• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಈ ಹೇಳಿಕೆ ನೆನಪಿಟ್ಟುಕೊಳ್ಳಿ 2019ರಲ್ಲಿ ಮತ್ತೆ ಓದಿ"

By Mahesh
|

ನವದೆಹಲಿ, ಡಿ.5: ರಾಜಕಾರಣಿಗಳೆಂದ ಮೇಲೆ ಹೇಳಿಕೆಗಳನ್ನು ನೀಡುವುದು, ಆಶ್ವಾಸನೆಗಳ ಮಹಾಪೂರ ಹರಿಸುವುದು ಹೊಸ ಸಂಗತಿಯಲ್ಲ. ಅದರೆ, ಕೆಲವು ಹೇಳಿಕೆಗಳು ನಂಬಲು ಸಾಧ್ಯವಿಲ್ಲದಿದ್ದರೂ ಜನಪ್ರತಿನಿಧಿಗಳು ಮತ್ತದೇ ಹೇಳಿಕೆಯನ್ನು ಪುನರುಚ್ಚರಿಸಿ ಜನತೆಯ ಕಿವಿ ಬೆಚ್ಚಗೆ ಮಾಡುತ್ತಾರೆ. ಮೋದಿ ಸಂಪುಟದ 'ಪವರ್' ಮಿನಿಸ್ಟರ್ ಪಿಯೂಷ್ ಗೋಯಲ್ ಕೂಡಾ ಇಂದು ತಮ್ಮ ಹಳೆ ಡೈಲಾಗ್ ರಿಪೀಟ್ ಮಾಡಿದ್ದಾರೆ.

'2019ರೊಳಗೆ ಭಾರತೀಯರೆಲ್ಲರಿಗೂ 24X7 ವಿದ್ಯುಚ್ಛಕ್ತಿ ಪೂರೈಕೆ ನಮ್ಮ ಗುರಿ' ಎಂಬ ಆಶ್ವಾಸನೆ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಅವರಿಂದ ಶುಕ್ರವಾರ ಸಿಕ್ಕಿದೆ. ಈ ಗುರಿಯನ್ನು ಮುಟ್ಟಲು ತಂತ್ರಜ್ಞಾನದ ನೆರವು ಪಡೆಯುವುದಾಗಿ ಸಚಿವರು ಹೇಳಿದ್ದಾರೆ.

ಮಾಹಿತಿ ಮತ್ತು ತಂತ್ರಜ್ಞಾನ ಬಳಕೆ ಮಾಡಿಕೊಂಡು ಸ್ಮಾರ್ಟ್ ಗ್ರಿಡ್ ಗಳನ್ನು ವಿನ್ಯಾಸಗೊಳಿಸಲಾಗುವುದು ಇದರಿಂದ ದೇಶದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ವಿದ್ಯುತ್ ಪೂರೈಕೆ, ಬಳಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ. ಇದರಿಂದ ದೇಶದೆಲ್ಲೆಡೆ 24 X7 ವಿದ್ಯುತ್ ಪೂರೈಕೆಯನ್ನು ಮಾರ್ಚ್ 2019ರೊಳಗೆ ಸಾಧಿಸಲಾಗುವುದು ಎಂದು ಡಿಜಿಟಲ್ ಇಂಡಿಯಾ ಕಾನ್ ಕ್ಲೇವ್ 2014 ಉದ್ಘಾಟಿಸಿದ ನಂತರ ಸಚಿವ ಗೋಯಲ್ ಹೇಳಿದರು. [750 ಮೆ.ವ್ಯಾಟ್ ಬೃಹತ್ ಸೌರಶಕ್ತಿ ಪಾರ್ಕ್]

ಕಲ್ಲಿದ್ದಲು ಕಳ್ಳತನಕ್ಕೆ ಬ್ರೇಕ್: ಕಲ್ಲಿದ್ದಲು ಕಳ್ಳತನ ತಡೆಗೆ ಎಲ್ಲೆಡೆ ಸಿಸಿಟಿವಿ ಕೆಮರಾ ಅಳವಡಿಸಲಾಗುವುದು, ಗಣಿಗಾರಿಕೆ ಹಾಗೂ ಹಂಚಿಕೆಯಲ್ಲಿ ಭಾರಿ ಬದಲಾವಣೆ ತರಲು ಸಚಿವಾಲಯ ಬದ್ಧವಾಗಿದೆ. ಪರಿಸರ ಇಲಾಖೆ ಮಾನ್ಯತೆ, ಗಾಳಿಯಂತ್ರ ಬಳಕೆ ಮುಂತಾದ ಯೋಜನೆಗಳ ಜಾರಿಗೆ ಕ್ರಮ ಜರುಗಿಸಲಾಗುವುದು ಎಂದರು. ಸುಮಾರು 12,272 ಕೋಟಿ ರು ವೆಚ್ಚದ ಪ್ರಸರಣ ಯೋಜನೆ ಇನ್ನೂ ಬಾಕಿ ಇದೆ ಎಂದು ಸಚಿವ ಗೋಯಲ್ ತಿಳಿಸಿದರು.

ದೀನ್ ದಯಾಳ್ ಉಪಾಧ್ಯಾಯ್ ಗ್ರಾಮ ಜ್ಯೋತಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಕೆ ಮಾಡಲು ಸುಮಾರು 43,033 ಕೋಟಿ ರು ವೆಚ್ಚದ ಅನುದಾನ ಒದಗಿಸಿದೆ. [10 ರೂ ಗೆ ಒಂದು ಎಲ್‌ಇಡಿ ಬಲ್ಬ್]

ಈಗಾಗಲೇ ಚಾಲ್ತಿಯಲ್ಲಿರುವ ರಾಜೀವ್ ಗಾಂಧಿ ಗ್ರಾಮೀಣ್ ವಿದ್ಯುತ್ತೀಕರಣ ಯೋಜನೆ(RGGVY) ಗೆ ಪೂರಕವಾಗಿ ಮೇಲ್ಕಂಡ ಯೋಜನೆ ಅನುಷ್ಠಾನಗೊಳ್ಳಲಿದೆ. ಗ್ರಾಮೀಣ ಭಾಗದಲ್ಲಿನ ವಿದ್ಯುತ್ ಪೂರೈಕೆ, ಮೀಟರಿಂಗ್, ಟ್ರಾನ್ಸ್ ಫಾರ್ಮರ್, ಮೂಲಸೌಕರ್ಯ ಕೊರತೆ ಇನ್ನಿತರ ಸಮಸ್ಯೆಗಳತ್ತ ಗಮನಹರಿಸಲಾಗಿದೆ ಎಂದು ಸಚಿವರು ವಿವರಿಸಿದರು. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reiterating the promise of 24x7 electricity to all by 2019, Power Minister Piyush Goyal on Friday said use of information technology will help in achieving the target.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more