ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಹೆಣದ ಲೆಕ್ಕ ಕೇಳುವವರು ಪಾಕಿಸ್ತಾನಕ್ಕೆ ಒಮ್ಮೆ ಹೋಗಿ: ರಾಜ್ ನಾಥ್

|
Google Oneindia Kannada News

ಬಾಲಕೋಟ್ ನ ಜೈಶ್-ಇ-ಮೊಹ್ಮದ್ ತರಬೇತಿ ಕೇಂದ್ರದ ಮೇಲೆ ಭಾರತೀಯ ವಾಯು ಸೇನೆ ನಡೆಸಿದ ದಾಳಿಯಲ್ಲಿ ಎಷ್ಟು ಭಯೋತ್ಪಾದಕರು ಹತ್ಯೆಯಾದರು ಎಂಬ ವಿಚಾರ "ಇಂದಲ್ಲ ನಾಳೆ" ಗೊತ್ತಾಗಲಿದೆ ಎಂದು ಮಂಗಳವಾರ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಹೇಳಿದ್ದಾರೆ.

ಭಾರತವು ಆ ಸ್ಥಳದ ಮೇಲೆ ದಾಳಿ ನಡೆಸುವ ಮುನ್ನ ಮುನ್ನೂರು ಮೊಬೈಲ್ ಫೋನ್ ಗಳು ಅಲ್ಲಿ ಸಕ್ರಿಯವಾಗಿವೆ ಎಂದು ನ್ಯಾಷನಲ್ ಟೆಕ್ನಿಕಲ್ ರೀಸರ್ಚ್ ಆರ್ಗನೈಸೇಷನ್ (ಎನ್ ಟಿಆರ್ ಒ) ತಿಳಿಸಿತ್ತು ಎಂದು ರಾಜ್ ನಾಥ್ ಸಿಂಗ್ ಅವರು ಹೇಳಿದ್ದಾರೆ.

ಪಾಕಿಸ್ತಾನವನ್ನು ಹದ ಹೊಡೆದ ಭಾರತದ ಬಳಿ ಉಗ್ರರ ಹೆಣ ಕೇಳ್ತಾರಲ್ಲ!ಪಾಕಿಸ್ತಾನವನ್ನು ಹದ ಹೊಡೆದ ಭಾರತದ ಬಳಿ ಉಗ್ರರ ಹೆಣ ಕೇಳ್ತಾರಲ್ಲ!

ಎಷ್ಟು ಉಗ್ರರು ದಾಳಿಯಲ್ಲಿ ಸತ್ತರು ಎಂದು ಗೊತ್ತಾಗಬೇಕಿದ್ದರೆ ಕಾಂಗ್ರೆಸ್ ನವರು ಪಾಕಿಸ್ತಾನಕ್ಕೆ ಹೋಗಿ, ಶವಗಳ ಲೆಕ್ಕ ಹಾಕಿಕೊಂಡು ಬರಲಿ ಎಂದು ಸಲಹೆ ಮಾಡಿದ್ದಾರೆ.

Will know numbers ‘today or tomorrow’: Rajnath Singh on casualties in Balakot strike

ಭಾರತೀಯ ವಾಯು ಸೇನೆ ದಾಳಿಯಲ್ಲಿ ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಕೆಲವು ನಾಯಕರು ಪ್ರಶ್ನಿಸುತ್ತಿದ್ದಾರೆ. ಇಂದಲ್ಲ ನಾಳೆ ಅದು ಗೊತ್ತಾಗುತ್ತದೆ. ಪಾಕಿಸ್ತಾನ ಮತ್ತು ಅದರ ನಾಯಕರ ಹೃದಯಕ್ಕೆ ಗೊತ್ತು ಎಷ್ಟು ಜನರು ಸತ್ತಿದ್ದಾರೆ ಎಂಬ ಸಂಗತಿ ಎಂದು ರಾಜ್ ನಾಥ್ ಸಿಂಗ್ ಹೇಳಿದ್ದಾರೆ.

ಬಿಎಸ್ ಎಫ್ ನ ಗಡಿ ಯೋಜನೆ ಉದ್ಘಾಟನೆ ಮಾಡಿದ ನಂತರ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಎಷ್ಟು ಜನ ಸತ್ತಿದ್ದಾರೆ, ಎಷ್ಟು ಜನ ಸತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ದಾಳಿ ಆದ ನಂತರ ನಮ್ಮ ವಾಯು ಸೇನೆ ಹೋಗಿ ಒಂದು ಎರಡು ಮೂರು ಅಂತ ಲೆಕ್ಕ ಹಾಕಬೇಕಿತ್ತಾ? ಇದೆಂಥ ಜೋಕ್? ಎಂದು ಪ್ರಶ್ನಿಸಿದ್ದಾರೆ.

ಅಂದು ಬಾಲಕೋಟ್ ನಲ್ಲಿ ಏನಾಯ್ತು? ಜೈಷ್ ಮದರಸಾ ವಿದ್ಯಾರ್ಥಿ ಬಿಚ್ಚಿಟ್ಟ ಸತ್ಯ ಅಂದು ಬಾಲಕೋಟ್ ನಲ್ಲಿ ಏನಾಯ್ತು? ಜೈಷ್ ಮದರಸಾ ವಿದ್ಯಾರ್ಥಿ ಬಿಚ್ಚಿಟ್ಟ ಸತ್ಯ

ಎನ್ ಟಿಆರ್ ಒ ಬಳಿ ನಿಖರ ವ್ಯವಸ್ಥೆ ಇದೆ. ಬಾಲಕೋಟ್ ನ ಆ ಸ್ಥಳದಲ್ಲಿ ಮುನ್ನೂರು ಮೊಬೈಲ್ ಫೋನ್ ಗಳು ಸಕ್ರಿಯವಾಗಿದ್ದವು ಎಂದಿದ್ದಾರೆ. ಈ ಮೊಬೈಲ್ ಫೋನ್ ಗಳನ್ನು ಮರಗಳು ಬಳಸುತ್ತಿದ್ದವಾ? ನೀವೀಗ (ವಿಪಕ್ಷಗಳು) ಎನ್ ಟಿಆರ್ ಒ ಕೂಡ ನಂಬಲ್ಲವಾ? ಎಂದಿದ್ದಾರೆ.

ಏರ್ ಸ್ಟ್ರೈಕ್ ನಂತರ ಬಾಲಕೋಟ್ ಜೈಷ್ ತಾಣ ಏನಾಗಿದೆ? ಚಿತ್ರ ನೋಡಿಏರ್ ಸ್ಟ್ರೈಕ್ ನಂತರ ಬಾಲಕೋಟ್ ಜೈಷ್ ತಾಣ ಏನಾಗಿದೆ? ಚಿತ್ರ ನೋಡಿ

ಸರಕಾರ ರಚಿಸುವುದಕ್ಕೆ ಮಾತ್ರ ರಾಜಕಾರಣ ಮಾಡಬಾರದು. ದೇಶ ನಿರ್ಮಾಣಕ್ಕೂ ರಾಜಕಾರಣ ಮಾಡಬೇಕು. ಕಾಂಗ್ರೆಸ್ ನ ನನ್ನ ಸ್ನೇಹಿತರು ಅವರಿಗೆ ಸತ್ತವರ ಸಂಖ್ಯೆಯನ್ನು ತಿಳಿಸಬೇಕು ಅನ್ನೋದಾದರೆ, ನೀವು ಪಾಕಿಸ್ತಾನಕ್ಕೆ ಹೋಗಲು ಬಯಸಿದರೆ ಹೋಗಿ, ಲೆಕ್ಕ ಹಾಕಿ ಮತ್ತು ಅಲ್ಲಿ ಜನರನ್ನು ಕೇಳಿ. ನಮ್ಮ ವಾಯು ಸೇನೆಯವರು ಎಷ್ಟು ಜನರನ್ನು ಕೊಂದರು ಎಂದು ತಿಳಿದುಕೊಳ್ಳಿ ಎಂದು ರಾಜ್ ನಾಥ್ ಸಿಂಗ್ ಹೇಳಿದ್ದಾರೆ.

English summary
Union Home Minister Rajnath Singh Tuesday said the number of terrorists killed in the air strike by Indian Air Force on the training camp of Jaish-e-Mohammed in Pakistan’s Balakot would be known “today or tomorrow”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X