• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಏರಿಕೆ; ದೇಶಕ್ಕೆ ಮೂರನೇ ಲಸಿಕೆ ಬರುವುದು ಯಾವಾಗ?

|

ನವದೆಹಲಿ, ಏಪ್ರಿಲ್ 22: ದೇಶದಲ್ಲಿ ಈಗಾಗಲೇ ಎರಡು ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದ್ದು, ಈಚೆಗೆ ಮೂರನೇ ಲಸಿಕೆಗೆ ಅನುಮೋದನೆ ನೀಡಲಾಗಿದೆ.

ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ ನಂತರ ರಷ್ಯಾದ ಸ್ಫುಟ್ನಿಕ್ ವಿ ಮೂರನೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಲಸಿಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಇದೀಗ ಮೇ ತಿಂಗಳ ಕೊನೆಗೆ ಭಾರತದಲ್ಲಿ ಸ್ಫುಟ್ನಿಕ್ ವಿ ಲಸಿಕೆಗಳು ಲಭ್ಯವಾಗಲಿವೆ ಎಂದು ಲಸಿಕೆಯ ಸ್ಥಳೀಯ ವಿತರಕ ಸಂಸ್ಥೆ ಡಾ. ರೆಡ್ಡೀಸ್ ಲ್ಯಾಬೊರೇಟರಿ ಮಾಹಿತಿ ನೀಡಿದೆ.

ಭಾರತದಲ್ಲಿ ಮೂರನೇ ಲಸಿಕೆಗೆ ಸಿಕ್ಕಿತು ಅನುಮೋದನೆಭಾರತದಲ್ಲಿ ಮೂರನೇ ಲಸಿಕೆಗೆ ಸಿಕ್ಕಿತು ಅನುಮೋದನೆ

"ಮೇ ವೇಳೆಗೆ ಹೆಚ್ಚಿನ ಲಸಿಕೆಗಳನ್ನು ರಫ್ತು ಮಾಡಿಕೊಳ್ಳುವ ಭರವಸೆಯಿದೆ. ರಷ್ಯಾ ಮೂಲದ ಈ ಲಸಿಕೆಯನ್ನು ಕೆಲವೇ ತಿಂಗಳುಗಳಲ್ಲಿ ಭಾರತದಲ್ಲಿಯೂ ಉತ್ಪಾದಿಸಲಾಗುವುದು" ಎಂದು ಡಾ. ರೆಡ್ಡೀಸ್ ವಕ್ತಾರರು ತಿಳಿಸಿದ್ದಾರೆ.

ಭಾರತದಲ್ಲಿ ಗುರುವಾರ ವಿಶ್ವದ ಅತಿ ಹೆಚ್ಚಿನ ದಿನನಿತ್ಯದ ಕೊರೊನಾ ಪ್ರಕರಣ ದಾಖಲಾಗಿದ್ದು, 314,835 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಾಗಿದೆ.

ಜನವರಿ 16ರಿಂದ ಭಾರತದಲ್ಲಿ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೊರೊನಾ ಸೋಂಕಿನಿಂದ ಮರಣ ಪ್ರಮಾಣವೂ ಏರಿಕೆಯಾಗುತ್ತಿದ್ದು, ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಾಗಿದೆ.

English summary
India will start receiving Russia's Sputnik V Covid-19 vaccine by end-May, its local distributor Dr. Reddy's Laboratories says on thursday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X