ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

Virat Kohli's name is in the hit list of lashkar e taiba | Oneindia Kannada

ನವದೆಹಲಿ, ಅಕ್ಟೋಬರ್ 29: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸ ಉಗ್ರ ಸಂಘಟನೆಯೊಂದು ಜೀವ ಬೆದರಿಕೆಯೊಡ್ಡಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿದೆ.

ಆಲ್ ಇಂಡಿಯಾ ಲಷ್ಕರ್ ಇ ತೋಯ್ಬಾ ಎಂಬ ಸಂಘಟನೆಯೊಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವಾರು ಗಣ್ಯರಿಗೆ ಜೀವ ಬೆದರಿಕೆ ಇದೆ ಎಂದು ಹಿಟ್ ಲಿಸ್ಟ್ ನಲ್ಲಿರುವ ಗಣ್ಯರ ಪಟ್ಟಿಯುಳ್ಳ ಪತ್ರವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಕಳಿಸಲಾಗಿದೆ.

ಗೃಹ ಸಚಿವ ಅಮಿತ್ ಶಾ ಕೈಲಿದೆ ಟಾಪ್ 10 ಉಗ್ರರ ಹಿಟ್ ಲಿಸ್ಟ್ಗೃಹ ಸಚಿವ ಅಮಿತ್ ಶಾ ಕೈಲಿದೆ ಟಾಪ್ 10 ಉಗ್ರರ ಹಿಟ್ ಲಿಸ್ಟ್

ಈ ಹಿಟ್ ಲಿಸ್ಟ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಮುಂತಾದ ಗಣ್ಯರ ಹೆಸರಿದೆ.

Will kill Virat Kohli: New Terror Group Prepares Hit-List Sends It To NIA

ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಗೂ ಈ ಹೊಸ ಸಂಘಟನೆಗೂ ಸಂಬಂಧವಿದೆಯೇ? ಇದು ಹುಸಿ ಬೆದರಿಕೆಯೇ? ಎಂಬುದರ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಲಷ್ಕರ್ ಉಗ್ರರು ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಗುರಿಯನ್ನಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಾರೆ. ಆದರೆ ಮುಂಬೈನಲ್ಲಿ 26/11ರ ದಾಳಿಯನ್ನು ನಡೆಸಿದ ಬಳಿಕ ದೇಶದೆಲ್ಲೆಡೆ ಉಗ್ರರ ಜಾಲ ಹರಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಕೊಯಮತ್ತೂರಿನಲ್ಲಿ ಇತ್ತೀಚಿಗೆ ಹೈ ಅಲರ್ಟ್ ಘೋಷಿಸಲಾಗಿತ್ತು.

ತಮಿಳುನಾಡಿನ ಕೊಯಮತ್ತೂರಿನಲ್ಲಿ 6ಕ್ಕೂ ಅಧಿಕ ಉಗ್ರರ ಅಡಗುತಾಣಗಳಿರುವುದನ್ನು ಗುಪ್ತಚರ ಇಲಾಖೆ ಪತ್ತೆ ಹಚ್ಚಿತ್ತು. ಇದೆಲ್ಲವೂ ಎ ಗ್ರೇಡ್ ಮಾಹಿತಿಯಾಗಿದ್ದು, ಹೈ ಅಲರ್ಟ್ ಮುಂದುವರೆಯಲಿದೆ ಎಂದು ಒನ್ಇಂಡಿಯಾಕ್ಕೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಪಾಕಿಸ್ತಾನ ಮೂಲದ ಅನ್ವರ್ ಇಳ್ಯಾಸ್ ಎಂಬಾತನನ್ನು ಬಂಧಿಸಲಾಗಿದ್ದು, ವಿಚಾರಣೆ ತೀವ್ರಗೊಳಿಸಲಾಗಿದೆ.

English summary
An outfit which calls itself the All India Lashkar-e-Tayiba has warned that it would assassinate several persons including Indian cricket team captain Virat Kohli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X