ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆಯಲ್ಲಿ ಪುರಿಯಿಂದ ಕಣಕ್ಕಿಳಿಯಲಿದ್ದಾರಾ ಮೋದಿ?

|
Google Oneindia Kannada News

Recommended Video

ಲೋಕಸಭಾ ಚುನಾವಣೆಯಲ್ಲಿ ಪುರಿಯಿಂದ ಕಣಕ್ಕಿಳಿಯಲಿದ್ದಾರಾ ಮೋದಿ..! | Oneindia Kannada

ಪುರಿ, ಜನವರಿ 03: ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ನರಂದ್ರ ಮೋದಿ, ಈ ಬಾರಿ ಒಡಿಶಾದ ಪುಣೆಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಬಿಜೆಪಿ ಹಿರಿಯ ಮುಖಂಡ ಪ್ರದೀಪ್ ಪುರೋಹಿತ್ ಅವರೇ, 'ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಒಡಿಶಾದ ಪುರಿಯಿಂದ ಸ್ಪರ್ಧಿಸುವ ಸಾಧ್ಯತೆಗಳು ಶೇ.90 ರಷ್ಟಿದೆ' ಎಂದಿದ್ದಾರೆ.

ಪ್ರಧಾನಿಯ 1 ಗಂಟೆ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಎಲ್ಲ ವಸ್ತುಗಳಿಗೂ ನಿಷೇಧಪ್ರಧಾನಿಯ 1 ಗಂಟೆ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಎಲ್ಲ ವಸ್ತುಗಳಿಗೂ ನಿಷೇಧ

Will PM Narendra Modi contest from Puri in Lok Sabha elections 2019?

2018 ರ ಅಕ್ಟೋಬರ್ ನಲ್ಲೇ ಈ ಕುರಿತು ಒಡಿಶಾ ಬಿಜೆಪಿ ಘಟಕ ಪ್ರಧಾನಿಯವರಿಗೆ ಮನವಿ ಮಾಡಿತ್ತು.

"ಮೋದಿಯವರಿಗೆ ಒಡಿಶಾದ ಜನರ ಜೊತೆ ಭಾವನಾತ್ಮಕ ಬೆಸುಗೆ ಇದೆ. ಅವರಿಗೆ ಒಡಿಶಾ ಜನರ ಬಗ್ಗೆ ಅಪಾರವಾದ ಪ್ರೀತಿ ಇದೆ. ಆದ್ದರಿಂದ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ" ಎಂದು ಪುರೋಹಿತ್ ಹೇಳಿದ್ದಾರೆ.

ಮೋದಿ ನನ್ನೊಂದಿಗೆ ರಫೇಲ್ ಬಗ್ಗೆ 20 ನಿಮಿಷ ಮಾತನಾಡಲಿ: ರಾಹುಲ್ ಸವಾಲುಮೋದಿ ನನ್ನೊಂದಿಗೆ ರಫೇಲ್ ಬಗ್ಗೆ 20 ನಿಮಿಷ ಮಾತನಾಡಲಿ: ರಾಹುಲ್ ಸವಾಲು

ಅಕಸ್ಮಾತ್ ಮೋದಿಯವರು ಪುರಿಯಿಂದ ಸ್ಪರ್ಧಿಸಿದ್ದೇ ಆದರೆ, ಒಡಿಶಾದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಎರಡನೇ ಪ್ರಧಾನಿ ಅವರಾಗಲಿದ್ದಾರೆ. 1996 ರಲ್ಲಿ ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ಅವರು ಸಹ ಲೋಕಸಭಾ ಚುನಾವಣೆಗೆ ಒಡಿಶಾದ ಬೆರ್ಹಮ್ಪುರ ಕ್ಷೇತ್ರದದಿಂದ ಸ್ಪರ್ಧಿಸಿದ ಗೆದ್ದಿದ್ದರು.

English summary
Will Prime Minister Narendra Modi contest the 2019 Lok Sabha elections from Puri constituency in Odisha? According to senior BJP leader Pradip Purohit, there is “90 per cent possibility” of the Prime Minister contesting from the seat in Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X