - 1 ಸರಕಾರದಲ್ಲಿ ಅಮಿತ್ ಶಾ, ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿದ್ದವರು. ಹಿಂದೆ, ಕಾಂಗ್ರೆಸ್ ಹೈಕಮಾಂಡ್ ಎಷ್ಟು ಪ್ರಭಾವಿಯಾಗಿತ್ತೋ, ಅದೇ ದಾರಿಯಲ್ಲಿ ಪಕ್ಷವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದವರು. ಮೋದಿ - 2 ಸರಕಾರದ ಅವಧಿಯಲ್ಲಿ ಅಮಿತ್ ಶಾ, ಗೃಹ ಸಚಿವರಾಗಿದ್ದಾರೆ.

ಜಮ್ಮು, ಕಾಶ್ಮೀರ, ತಲಾಖ್, ಪೌರತ್ವ

ಜಮ್ಮು, ಕಾಶ್ಮೀರ, ತಲಾಖ್, ಪೌರತ್ವ

ಅಮಿತ್ ಶಾ, ಗೃಹ ಸಚಿವರಾದ ನಂತರ ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಂಡರು. ಅದು, ಜಮ್ಮು, ಕಾಶ್ಮೀರ, ತಲಾಖ್, ಪೌರತ್ವ ವಿಚಾರದಲ್ಲಿ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದಾಗಿ, ಬಿಜೆಪಿ, ಈ ಆಯಕಟ್ಟಿನ ಸನ್ನಿವೇಶದಲ್ಲಿ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ಅವರಿಗೆ ವಹಿಸಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಅಮಿತ್ ಶಾ ದೇಶದ ರಕ್ಷಣಾ ಸಚಿವರಾಗಲಿದ್ದಾರೆ?

ಅಮಿತ್ ಶಾ ದೇಶದ ರಕ್ಷಣಾ ಸಚಿವರಾಗಲಿದ್ದಾರೆ?

ಕೆಲವೊಂದು ಮೂಲಗಳ ಪ್ರಕಾರ, ಅಮಿತ್ ಶಾ ದೇಶದ ರಕ್ಷಣಾ ಸಚಿವರಾಗಲಿದ್ದಾರೆ. ಬಿಜೆಪಿ ವಲಯದಲ್ಲಿ ಹರಿದಾಡುವ ಸುದ್ದಿಯನ್ನು ನಂಬುವುದೇ ಆದಲ್ಲಿ, ಅಮಿತ್ ಶಾ, ದೇಶದ ಹೊಸ ರಕ್ಷಣಾ ಸಚಿವರಾಗುವ ಸಾಧ್ಯತೆ ಹೆಚ್ಚು. ಅಮಿತ್ ಶಾ, ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಅಜಿತ್ ಧೋವಲ್, ಈ ಬಗ್ಗೆ ಏನು ಅಭಿಪ್ರಾಯವನ್ನು ಹೊಂದಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಬೇಕಿದೆ.

English summary
Will Union Home Minister Amit Shah Replace Rajnath Singh As The Next Defence Minister?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X