ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸಿಜಿಐ ಆದೇಶ ಪಾಲಿಸುತ್ತೇವೆ: ಸೆರಂ ಇನ್‌ಸ್ಟಿಟ್ಯೂಟ್ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ನೀಡಿದ್ದ ಶೋಕಾಸ್ ನೋಟಿಸ್‌ಗೆ ಸೆರಂ ಇನ್‌ಸ್ಟಿಟ್ಯೂಟ್ ಪ್ರತಿಕ್ರಿಯೆ ನೀಡಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ದ ಆದೇಶ, ಸೂಚನೆಗಳಿಗೆ ಬದ್ಧವಾಗಿರುವುದಾಗಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಫಾರ್ಮಾ ಕಂಪೆನಿ ಹೇಳಿದೆ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಶೋಕಾಸ್ ನೊಟೀಸ್ ಬಂದ ತಕ್ಷಣವೇ ಪ್ರತಿಕ್ರಿಯಿಸಿರುವ ಕಂಪೆನಿ, ಉನ್ನತ ಡ್ರಗ್ ಪ್ರಾಧಿಕಾರದ ಆದೇಶವನ್ನು ಪಾಲಿಸುವುದಾಗಿ ಹೇಳಿದೆ. ಲಸಿಕೆಯ ಪ್ರಯೋಗವನ್ನು ನಿಲ್ಲಿಸುವಂತೆ ತಮಗೆ ಈ ಹಿಂದೆ ಸೂಚನೆ ಬಂದಿರಲಿಲ್ಲ ಎಂದು ಹೇಳಿದೆ.

ಕೊರೊನಾ ವೈರಸ್ ಲಸಿಕೆ ವೈಫಲ್ಯ: ಸೆರಮ್ ಸಂಸ್ಥೆಗೆ ಡಿಸಿಜಿಐ ನೋಟಿಸ್ಕೊರೊನಾ ವೈರಸ್ ಲಸಿಕೆ ವೈಫಲ್ಯ: ಸೆರಮ್ ಸಂಸ್ಥೆಗೆ ಡಿಸಿಜಿಐ ನೋಟಿಸ್

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರೊಂದಿಗೆ ಸೇರಿ ಅಸ್ಟ್ರಾ ಝೆನಕಾ ಎಂಬ ಡ್ರಗ್ ಕಂಪೆನಿ ಕೊವಿಡ್-19 ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಿ ಅದನ್ನು ಪ್ರಯೋಗಿಸಿದ ವೇಳೆ ಸ್ವಯಂಸೇವಕರೊಬ್ಬರಲ್ಲಿ ವಿಚಿತ್ರ ಕಾಯಿಲೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರಯೋಗವನ್ನು ನಿಲ್ಲಿಸಿದೆ.

Will follow DCGI Order On Oxford Covid Vaccine Trial: Serum Institute Of India

ಈ ಬೆಳವಣಿಗೆ ನಂತರ ಅಮೆರಿಕ, ಇಂಗ್ಲೆಂಡ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಸಹ ಕೋವಿಡ್-19 ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ.

ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ ಕಳೆದ ಆಗಸ್ಟ್ 2ರಂದು ಸೆರಂ ಇನ್ಸ್ ಟಿಟ್ಯೂಟ್ ಗೆ ಸುರಕ್ಷಿತ ಕ್ರಮಗಳೊಂದಿಗೆ ಕೋವಿಶೀಲ್ಡ್ ಕೊರೊನಾ ವೈರಸ್ ಲಸಿಕೆ ಕಂಡುಹಿಡಿಯಲು ಎರಡು ಮತ್ತು ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ನೀಡಿತ್ತು. ಸೆರಂ ಇನ್ಸ್ ಟಿಟ್ಯೂಟ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾ ಝೆನಕಾ ಕಂಪೆನಿಯ ಸಹಯೋಗದೊಂದಿಗೆ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುತ್ತಿದೆ.

ನಾವು ಡಿಸಿಜಿಐ ಆದೇಶವನ್ನು ಪಾಲಿಸುತ್ತೇವೆ, ನಮಗೆ ಪ್ರಯೋಗವನ್ನು ತಡೆಹಿಡಿಯುವಂತೆ ಸೂಚನೆ ಬಂದಿರಲಿಲ್ಲ. ಡಿಸಿಜಿಐ ಸುರಕ್ಷತೆ ದೃಷ್ಟಿಯಿಂದ ಇದನ್ನು ಹೇಳುವುದಾದರೆ ಅವರ ಸೂಚನೆಯನ್ನು ನಾವು ಪಾಲಿಸುತ್ತೇವೆ, ಗುಣಮಟ್ಟದ ಶಿಷ್ಟಾಚಾರವನ್ನು ಅನುಸರಿಸುತ್ತೇವೆ ಎಂದು ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.

English summary
Serum Institute of India (SII) will abide by the drug regulator’s direction on the AstraZeneca-Oxford Covid-19 vaccine trials, which have been halted globally on account of an adverse reaction in a test volunteer in the UK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X