ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರ ನಾಡಿ ಮಿಡಿತ ಅರಿಯಲು ನಮೋ Appನಿಂದ ಸಮೀಕ್ಷೆ

|
Google Oneindia Kannada News

ನವದೆಹಲಿ, ಜನವರಿ 16: ಲೋಕಸಭಾ ಚುನಾವಣೆಗಾಗಿ ಮೋದಿ ವಿರೋಧಿ ಬಣ ಅಥವಾ ಮಹಾ ಘಟಬಂಧನ್ ಮಾಡಿರುವ ರಣತಂತ್ರದ ಎಷ್ಟರಮಟ್ಟಿಗೆ ಜನರ ಮೇಲೆ ಪ್ರಭಾವ ಬೀರಿದೆ? ಎಬ ಪ್ರಶ್ನೆ ಸೇರಿದಂತೆ ಮತದಾರರ ಮನದ ಮಾತು, ನಾಡಿ ಮಿಡಿತವನ್ನು ಅರಿಯಲು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಅಪ್ಲಿಕೇಷನ್ ನಿಂದ ಸಮೀಕ್ಷೆ ನಡೆಸಲಾಗುತ್ತಿದೆ.

ನರೇಂದ್ರ ಮೋದಿ ಮೊಬೈಲ್ ಆಪ್​ನಲ್ಲಿ ಹೊಸ ಸಮೀಕ್ಷೆ ಆರಂಭಿಸಲಾಗಿದೆ ಎಂದು ಸಂಕ್ಷಿಪ್ತ ವಿಡಿಯೋ ಮೂಲಕ ಸಮೀಕ್ಷೆಗೆ ಮೋದಿ ಚಾಲನೆ ನೀಡಿದ್ದಾರೆ.

ಮೋದಿಗೆ ಕೊಟ್ಲರ್ ಪ್ರಶಸ್ತಿ, ಪ್ರಧಾನಿಯ ಕಾಲೆಳೆದ ರಾಹುಲ್ ಗಾಂಧಿ ಮೋದಿಗೆ ಕೊಟ್ಲರ್ ಪ್ರಶಸ್ತಿ, ಪ್ರಧಾನಿಯ ಕಾಲೆಳೆದ ರಾಹುಲ್ ಗಾಂಧಿ

ಸರ್ಕಾರದ ಬಗ್ಗೆ ಮತದಾರರ ನಿಲುವೇನಿದೆ? ನಿಮ್ಮ ಕ್ಷೇತ್ರದ ಪ್ರಗತಿ, ಆರೋಗ್ಯ, ಶಿಕ್ಷಣ, ಭ್ರಷ್ಟಾಚಾರ ರಹಿತ ಆಡಳಿತ, ಸ್ವಚ್ಛ ಭಾರತ್, ರಾಷ್ಟ್ರೀಯ ಭದ್ರತೆ, ಮೂಲ ಸೌಕರ್ಯ, ಗ್ರಾಮೀಣ ಭಾಗದಲ್ಲಿ ವಿದ್ಯುತ್ತೀಕರಣ ಹೀಗೆ ಅನೇಕ ವಿಭಾಗ, ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆ.

Will grand alliance have an impact: NaMo app seeks feedback

ಇದಲ್ಲದೆ, ಯಾವ ವಿಚಾರದ ಬಗ್ಗೆ ಸರ್ಕಾರ ಗಮನ ಕೇಂದ್ರೀಕರಿಸಬೇಕು, ಮಹಾಮೈತ್ರಿಯ ರಾಜಕೀಯ ಪರಿಣಾಮ ಸೇರಿ ಇತರ ವಿಚಾರಗಳನ್ನು ಮತದಾರರಿಂದ ಪಡೆಯಲಾಗುತ್ತಿದೆ.

ಮೋದಿಗಾಗಿ ಅಷ್ಟ ರಾಜ್ಯಗಳಿಗೆ ಜಾಥಾ ಹೊರಟ ತಮಿಳುನಾಡು ಯುವತಿ ಮೋದಿಗಾಗಿ ಅಷ್ಟ ರಾಜ್ಯಗಳಿಗೆ ಜಾಥಾ ಹೊರಟ ತಮಿಳುನಾಡು ಯುವತಿ

ಚುನಾವಣೆ ತಂತ್ರಗಾರ ಪ್ರಶಾಂತ್ ಕಿಶೋರ್ ವೆಬ್​ಸೈಟ್ ಮೂಲಕವು ಇಂತಹ ಪ್ರಯತ್ನ ನಡೆದಿದೆ. ಸ್ಥಳೀಯವಾಗಿ ನಾಯಕರ ಜನಪ್ರಿಯತೆ ಕುರಿತು ಕೂಡ ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಟಿಕೆಟ್ ಹಂಚಿಕೆಗೂ ಕಮಲ ಪಾಳಯಕ್ಕೆ ನೆರವಾಗಲಿದೆ.

ಪ್ರಧಾನಿ ಮೋದಿ ವೆಬ್ ಸೈಟಿನ ಹುಳುಕು ತೋರಿಸಿದ ಹ್ಯಾಕರ್ ಪ್ರಧಾನಿ ಮೋದಿ ವೆಬ್ ಸೈಟಿನ ಹುಳುಕು ತೋರಿಸಿದ ಹ್ಯಾಕರ್

ಸಾಮಾಜಿಕ ಜಾಲತಾಣ, ಆಪ್​ಗಳು, ಸಾರ್ವಜನಿಕ ಚರ್ಚಾ ವೇದಿಕೆಗಳಂಥ ವಿಭಿನ್ನ ಮಾರ್ಗಗಳ ಮೂಲಕ ನೇರವಾಗಿ ಮತದಾರರ ಅಭಿಪ್ರಾಯ ಪಡೆಯುವ ಹೊಸ ಪ್ರಯೋಗ ಇದಾಗಿದೆ.

English summary
Will the 'mahagathbandhan' or the opposition's grand anti-BJP alliance have an impact in your constituency? This is one of the several questions the 'people's pulse' survey asks participants on the 'NaMo' app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X