ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈಜರ್ ಕೊರೊನಾ ಲಸಿಕೆ ಭಾರತಕ್ಕೂ ಲಭ್ಯವಾಗಲಿದೆಯೇ?

|
Google Oneindia Kannada News

ನವದೆಹಲಿ, ಡಿಸೆಂಬರ್ 03: ಇಂಗ್ಲೆಂಡ್ ಅನುಮೋದನೆ ನೀಡಿರುವ ಫೈಜರ್ ಕೊರೊನಾ ಲಸಿಕೆ ಭಾರತಕ್ಕೂ ಲಭ್ಯವಾಗಲಿದೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲಿ ಉದ್ಭವವಾಗಿದೆ.

ಆದರೆ ಲಸಿಕೆ ತಯಾರಕ ಕಂಪನಿ ಏನು ಹೇಳುತ್ತದೆ ಎಂಬುದನ್ನೂ ತಿಳಿಯಬೇಕಿದೆ. ಕೊರೊನಾವೈರಸ್ ವಿರುದ್ಧದ ಲಸಿಕೆಯನ್ನು ದೇಶದಲ್ಲಿ ಲಭ್ಯವಾಗುವಂತೆ ಮಾಡಲು ಫೈಜರ್ ಭಾರತದ ಸರ್ಕಾರದೊಂದಿಗೆ ಕೈಜೋಡಿಸಲು ಸಿದ್ಧವಿದೆ ಎಂದು ಅಮೆರಿಕ ಫಾರ್ಮಾ ತಿಳಿಸಿದೆ.

ಲಸಿಕೆ ತಯಾರಕ ಕಂಪನಿಯು ವಿವಿಧ ಸರ್ಕಾರಗಳೊಂದಿಗೆ ಚರ್ಚಿಸುತ್ತಿದೆ. ಫೈಜರ್ ಲಸಿಕೆಯನ್ನು ಆಯಾ ಸರ್ಕಾರಿ ಅಧಿಕಾರಿಗಳೊಂದಿಗಿನ ಒಪ್ಪಂದದ ಆಧಾರದ ಮೇಲೆ ಪೂರೈಸುತ್ತದೆ.

ಬ್ರಿಟನ್, 20 ಮಿಲಿಯನ್ ಮಂದಿಗೆ ಆಗುವಷ್ಟು ಫೈಜರ್ ಲಸಿಕೆಗೆ ಬೇಡಿಕೆ ಇಟ್ಟಿದೆ. ಆದರೆ ವರ್ಷಾಂತ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.

ಸಿಕ್ಕೇ ಬಿಡ್ತು ಸಂಜೀವಿನಿ: ಕೊರೊನಾವೈರಸ್ ಲಸಿಕೆಗೆ ಇಂಗ್ಲೆಂಡ್ ಅನುಮೋದನೆ ಸಿಕ್ಕೇ ಬಿಡ್ತು ಸಂಜೀವಿನಿ: ಕೊರೊನಾವೈರಸ್ ಲಸಿಕೆಗೆ ಇಂಗ್ಲೆಂಡ್ ಅನುಮೋದನೆ

ಬಯೋನೆಟೆಕ್ ಮತ್ತು ಫೈಜರ್ ಲಸಿಕೆಗೆ ಇಂಗ್ಲೆಂಡ್ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ವಾರದಲ್ಲೇ ಇಂಗ್ಲೆಂಡ್ ನಲ್ಲಿ ಕೊರೊನಾವೈರಸ್ ಲಸಿಕೆ ಬಳಕೆಗೆ ಬರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕೊವಿಡ್-19 ಲಸಿಕೆಯು ಉತ್ತಮ ಗುಣಮಟ್ಟ, ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ ಎಂದು ಇಂಗ್ಲೆಂಡ್ ಮಡಿಸನ್ಸ್ ಆಂಡ್ ಹೆಲ್ತ್ ಕೇರ್ ಪ್ರಾಡೆಕ್ಟ್ಸ್ ರೆಗ್ಯುಲೆಟರ್ ಏಜೆನ್ಸಿ ತಿಳಿಸಿದೆ.

ಸಾಂಕ್ರಾಮಿಕ ಹಂತದಲ್ಲಿ, ಫೈಜರ್ ಈ ಲಸಿಕೆಯನ್ನು ಆಯಾ ಸರ್ಕಾರಿ ಅಧಿಕಾರಿಗಳೊಂದಿಗಿನ ಒಪ್ಪಂದಗಳ ಆಧಾರದ ಮೇಲೆ ಮತ್ತು ನಿಯಂತ್ರಕ ಅಧಿಕಾರ ಅಥವಾ ಅನುಮೋದನೆಯನ್ನು ಅನುಸರಿಸಿ ಸರ್ಕಾರಿ ಒಪ್ಪಂದಗಳ ಮೂಲಕ ಮಾತ್ರ ಪೂರೈಸಲಾಗುತ್ತದೆ.

ಅಂತೆಯೇ ನಾವು ಹೆಚ್ಚಿನ ಅಧಿಕಾರ ಮತ್ತು ಅನುಮೋದನೆಗಳನ್ನು ನಿರೀಕ್ಷಿಸುತ್ತಿರುವುದರಿಂದ, ವಿಶ್ವದಾದ್ಯಂತ ಉತ್ತಮ ಗುಣಮಟ್ಟದ ಲಸಿಕೆಯನ್ನು ಸುರಕ್ಷಿತವಾಗಿ ಪೂರೈಸಲು ನಾವು ಸರ್ಕಾರಗಳ ಮತ್ತು ಸಂಬಂಧ ಪಟ್ಟ ಪ್ರಾಧಿಕಾರಿಗಳ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಫೈಜರ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬೌರ್ಲಾ ಹೇಳಿದ್ದಾರೆ.

ಭಾರತ ಸರ್ಕಾರ ಕೂಡ ಲಸಿಕೆಗೆ ಬೇಡಿಕೆ ಇಟ್ಟಿದ್ದು, ಭಾರತದಲ್ಲಿ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. ದೇಶದ ಪ್ರತೀಯೊಬ್ಬರೂ ಲಸಿಕೆ ಪಡೆಯುವ ಹಕ್ಕು ಹೊಂದಿದ್ದಾರೆ. ಈ ಬಗ್ಗೆ ನಾವು ಭಾರತ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.

ಲಸಿಕೆಗೆ ಬ್ರಿಟನ್‌ನಿಂದ ಅನುಮೋದನೆ

ಲಸಿಕೆಗೆ ಬ್ರಿಟನ್‌ನಿಂದ ಅನುಮೋದನೆ

ಕೊವಿಡ್-19 ಗೆ ತುರ್ತಾಗಿ ಬಳಕೆ ಮಾಡಲು ಫೈಜರ್-ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್ ನಿಂದ ಅನುಮೋದನೆ ಸಿಕ್ಕಿದ್ದು, ಮುಂದಿನ ವಾರ ಲಭ್ಯವಾಗಲಿದೆ.

ಕೊರೊನಾಗೆ ಅಂತ್ಯ

ಕೊರೊನಾಗೆ ಅಂತ್ಯ

ಈ ಬೆಳವಣಿಗೆಯನ್ನು ಕೊರೊನಾಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ್ದು ಎಂದು ವಿಶ್ಲೇಷಿಸಲಾಗುತ್ತಿದ್ದು, ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆಯೂ ಆಗಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ವಾರದಲ್ಲಿ ಲಸಿಕೆ ಬಿಡುಗಡೆ

ಮುಂದಿನ ವಾರದಲ್ಲಿ ಲಸಿಕೆ ಬಿಡುಗಡೆ

ಈ ಲಸಿಕೆ ಮುಂದಿನ ವಾರದ ವೇಳೆಗೆ ಚಲಾವಣೆಗೆ ಬರಲಿದ್ದು, ಕೋವಿಡ್-19 ನಿಯಂತ್ರಿಸಲು ತನ್ನ ಪ್ರಜೆಗಳಿಗೆ ಲಸಿಕೆ ಹಾಕಿಸುವುದನ್ನು ಪ್ರಾರಂಭಿಸಿದ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಬ್ರಿಟನ್ ಕೂಡ ಒಂದಾಗಿರಲಿದೆ.

ಇತರೆ ರಾಷ್ಟ್ರಗಳ ಬೇಡಿಕೆ

ಇತರೆ ರಾಷ್ಟ್ರಗಳ ಬೇಡಿಕೆ

ಬ್ರಿಟನ್ ನಂತೆಯೇ ಇತರ ರಾಷ್ಟ್ರಗಳೂ ಸಹ ತಮ್ಮ ಪ್ರಜೆಗಳಿಗೆ ಕೋವಿಡ್-19 ಲಸಿಕೆಯನ್ನು ನೀಡುವುದಕ್ಕೆ ತುದಿಗಾಲಲ್ಲಿ ನಿಂತಿವೆ.
ಬ್ರಿಟನ್ ಸರ್ಕಾರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಲಸಿಕೆ ಮುಂದಿನ ವಾರದಿಂದ ಲಭ್ಯವಾಗಲಿದೆ ಎಂದು ಹೇಳಿದೆ.

Recommended Video

Atulya Ganga : ಗಂಗೆಯನ್ನು ಶುದ್ಧಗೊಳಿಸಲು ನಿವೃತ್ತ ಸೈನಿಕರ ಮಹಾ ಯೋಜನೆ | Oneindia Kannada

English summary
Pfizer remains "committed to engaging with the Government of India and explore opportunities" to make its vaccine against coronavirus available in the country, the American pharma giant said, a day after Britain approved the vaccine to be rolled out to the public early next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X