ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಷಿಯಲ್ ಮೀಡಿಯಾ ಕುಸ್ತಿ : ಜಟ್ಟಿ ನರೇಂದ್ರ ಮೋದಿ Vs ಗಟ್ಟಿಗಿತ್ತಿ ರಮ್ಯಾ

By Prasad
|
Google Oneindia Kannada News

2014ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 'ನರೇಂದ್ರ ಮೋದಿ' ಬ್ರಾಂಡ್ ಬಿಲ್ಡ್ ಮಾಡುವಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಜಯ ಗಳಿಸಿಕೊಡುವಲ್ಲಿ ಬಿಜೆಪಿಯ ಸೋಷಿಯಲ್ ಮೀಡಿಯಾ ಟೀಮ್ ಭರ್ಜರಿ ಕೆಲಸ ಮಾಡಿತ್ತು. 272ರ ಮಾಯಾಸಂಖ್ಯೆಯನ್ನು ಬೆನ್ನತ್ತಿದ್ದ ಎನ್ಡಿಎ ಗಳಿಸಿದ್ದು 336 ಸೀಟುಗಳನ್ನು. ಸೋಷಿಯಲ್ ಮೀಡಿಯಾ ಶಕ್ತಿ ಏನೆಂಬುದನ್ನು ಕಾಂಗ್ರೆಸ್ ಧುರೀಣರು ಕೂಡ ಒಪ್ಪಿಕೊಂಡಿದ್ದಾರೆ.

ಇಂದಿನ ಡಿಜಿಟಲ್ ಮೀಡಿಯಾ ಜಮಾನಾದಲ್ಲಿ ರಾಜಕೀಯ ಯುದ್ಧಗಳು ಅಷ್ಟೇ ಏಕೆ, ಚುನಾವಣೆಗಳು ಕೂಡ ನಡೆಯುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ. ಜಾಲತಾಣವನ್ನು ಮತ್ತು ಟ್ವಿಟ್ಟರನ್ನು ಅತ್ಯಂತ ಪ್ರಭಾವಶಾಲಿಯಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದವನು ಚುನಾವಣೆಯಲ್ಲಿ ಕೂಡ ಜಯಶಾಲಿಯಾಗುತ್ತಾನೆ ಎಂಬುದು ಕಳೆದ ಲೋಕಸಭೆ ಚುನಾವಣೆಯಲ್ಲಿ ಸಾಬೀತಾಗಿದೆ.[ರಮ್ಯಾಗೆ ದೊಡ್ಡ ಜವಾಬ್ದಾರಿ ನೀಡಿದ ರಾಹುಲ್ ಗಾಂಧಿ!]

ಇಂದು 'ಸೋಷಿಯಲ್ ಮೀಡಿಯಾ ಪ್ರೈಮ್ ಮಿನಿಸ್ಟರ್' ಎಂದು ಕರೆಯುವಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣವನ್ನು ಪ್ರತಿನಿತ್ಯ ಬಳಸುವ ನರೇಂದ್ರ ಮೋದಿಯವರು, 2014ರ ಚುನಾವಣೆಗೂ ಮೊದಲು ಸೋಷಿಯಲ್ ಮೀಡಿಯಾ ಮೂಲಕ ದೇಶದ ಮೂಲೆಮೂಲೆಗೂ ತಲುಪಿದ್ದು ಈಗ ಇತಿಹಾಸ. ಇಂದಿಗೂ ಸಾಮಾಜಿಕ ತಾಣವನ್ನು ಅಷ್ಟೇ ಪರಿಣಾಮಕಾರಿಯಾಗಿ ಬಳಸುತ್ತಿರುವುದು ಅದರಲ್ಲಿರುವ ಶಕ್ತಿಗೆ ಸಾಕ್ಷಿ.

ನರೇಂದ್ರ ಮೋದಿಯವರು ಸೋಷಿಯಲ್ ಮೀಡಿಯಾದ ನರನಾಡಿಗಳನ್ನು ಬಲ್ಲಂಥ ಸಮರ್ಥ ಟೆಕ್ಕಿಗಳ, ನಿಪುಣ ಜಾಹೀರಾತು ತಜ್ಞರ, ಮಾಧ್ಯಮ ನಿರ್ವಹಣೆಯನ್ನು ನೋಡಿಕೊಳ್ಳಲು ಪಿಯೂಷ್ ಗೋಯೆಲ್ ರಂಥ ರಾಜಕಾರಣಿಗಳ ತಂಡವನ್ನು ಕಟ್ಟಿದರು. 'ಅಬ್ ಕಿ ಬಾರ್ ಮೋದಿ ಸರ್ಕಾರ್' ಘೋಷಣೆ ಇಂಟರ್ನೆಟ್, ರೇಡಿಯೋ, ಟಿವಿಗಳಲ್ಲೆಲ್ಲ ಮೊಳಗಿತು. ಕೇವಲ ಗುಜರಾತ್ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡಿದ್ದ ನರೇಂದ್ರ ಮೋದಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುತ್ತಿದ್ದಾರೆ. [ರಮ್ಯಾ ಮೇಡಂ ಈಗ ಸೋಶಿಯಲ್ ಮೀಡಿಯಾ ಹೆಡ್: ಟ್ವಿಟ್ಟಿಗರು ಏನಂತಾರೆ?]

ಮಿಷನ್ 272 ಎಂಬ ವಿನೂತನ ಪ್ರಯೋಗ

ಮಿಷನ್ 272 ಎಂಬ ವಿನೂತನ ಪ್ರಯೋಗ

272 ಸ್ಥಾನಗಳನ್ನು ತಲುಪಲೇಬೇಕು ಎಂಬ ಗುರಿಯೊಂದಿಗೆ ಮಿಷನ್ 272+ ಎಂಬ ವಿನೂತನ ಕಾರ್ಯಕ್ರಮವನ್ನು ಜಾಲತಾಣದಲ್ಲಿ ಮೋದಿ ತಂಡ ಆರಂಭಿಸಿತ್ತು. ಇದರ ಮೂಲಕ ಕೋಟಿ ಕೋಟಿ ಬಿಜೆಪಿ ಬೆಂಬಲಿಗರ ತಂಡ ಕಟ್ಟಲಾಯಿತು. ಇದರ ಮೂಲಕ ಯುವಜನತೆಯ ಹೃದಯಕ್ಕೇ ಮೋದಿ ಲಗ್ಗೆ ಹಾಕಿದರು. ಜಿಲ್ಲೆಜಿಲ್ಲೆಗಳಲ್ಲಿ, ತಾಲೂಕೂತಾಲೂಕುಗಳಲ್ಲಿ ಮೋದಿ ಬ್ರಿಗೇಡ್ ಸಿದ್ಧವಾಯಿತು. [ಚುನಾವಣಾ ಅಭಿಯಾನ, ಮಿಷನ್ 272+ಗೆ ಪ್ರಶಸ್ತಿ]

ರಮ್ಯಾ ಮೇಲೆ ಜವಾಬ್ದಾರಿ ಹೊರಿಸಿದ ರಾಹುಲ್

ರಮ್ಯಾ ಮೇಲೆ ಜವಾಬ್ದಾರಿ ಹೊರಿಸಿದ ರಾಹುಲ್

ಇಂಥ ಸಮಯದಲ್ಲಿ, ತಮ್ಮ ಪ್ರತಿಭೆಯಿಂದ ಕನ್ನಡ ಚಲನಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ, ಒಂದು ಬಾರಿ ಅದೇ ಜನಪ್ರಿಯತೆಯಿಂದ ಮಂಡ್ಯದಿಂದ ಲೋಕಸಭೆಗೆ ಆಯ್ಕೆಯಾದ, ಮರುಚುನಾವಣೆಯಲ್ಲೇ ಸೋಲುಕಂಡ, ಕೆಲ ವರ್ಷಗಳ ಕಾಲ ಸಕ್ರಿಯ ರಾಜಕಾರಣದಿಂದಲೇ ಗಾವುದ ದೂರವಿದ್ದ, ಪಕ್ಷವನ್ನೇ ಬಿಡುತ್ತಾರೆಂಬ ಗಾಳಿಸುದ್ದಿಗೆ ಗ್ರಾಸವಾಗಿದ್ದ ರಮ್ಯಾ ಅಕಾ ದಿವ್ಯಾ ಸ್ಪಂದನಾರನ್ನು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಹೆಡ್ ಆಗಿ ರಾಹುಲ್ ಗಾಂಧಿ ನಿಯೋಜಿಸಿದ್ದಾರೆ.

ಇದ್ದಕ್ಕಿದ್ದಂತೆ ಮಾಯವಾಗುತ್ತ, ದಿಢೀರನೆ ಪ್ರತ್ಯಕ್ಷರಾಗುತ್ತ

ಇದ್ದಕ್ಕಿದ್ದಂತೆ ಮಾಯವಾಗುತ್ತ, ದಿಢೀರನೆ ಪ್ರತ್ಯಕ್ಷರಾಗುತ್ತ

ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಅವರು ಸಕ್ರಿಯರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಸಮಯ ಸಿಕ್ಕಾಗಲೆಲ್ಲ ರಾಹುಲ್ ಗಾಂಧಿಯವರನ್ನು ವಾಚಾಮಗೋಚರವಾಗಿ ಹೊಗಳುತ್ತ, ನರೇಂದ್ರ ಮೋದಿಯನ್ನು ಅಷ್ಟೇ ತೀವ್ರತೆಯಿಂದ ತೆಗಳುತ್ತ, ಇದ್ದಕ್ಕಿದ್ದಂತೆ ಮಾಯವಾಗುತ್ತ, ದಿಢೀರನೆ ಪ್ರತ್ಯಕ್ಷರಾಗುತ್ತ ಟ್ವಿಟ್ಟರಿನಲ್ಲಿ ರಮ್ಯಾ ಅವರು (482 ಸಾವಿರ ಹಿಂಬಾಲಕರು) ತಮ್ಮ ಪ್ರಸ್ತುತತೆಯನ್ನು ಇದ್ದರೂ ಇಲ್ಲದಿದ್ದರೂ ಸಾರುತ್ತಲೇ ಇರುತ್ತಾರೆ.

ಚಿಗರೆ ಕಂಗಳ ಚೆಲುವೆ ರಮ್ಯಾ ಮಾತಿನ ಚತುರೆ

ಚಿಗರೆ ಕಂಗಳ ಚೆಲುವೆ ರಮ್ಯಾ ಮಾತಿನ ಚತುರೆ

ಚಿಗರೆ ಕಂಗಳ ಚೆಲುವೆ ರಮ್ಯಾ ಒಳ್ಳೆ ಮಾತುಗಾರ್ತಿ, ಪಾಕಿಸ್ತಾನದಲ್ಲೂ ಮಾತಿನ ಚಾತುರ್ಯವನ್ನು ತೋರಿಬಂದಿದ್ದಾರೆ. ಇತ್ತೀಚೆಗೆ ಮಂಡ್ಯದಲ್ಲಿ ಮೋದಿಯವರನ್ನು ತೆಗಳಲು ಹೋಗಿ ಅಲ್ಲಿನ ಜನರಿಂದಲೇ ಟ್ರೋಲ್ ಗೊಳಗಾಗಿದ್ದನ್ನು ಬಿಟ್ಟರೆ, ತಮ್ಮ ಮಾತುಗಾರಿಕೆಯಿಂದ ಚುಂಬಕದಂತೆ ಜನರನ್ನು ಸೆಳೆಯುವ ಶಕ್ತಿ ಅವರಲ್ಲಿದೆ. ಆದರೆ, ಅವರನ್ನು ಸೋಷಿಯಲ್ ಮೀಡಿಯಾ ಹೆಡ್ ಆಗಿ ಘೋಷಣೆ ಮಾಡಿದ ನಂತರ ಅವರು ಟ್ವಿಟ್ಟರಲ್ಲಿ ಕಾಣಿಸಿಕೊಂಡಿಲ್ಲ. [ಮಂಡ್ಯದ ಮಾರುಕಟ್ಟೆಯಲ್ಲಿ ಟ್ರೋಲ್ ಗೊಳಗಾದ ರಮ್ಯಾ!]

ದುಡುಕಿದರೆ ರಾಹುಲ್ ಗಾಂಧಿ?

ದುಡುಕಿದರೆ ರಾಹುಲ್ ಗಾಂಧಿ?

ರಮ್ಯಾ ಅವರು ಸೋಷಿಯಲ್ ಮೀಡಿಯಾ ಮುಖ್ಯಸ್ಥರಾಗಿ ವಹಿಸಿರುವ ಭಾರೀ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಲಿದ್ದಾರೆ ಎಂಬುದು ಕಾಲವೇ ಉತ್ತರಿಸಲಿದೆ. ಅವರನ್ನು ಅಂಡರ್ ಎಸ್ಟಿಮೇಟ್ ಮಾಡಲು ಈಗಲೇ ಸಾಧ್ಯವಿಲ್ಲ. ಆದರೆ, ಇದು ನಿಜಕ್ಕೂ ಅಚ್ಚರಿಯ ಬೆಳವಣಿಗೆ. ರಾಹುಲ್ ಗಾಂಧಿಯವರಿಗೆ ಬೇರೆ ತಜ್ಞರು ಕಾಣಿಸಲಿಲ್ಲವೆ? ಅಥವಾ ದಿಢೀರನೆ ರಮ್ಯಾ ಅವರಿಗೆ ಈ ಜವಾಬ್ದಾರಿ ಹೊರಿಸಿ ರಾಹುಲ್ ಗಾಂಧಿಯವರು ದುಡುಕಿದರೆ ಎಂಬ ಪ್ರಶ್ನೆಯೂ ಏಳುತ್ತದೆ.

ಗೆದ್ದರೆ ರಾಷ್ಟ್ರಮಟ್ಟದಲ್ಲಿ ಮಿಂಚಲಿದ್ದಾರೆ ರಮ್ಯಾ

ಗೆದ್ದರೆ ರಾಷ್ಟ್ರಮಟ್ಟದಲ್ಲಿ ಮಿಂಚಲಿದ್ದಾರೆ ರಮ್ಯಾ

ಲೋಕಸಭೆ ಚುನಾವಣೆ ಇನ್ನೂ ಎರಡು ವರ್ಷಗಳಿರುವಂತೆ ರಮ್ಯಾ ಅವರ ಹೆಗಲ ಮೇಲೆ ಭಾರೀ ಹೊರೆ ಹೊರಿಸಲಾಗಿದೆ. ಅವರು ಇದನ್ನು ಹೇಗೆ ನಿಭಾಯಿಸಲಿದ್ದಾರೆ, ಏನೇನು ವಿನೂತನ ಪ್ರಯೋಗಗಳನ್ನು ಮಾಡಲಿದ್ದಾರೆ, ರಾಹುಲ್ ಬ್ರಾಂಡ್ ಬಿಲ್ಡ್ ಮಾಡಲು ಏನೇನು ಸಾಹಸ ಮಾಡಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ. ಗೆದ್ದರೆ ರಾಷ್ಟ್ರಮಟ್ಟದಲ್ಲಿ ಭಾರೀ ಸ್ಟಾರ್ ಆಗುತ್ತಾರೆ!

ಮೋದಿ ತೆಗಳಿಕೆ ಮೀರಿ ರಮ್ಯಾ ಕಾರ್ಯತಂತ್ರ

ಮೋದಿ ತೆಗಳಿಕೆ ಮೀರಿ ರಮ್ಯಾ ಕಾರ್ಯತಂತ್ರ

ನರೇಂದ್ರ ಮೋದಿ ತಂಡವನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಈ ಮೂರು ವರ್ಷಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಈಜಿ ಅನುಭವ ಗಳಿಸಿರುವ ನರೇಂದ್ರ ಮೋದಿಯವರು ಮತ್ತಷ್ಟು ವಿನೂತನವಾಗಿ ಜನರನ್ನು ತಲುಪಲು ಪ್ರಯತ್ನಗಳನ್ನು ಮಾಡಲಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಮೋದಿಯನ್ನು ಬರೀ ತೆಗಳುತ್ತ ಕುಳಿತರೆ ಸಾಲದು, ಅದನ್ನು ಮೀರಿ ರಮ್ಯಾ ಅವರು ಕಾರ್ಯತಂತ್ರ ರೂಪಿಸಬೇಕಾಗಿದೆ.

English summary
Ramya aka Divya Spandana has been given huge responsibility by Rahul Gandhi to head social media campaign of Congress. How will Ramya take on the strong social media team built by Narendra Modi, which helped him to become prime minister? Hope Ramya succeeds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X