• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರ್ ಟಿಐ ಕಾಯ್ದೆಯ ಪರಿಧಿಯೊಳಗೆ ಸಿಜೆಐ ಕಚೇರಿ ಸುಪ್ರೀಂನತ್ತ ಎಲ್ಲರ ಚಿತ್ತ

|
Google Oneindia Kannada News

ನವದೆಹಲಿ, ನವೆಂಬರ್ 12: ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅವರ ಕಚೇರಿ(ಸಿಜೆಐ) ಮಾಹಿತಿ ಹಕ್ಕು(ಆರ್ ಟಿಐ) ಕಾಯ್ದೆಯ ಪರಿಧಿಗೆ ಒಳಪಡಬೇಕೇ? ಬೇಡವೇ? ಎಂಬ ಅರ್ಜಿಯ ವಿಚಾರಣೆ ಮುಕ್ತಾಯವಾಗಿದ್ದು, ನವೆಂಬರ್ 13ರಂದು ಈ ಬಗ್ಗೆ ಅಂತಿಮ ತೀರ್ಪು ಹೊರ ಬರಲಿದೆ.

"ಸಿಜೆಐ ಸಾರ್ವಜನಿಕ ಆಸ್ತಿಯಾಗಿದ್ದು, ಅವರ ಕಚೇರಿ ಆರ್ ಟಿಐ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯವು ನ್ಯಾಯಾಧೀಶರ ಖಾಸಗಿ ಹಕ್ಕು ಅಲ್ಲ. ಅದು ಅವರ ಮೇಲೆ ಸಂವಿಧಾನವು ಹೊರಿಸಿರುವ ಗುರುತರ ಜವಾಬ್ದಾರಿ" ಎಂದು ಮುಖ್ಯನ್ಯಾಯಾಮೂರ್ತಿ ಎ ಪಿ ಷಾ ನೇತೃತ್ವದ ದೆಹಲಿ ಹೈಕೋರ್ಟ್ ಪೀಠವು ನೀಡಿದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಆರ್ ಟಿಐ ಎಂದರೇನು? ಹೇಗೆ ಅರ್ಜಿ ಸಲ್ಲಿಸುವುದು?ಆರ್ ಟಿಐ ಎಂದರೇನು? ಹೇಗೆ ಅರ್ಜಿ ಸಲ್ಲಿಸುವುದು?

ಸಿಜೆಐ ರಂಜನ್ ಗೊಗೊಯ್ ಅವರಿರುವ ನ್ಯಾಯಪೀಠವು ಬುಧವಾರ(ನವೆಂಬರ್ 13) ಮಧ್ಯಾಹ್ನ 2 ಗಂಟೆ ನಂತರ ಈ ಪ್ರಕರಣದ ತೀರ್ಪು ನೀಡಲಿದೆ. ನ್ಯಾಯಪೀಠದಲ್ಲಿ ಸಿಜೆಐ ರಂಜನ್ ಅಲ್ಲದೆ ಎನ್ ವಿ ರಮಣ, ಡಿವೈ ಚಂದ್ರಚೂಡ್, ದೀಪಕ್ ಗುಪ್ತ ಹಾಗೂ ಸಂಜೀವ್ ಖನ್ನ ಅವರಿದ್ದಾರೆ.

ಬಾಲಕೃಷ್ಣನ್ ಅವರು ಸಿಜೆಐ ಕಚೇರಿ ಆರ್ ಟಿಐ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಕೇಂದ್ರ ಸರ್ಕಾರ ಅಕ್ಟೊಬರ್ 12, 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯಿದೆಯ ಮೂಲ ಉದ್ದೇಶ. ದೇಶದ ಎಲ್ಲಾ ರಾಜ್ಯಗಳಲ್ಲಿ ಆರ್ ಟಿಐ ಕಾಯಿದೆ ಅನ್ವಯವಾಗುತ್ತದೆಯಾದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ ಟಿಐ ಬಳಸಲು ಅವಕಾಶವಿರಲಿಲ್ಲ.

ಜಡ್ಜ್ ಗಳ ಆಸ್ತಿ ವಿವರ: 2017ರಲ್ಲಿ ಆರ್ ಟಿಐ ಕಾರ್ಯಕರ್ತ ಸುಭಾಷ್ ಚಂದ್ರ ಅಗರವಾಲ್ ಅವರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಹಾಕಿ ಜಡ್ಜ್ ಗಳ ಆಸ್ತಿ ವಿವರಗಳನ್ನು ಕೋರಿದ್ದರು. ಆದರೆ, ಸುಪ್ರೀಂಕೋರ್ಟ್ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿತ್ತು. ವಿಷಯ ಕೇಂದ್ರ ಮಾಹಿತಿ ಆಯೋಗಕ್ಕೆ ಮುಟ್ಟಿತು. ಸಿಜೆಐ ಕೂಡಾ ಆರ್ ಟಿಐ ವ್ಯಾಪ್ತಿಗೆ ಒಳಪಡಲಿದೆ, ಸುಪ್ರೀಂಕೋರ್ಟ್ ಮಾಹಿತಿ ಹಂಚಿಕೊಳ್ಳಬೇಕು ಎಂದು ಸಿಐಸಿ ಸೂಚಿಸಿತ್ತು.

ಪ್ರಕರಣ ಹೈಕೋರ್ಟಿನಲ್ಲಿ ವಿಚಾರಣೆಗೊಳಪಟ್ಟಿತು. ಸಿಐಸಿ ನಿರ್ಣಯವನ್ನು ಕೋರ್ಟ್ ಎತ್ತಿ ಹಿಡಿಯಿತು. ನಂತರ ಪ್ರಕರಣ ವಿಸ್ತೃತ ನ್ಯಾಯಪೀಠ(ಮೂವರು ನ್ಯಾಯಮೂರ್ತಿಗಳಿದ್ದ)ಕ್ಕೆ ವರ್ಗಾವಣೆಗೊಂಡಿತು.

ನಂತರ ಐವರು ನ್ಯಾಯಮೂರ್ತಿಗಳ ನ್ಯಾಯಪೀಠವು ವಿಚಾರಣೆ ನಡೆಸಿದ್ದು, ಅಂತಿಮ ತೀರ್ಪು ನೀಡಲಿದೆ.

English summary
The Supreme Court will pronounce on Wednesday its verdict on a plea challenging the Delhi High Court decision bringing the office of the chief justice of India under the Right to Information Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X