ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೈರ್ಯವಿದ್ದರೆ ಈಗ ಇರುವ ರಾಮ ಮಂದಿರ ಕೆಡವಿ: ಸುಬ್ರಮಣಿಯನ್ ಸ್ವಾಮಿ

ಆಯೋಧ್ಯ ರಾಮ ಜನ್ಮಭೂಮಿ ವಿವಾದದ ಅರ್ಜಿದಾರ ಹಾಗೂ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಬುಧವಾರದಂದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ

By Mahesh
|
Google Oneindia Kannada News

ಲಕ್ನೋ, ಮಾರ್ಚ್ 22: ಆಯೋಧ್ಯ ರಾಮ ಜನ್ಮಭೂಮಿ ವಿವಾದದ ಅರ್ಜಿದಾರ ಹಾಗೂ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಬುಧವಾರದಂದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೊಸ ಟ್ವೀಟ್ ಮಾಡಿದ್ದಾರೆ.

ಮುಸ್ಲಿಮರನ್ನು ಬೆದರಿಸುವಂತೆ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಸರಯೂ ನದಿ ತೀರದಲ್ಲಿ ಬೇಕಾದರೆ ಮಸೀದಿ ಕಟ್ಟಿಕೊಳ್ಳಿ, ಇಲ್ಲದಿದ್ದರೆ ಕಾನೂನಿನ ಮೂಲಕ(ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಮಾಡುವ ಮೂಲಕ) ರಾಮ ಮಂದಿರ ನಿರ್ಮಿಸುತ್ತೇವೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

'Will enact law to build temple', tweets Subramanian Swamy


1994ರಲ್ಲಿ ಸುಪ್ರೀಂಕೋರ್ಟ್ ಆದೇಶದದಂತೆ ವಿವಾದಿತ ಸ್ಥಳದಲ್ಲಿ ರಾಮ್ ಲಾಲ ಪುಟ್ಟ ಮಂದಿರ ಸ್ಥಾಪನೆಯಾಗಿದೆ. ಧೈರ್ಯವಿದ್ದರೆ ಯಾರಾದರೂ ಅದನ್ನು ಕೆಡವುವ ಸಾಹಸ ಮಾಡಬಹುದು ಎಂದು ಟ್ವೀಟ್ ಮಾಡಿದ್ದಾರೆ.

ರಾಮ ಜನ್ಮ ಭೂಮಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ಮಂಗಳವಾರದಂದು ಮಹತ್ವದ ತೀರ್ಪು ನೀಡಿತ್ತು. ಕೋರ್ಟ್ ಹೊರಗಡೆ ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಆದೇಶಿಸಿತ್ತು.

ಮುಸ್ಲಿಮರಿಗೆ ಚಾಲೆಂಜ್ ಹಾಕಿದ ಸ್ವಾಮಿ

ಮುಸ್ಲಿಮರಿಗೆ ಚಾಲೆಂಜ್ ಹಾಕಿದ ಸ್ವಾಮಿ

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಮಾಡಿರುವ ಎರಡನೇ ಟ್ವೀಟ್ ತಾಂತ್ರಿಕವಾಗಿ ಸಾಧ್ಯವಿದೆ. ಇನ್ನೆರಡು ವರ್ಷಗಳಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಮಂಡನೆ, ಸಮ್ಮತಿ, ಕಾನೂನು ಮಾಡಲು ಬೇಕಾದ ಸಂಖ್ಯಾಬಲ ಗಳಿಸಲಿದೆ. ಎಐಎಡಿಎಂಕೆ ಬೆಂಬಲ ಕೂಡಾ ಎನ್ ಡಿಎಗೆ ಸಿಗಲಿದೆ.

ಸರಯೂ ನದಿ ಬಳಿ ಮಸೀದಿ

ಸರಯೂ ನದಿ ಬಳಿ ಮಸೀದಿ ನಿರ್ಮಾಣ ಮಾಡಿಕೊಳ್ಳಿ. ಈ ಜಾಗ ಬಿಡಿ. ಇಲ್ಲದಿದ್ದರೆ 2018ರ ನಂತರ ಕಾನೂನಿನ ರೀತಿಯಲ್ಲೇ ಪಡೆದುಕೊಳ್ಳುತ್ತೇವೆ ಎಂದು ರಾಮ ಜನ್ಮ ಭೂಮಿ ವಿವಾದದ ಅರ್ಜಿದಾರರಲ್ಲಿ ಒಬ್ಬರಾದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದು ಬೆದರಿಕೆ ತಂತ್ರ

ಮಹಾಭಾರತ ಹಾಗೂ ಭಗವದ್ಗೀತೆ ಇದೇ ಪಾಠ ಹೇಳಿಕೊಟ್ಟಿದ್ಯಾ ನಿಮಗೆ? ಅಧರ್ಮಕ್ಕೆ ತಲೆ ಬಾಗುತ್ತೀರಾ? ಎಂದು ಸ್ವಾಮಿಗೆ ಪ್ರಶ್ನಿಸಿದ್ದಾರೆ.

ಪರಿಸರ ಹಾಳು ಮಾಡಬೇಡಿ

ವೇದಕಾಲೀನ ನದಿ ಸರಯೂ ಬಳಿ ಮಸೀದಿ ನಿರ್ಮಾಣ ಬೇಡ. ಇದರಿಂದ ಪರಿಸರ ಕೂಡಾ ನಾಶವಾಗುತ್ತದೆ.

ಸ್ವಾಮಿಗೆ ಚಾಲೆಂಜ್

ನೀವು ಹಾಕಿರುವ ಚಾಲೆಂಜ್ ಗಳನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಬಹುದಲ್ಲ. ಈ ರೀತಿ ಬಹಿರಂಗ ಸವಾಲು ಸರಿಯೇ?

English summary
The petitioner in the Ayodhya Ram Janm Bhoomi issue and BJP's Rajya Sabha Member of Parliament Subramanian Swamy took to Twitter to stoke a new controversy on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X