ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಎಲ್ ವಿ- ಇಸ್ರೋ ಪಾಲಿನ ತಂಟೆಯ ಹುಡುಗ, ಮುಂದಿನ 50 ಯೋಜನೆ

ಇಸ್ರೋ ಏಕಕಾಲಕ್ಕೆ 104 ಉಪಗ್ರಹ ಉಡಾವಣೆ ಮಾಡಿದೆ. ಇದು ದೇಶವೇ ಹೆಮ್ಮೆ ಪಡುವ ಸಾಧನೆ. ಆದರೆ ಇಸ್ರೋ ಪಾಲಿಗೆ ಜಿಎಸ್ ಎಲ್ ವಿ ಉಡಾವಣೆ ಸವಾಲಾಗಿ ಉಳಿದಿದೆ. ಅದರೆ 2019ರ ವೇಳೆಗೆ 500ಕ್ಕೂ ಹೆಚ್ಚು ಉಪಗ್ರಹ ಕಕ್ಷೆಗೆ ಸೇರಿಸುವ ಯೋಜನೆ ಹಾಕಿಕೊಂಡಿದೆ

By ಎಚ್ ಎಸ್ ವಿನಯ್
|
Google Oneindia Kannada News

ಬೆಂಗಳೂರು, ಫೆಬ್ರವರಿ 17: ಪಿಎಸ್ಎಲ್‌ವಿ ರಾಕೆಟ್ ಬಳಸಿ 104 ಉಪಗ್ರಹಗಳನ್ನು ಭಾರತದ ಹೆಮ್ಮೆಯ ಇಸ್ರೋ ಯಶಸ್ವಿಯಾಗಿ ವಿವಿಧ ಕಕ್ಷೆಗಳಲ್ಲಿ ಸೇರಿಸಿದೆ. ಪಿಎಸ್ಎಲ್‌ವಿ ರಾಕೆಟ್ ಇದು 2000 ಕೆಜಿಗಳಷ್ಟು ತೂಕದ ಉಪಗ್ರಹಗಳನ್ನು ಕಕ್ಷೆಗೆ ಒಯ್ಯಬಹುದಾದ ಸಾಮರ್ಥ್ಯ ಹೊಂದಿದ್ದು.ಇಸ್ರೋ ಇದನ್ನು 1994ರಿಂದ 40 ಬಾರಿ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ವಿವಿಧ ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸಿದೆ.

ಇನ್ನು 4500-5000 ಕೆಜಿ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಬಳಸುವ ಜಿಎಸ್‌ಎಲ್‌ವಿ (ಭಾರತ ನಿರ್ಮಿತ) ಕ್ರಯೋಜನಿಕ್ ಎಂಜಿನ್ ಇರುವ ರಾಕೆಟ್ ಅನ್ನು ಭಾರತ ಎರಡು ಬಾರಿ ಮಾತ್ರ ಯಶಸ್ವಿಯಾಗಿ ಬಳಸಿದ್ದು, ಹಲವಾರು ಬಾರಿ ವಿಫಲವಾಗಿದೆ. ಇದನ್ನು ತಂಟೆಯ ಹುಡುಗ' ಎಂದೇ ಕರೆಯುತ್ತಾರೆ.[ವಿಶ್ವದಾಖಲೆ ಬರೆದ ಇಸ್ರೊಗೆ ಟ್ವಿಟ್ಟರಿನಲ್ಲಿ ಅಭಿನಂದನೆಗಳ ಮಹಾಪೂರ]

Will ISRO succeed in GSLV launch?

ಇದಾದ ನಂತರ ವಿಜ್ಞಾನಿಗಳ ಪರಿಶ್ರಮದಿಂದ 2014ರ ಜನವರಿಯಲ್ಲಿ ಜಿಎಸ್ಎಲ್ ವಿ-ಡಿ5 ಬಳಸಿ ಮಾಡಿದ್ದು ಯಶಸ್ವಿ ಉಡಾವಣೆ. ಭಾರತವನ್ನು 5000 ಕೆಜಿ ತೂಕದ ಉಪಗ್ರಹ ಉಡಾವಣೆ ಮಾಡುವ ಪ್ರತಿಷ್ಠಿತ ದೇಶಗಳ ಗುಂಪಿಗೆ ಸೇರಿಸಿತು. ಇದಾದ ನಂತರ ಕಳೆದ ಸೆಪ್ಟೆಂಬರ್ ನಲ್ಲಿ ಜಿಎಸ್ಎಲ್ ವಿ-ಮಾರ್ಕ್ 2 ಬಳಸಿ ಮಾಡಿದ ಯಶಸ್ವಿ ಉಡಾವಣೆ ದೇಶದ ಕೀರ್ತಿ ಇಮ್ಮಡಿಗೊಳಿಸಿತ್ತು.
Will ISRO succeed in GSLV launch?

ಅಂದಹಾಗೆ 5000 ಕೆಜಿ ತೂಕದ ಉಪಗ್ರಹ ಉಡಾವಣೆ ದೇಶದ ವಾಣಿಜ್ಯ ಉಪಗ್ರಹಗಳ ಉಡಾವಣೆ ದೃಷ್ಟಿಯಿಂದಲೂ ಉತ್ತಮವಾಗಿದ್ದು, ಹೆಚ್ಚು ಲಾಭ ತರಲಿದೆ. ಭಾರತದ ಖಗೋಳವಿಜ್ಞಾನಿಗಳು 5000 ಕೆಜಿ ತೂಕದ ರಾಕೆಟ್‌ ಗಳ ತಂತ್ರಜ್ಞಾನದ ಮೇಲೆ ಹೆಚ್ಚು ದೃಷ್ಟಿ ನೆಟ್ಟಿದ್ದು, ಜಿಎಸ್ ಎಲ್‌ ವಿ-ಮಾರ್ಕ್‌ 3 ಯೋಜನೆಯಲ್ಲಿ ತೊಡಗಿದ್ದಾರೆ. ಇದು ಮೊನ್ನೆಯ ಉಡಾವಣೆ ನಂತರ ಇಸ್ರೋ ಮುಖ್ಯಸ್ಥ ಕೆ.ಎಸ್.ಕಿರಣ್‌ಕುಮಾರ್ ಅವರು ಹೇಳಿದ ಮಾತುಗಳು ಸ್ಪಷ್ಟವಾಗುತ್ತದೆ.[ನಭಕ್ಕೆ ಹಾರಿದ 104 ಉಪಗ್ರಹಗಳ ಕಾರ್ಯ ಯೋಜನೆಯೇನು?]

Will ISRO succeed in GSLV launch?

2019ರ ಒಳಗೆ ಇಸ್ರೋ 50 ಯೋಜನೆಯನ್ನು ಹಾಕಿಕೊಂಡಿದ್ದು, 500ಕ್ಕೂ ಅಧಿಕ ಉಪಗ್ರಹ ಕಕ್ಷೆಗೆ ಸೇರಿಸುವ ಗುರಿ ಹೊಂದಿದೆ. ಜಿಎಸ್ಎಲ್ ವಿ ಉಡಾವಣೆ ಜಾಗತಿಕ ಖಗೋಳ ವಾಣಿಜ್ಯದಲ್ಲಿ ಯೂರೋಪ್ ದೇಶಗಳ ಎರಿಯನ್' ಹಾಗೂ ರಷ್ಯಾದ ಪ್ರೋಟಾನ್'ಗಳಿಗೆ ಪೈಪೋಟಿ ನೀಡುವುದರಲ್ಲಿ ಸಂದೇಹವೇ ಇಲ್ಲ.

Will ISRO succeed in GSLV launch?

ವಿವಿಧ ರಾಕೆಟ್‌ಗಳು ಮತ್ತದರ ಸಾಮರ್ಥ್ಯ:
ಎಸ್‌ ಎಲ್‌ ವಿ-40 ಕೆಜಿ-500 ಕಿ.ಮೀ ಎತ್ತರದ ಕಕ್ಷೆ
ಎಎಸ್‌ ಎಲ್‌ ವಿ- 150 ಕೆಜಿ- 160ಕಿ.ಮೀ - 2000 ಕಿ.ಮೀ
ಪಿಎಸ್‌ ಎಲ್‌ ವಿ-2000 ಕೆಜಿ-160 ಕಿ.ಮೀ- 2000 ಕಿ.ಮೀ
ಜಿ ಎಸ್‌ ಎಲ್‌ ವಿ-4500-5000 ಕೆಜಿ-160 ಕಿ.ಮೀ-2000 ಕಿ.ಮೀ

English summary
On the back of the recent success in launching 104 satellites at once using PSLV, ISRO has now set its sights on the technically advanced and more complex GSLV rockets hoping to master them. Such a feat will catapult India into an elite league of having GSLV launch capabilities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X