ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆರ್ ಎಸ್ ಎಸ್ ನ ನೂತನ ಸರಕಾರ್ಯವಾಹ?

|
Google Oneindia Kannada News

ನಾಗ್ಪುರ, ಮಾರ್ಚ್ 03: ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಸರಕಾರ್ಯವಾಹ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ಈ ಸ್ಥಾನ ಅಲಂಕರಿಸಿರುವ ಹಿರಿಯರಾದ ಭೈಯ್ಯಾಜಿ ಜೋಶಿ ಅವರು ಅನಾರೋಗ್ಯದ ಕಾರಣ ಈ ಸ್ಥಾನದಿಂದ ಹಿಂದೆ ಸರಿಯಲಿದ್ದು, ಈ ಸ್ಥಾನವನ್ನು ಹೊಸಬಾಳೆಯವರು ಅಲಂಕರಿಸಲಿದ್ದಾರೆ.

ಮೋಹನ್ ಭಾಗ್ವತ್ ಸೇನೆ ಕುರಿತ ಹೇಳಿಕೆಗೆ ಆರೆಸ್ಸೆಸ್ ಸ್ಪಷ್ಟನೆ ಮೋಹನ್ ಭಾಗ್ವತ್ ಸೇನೆ ಕುರಿತ ಹೇಳಿಕೆಗೆ ಆರೆಸ್ಸೆಸ್ ಸ್ಪಷ್ಟನೆ

ಮಾರ್ಚ್ 9 ರಿಂದ 11 ರವರೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ(ಎಬಿಪಿಎಸ್)ದಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Will Kannadiga Dattatreya Hosabale be Sarakaryavah of RSS?

ಕಳೆದ ಒಂಭತ್ತು ವರ್ಷಗಳಿಂದ ಈ ಸ್ಥಾನದಲ್ಲಿದ್ದ ಭೈಯ್ಯಾಜಿ ಜೋಶಿಯವರು ಎಪ್ಪತ್ತರ ಹೊಸ್ತಿಲಲ್ಲಿದ್ದು, ವಿಶ್ರಾಂತಿಯ ಅಗತ್ಯವಿರುವುದರಿಂದ ತಮ್ಮ ಸ್ಥಾನದಿಂದ ಕೆಳಗಿಳಿಯಲು ಬಯಸಿದ್ದಾರೆ. ಸರಕಾರ್ಯವಾಹ ಸ್ಥಾನವು ಆರ್ ಎಸ್ ಎಸ್ ನ ಅತ್ಯುನ್ನತ ಹುದ್ದೆಯಾದ ಸರಸಂಘಚಾಲಕ್ ಹುದ್ದೆಯ ನಂತರದ ಸ್ಥಾನವಾಗಿದೆ. 2015 ರಲ್ಲೇ ಈ ಸ್ಥಾನಕ್ಕೆ ಹೊಸಬಾಳೆ ಅವರ ಹೆಸರು ಪ್ರಸ್ತಾಪವಾಗಿತ್ತಾದರೂ, ಹೊಸಬಾಳೆಯವರೇ ಇದಕ್ಕೆ ಒಪ್ಪಿರಲಿಲ್ಲ.

ಅಂದು ರಥಯಾತ್ರೆ, ಚುನಾವಣಾ ಹೊಸ್ತಿಲಲ್ಲಿ ಇಂದು RSS ರಾಮರಾಜ್ಯ ಯಾತ್ರೆ ಅಂದು ರಥಯಾತ್ರೆ, ಚುನಾವಣಾ ಹೊಸ್ತಿಲಲ್ಲಿ ಇಂದು RSS ರಾಮರಾಜ್ಯ ಯಾತ್ರೆ

English summary
There are indications that the current Rashtriya Swayamsevak Sangh Sarakaryavah(No.2 post in RSS) Bhaiyyaji Joshi will step down and Kannadiga Dattatreya Hosabale will be elected in his place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X