ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 26ರಿಂದ ಭಾರತದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ನಿಷೇಧ?

|
Google Oneindia Kannada News

ನವದೆಹಲಿ, ಮೇ 25: ನೂತನ ಮಧ್ಯವರ್ತಿ ಮಾರ್ಗಸೂಚಿಯನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಅನುಸರಿಸಿವೆಯೇ ಎಂದು ಸರ್ಕಾರ ಪರಿಶೀಲಿಸಲಿದೆ.

Recommended Video

Facebook, Instagram, Twitter ಗೆ ಎಚ್ಚರಿಕೆ ನೀಡಿದ Modi ಸರ್ಕಾರ | Oneindia Kannada

ಒಂದೊಮ್ಮೆ ಆ ವರದಿಯಲ್ಲಿ ಯಾವುದೇ ಒಂದು ಸಾಮಾಜಿಕ ಮಾಧ್ಯಮವು ನಿಯಮಗಳನ್ನು ಅನುಸರಿಸಿಲ್ಲ ಎಂದು ತಿಳಿದುಬಂದರೆ ಆ ಮಾಧ್ಯಮದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಸರ್ಕಾರಗಳಿಗೆ ವರದಾನವಾಗುತ್ತಿದೆ ಫೇಸ್‌ಬುಕ್‌ ನೀತಿಯಲ್ಲಿನ ಲೋಪಸರ್ಕಾರಗಳಿಗೆ ವರದಾನವಾಗುತ್ತಿದೆ ಫೇಸ್‌ಬುಕ್‌ ನೀತಿಯಲ್ಲಿನ ಲೋಪ

ಈ ಮಾರ್ಗಸೂಚಿಗಳನ್ನು ಪೂರೈಸುವ ಗಡುವು ಮೇ 25 ರಂದು ಅಂದರೆ ಇಂದು ಕೊನೆಗೊಳ್ಳುತ್ತದೆ. ಇನ್ನು ಯಾವ ಸಾಮಾಜಿಕ ಮಾಧ್ಯಮಗಳು ನಿಯಮವನ್ನು ಪಾಲಿಸಿಲ್ಲ, ಮುಂದಿನ ಕ್ರಮಗಳೇನು ಎಂಬುದು ತಿಳಿದುಬರಬೇಕಿದೆ.

Will Twitter, Instagram, Facebook Get Banned in India From May 26 Due To New Rules?

ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಹೇಳಿದೆ ಆದರೆ ಭಾರತದಲ್ಲಿ ಈ ಕಂಪನಿಗಳಿಗೆ ನಿಷೇಧ ಹೇರುವ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಭಾರತೀಯ ಸಂಸ್ಥೆ 'ಕೂ' ಹೊರತುಪಡಿಸಿ, ಇತರ ಯಾವುದೇ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು ಹೊಸ ಐಟಿ ನಿಯಮಗಳನ್ನು ಪಾಲಿಸಿಲ್ಲ ಎಂದು ಮೂಲಗಳು ತಿಳಿಸಿದೆ.

ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯ ಅನುಷ್ಠಾನವಿಲ್ಲದೆ, ಯಾವುದೇ ತಪಾಸಣೆ ಮತ್ತು ಬಾಕಿ ಇರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ನಿಯಮಗಳು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿದ್ದರೂ, ನೀತಿ ಸುರಕ್ಷತೆಗಳಿಲ್ಲದೆ ನಾಗರಿಕರ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ಅವರು ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಲಾಗಿದೆ.

ಈ ನಿಯಮಗಳು ಮೇ 26, 2021 ರಿಂದ ಜಾರಿಗೆ ಬರಲಿವೆ. ಯಾವುದೇ ಸಾಮಾಜಿಕ ಮಾಧ್ಯಮ ಕಂಪನಿಗಳು ಅವನ್ನು ಪಾಲಿಸದಿರುವುದು ಕಂಡುಬಂದಲ್ಲಿ , ಅವರು ತಮ್ಮ ಸ್ಥಾನಮಾನ ಮತ್ತು ರಕ್ಷಣೆಯನ್ನು ಕಳೆದುಕೊಳ್ಳಬಹುದು.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳು) ಮತ್ತು ಸರ್ಕಾರವು 'ಮಧ್ಯವರ್ತಿಗಳು' ಎಂದು ವರ್ಗೀಕರಿಸಿದ ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ, ಹೊಸ ನಿಯಮಗಳನ್ನು ಅನುಸರಿಸಲು ಮೂರು ತಿಂಗಳುಗಳಿವೆ ಎಂದು 2021 ಫೆಬ್ರವರಿ 25 ರಂದು ಸೂಚನೆ ನೀಡಲಾಯಿತು.

ಪ್ರಮುಖ ಸಾಮಾಜಿಕ ಮಾಧ್ಯಮ 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಭೌತಿಕ ಸಂಪರ್ಕ ವಿಳಾಸವನ್ನು ತನ್ನ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಥವಾ ಎರಡರಲ್ಲೂ ಪ್ರಕಟಿಸುವಂತೆ ಆದೇಶಿಸಿದ್ದಾರೆ.

English summary
Social media platforms Facebook, Twitter and Instagram may face a ban in India if they do not comply with the new Intermediary Guidelines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X