ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಜೋರಾಂ ಚುನಾವಣೆ: ಆಡಳಿತ ವಿರೋಧಿ ಅಲೆ ಜಯಿಸಬಲ್ಲದೆ ಕಾಂಗ್ರೆಸ್?

|
Google Oneindia Kannada News

ಮಿಜೋರಾಂ ವಿಧಾನಸಭೆಯ 40 ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಲಿದೆ. ಪುಟ್ಟ ರಾಜ್ಯ ಮಿಜೋರಾಂನಲ್ಲೆ ಈ ಹಿಂದಿನ ಅಂದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಏನಾಗಿತ್ತು ಅನ್ನೋದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಆಗ 40 ಸ್ಥಾನಗಳ ಪೈಕಿ 34ರಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿತ್ತು.

ಎಂಎನ್ ಎಫ್ ನಿಂದ 31 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೆ, ಆ ಪೈಕಿ 5 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಮಿಜೋರಾಂ ಪೀಪಲ್ಸ್ ಕಾನ್ಫರೆನ್ಸ್ (ಎಂಪಿಸಿ) 1 ಸ್ಥಾನ ಗಳಿಸುವಲ್ಲಿ ಸಫಲವಾಗಿತ್ತು.

ಕಾಂಗ್ರೆಸ್ ಅಧಿಪತ್ಯದ ಮಿಜೋರಾಂನಲ್ಲಿ ನ.28ರಂದು ಮತದಾನಕಾಂಗ್ರೆಸ್ ಅಧಿಪತ್ಯದ ಮಿಜೋರಾಂನಲ್ಲಿ ನ.28ರಂದು ಮತದಾನ

ಅದಕ್ಕೂ ಹಿಂದಿನ ಚುನಾವಣೆಯಲ್ಲಿ, 2008ರ ವಿಧಾನಸಭೆ ಚುನಾವಣೆಯಲ್ಲಿ 32 ಸ್ಥಾನಗಳನ್ನು ಕಾಂಗ್ರೆಸ್ ಜಯಿಸಿತ್ತು. ಎಂಎನ್ ಎಫ್ 3 ಸ್ಥಾನ, ಎಂಪಿಸಿ 2, ದ ಝೋರಂ ನ್ಯಾಷನಲಿಸ್ಟ್ ಪಾರ್ಟಿ (ಝೆಡ್ ಎನ್ ಪಿ) 2 ಹಾಗೂ ಮರಾಲ್ಯಾಂಡ್ ಡೆಮಾಕ್ರಟಿಕ್ ಫ್ರಂಟ್ 1 ಸ್ಥಾನಗಳನ್ನು ಪಡೆದಿದ್ದವು.

Will Congress beat anti-incumbency this time in Mizoram?

ಮಿಜೋರಾಂ ಚುನಾವಣೆ 2013:

40 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 25, 2013ರದು ಮತದಾನ ನಡೆದಿತ್ತು. 6.9 ಲಕ್ಷ ಮತದಾರರು ಇದ್ದರು. ಒಟ್ಟಾರೆ 142 ಅಭ್ಯರ್ಥಿಗಳಿದ್ದರು. ಅದರಲ್ಲಿ ಕಾಂಗ್ರೆಸ್ ನಿಂದ 40, ಮಿಜೋರಾಂ ಡೆಮಾಕ್ರಟಿಕ್ ಅಲೈಯನ್ಸ್ (ಎಂಡಿಎ) 40 ಇದ್ದರು. ಆ ಮೈತ್ರಿ ಕೂಟದೊಳಗೆ ಮಿಜೋ ನ್ಯಾಷನಲ್ ಫ್ರಂಟ್ 31, ಮಿಜೋರಾಂ ಪೀಪಲ್ ಕಾನ್ಫರೆನ್ಸ್ 8, ಮರಾಲ್ಯಾಂಡ್ ಡೆಮಾಕ್ರಟಿಕ್ ಫ್ರಂಟ್ ನ ಒಬ್ಬರು ಅಭ್ಯರ್ಥಿ ಇದ್ದರು.

ಝೋರಂ ನ್ಯಾಷನಲಿಸ್ಟ್ ಪಾರ್ಟಿಯ 38, ಭಾರತೀಯ ಜನತಾ ಪಕ್ಷದ 17, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ 2 ಹಾಗೂ ಜೈ ಮಹಾ ಭಾರತ್ ಪಕ್ಷದ ಒಬ್ಬರು ಅಭ್ಯರ್ಥಿ ಅಖಾಡದಲ್ಲಿದ್ದರು.

ರಾಜ್ಯ ರಾಜಧಾನಿ
ಮಿಜೋರಾಂ ಐಜ್ ವಾಲ್
ಜಿಲ್ಲೆಗಳ ಸಂಖ್ಯೆ 8
ವಿಧಾನಸಭಾ ಕ್ಷೇತ್ರಗಳು 40
ಒಟ್ಟಾರೆ ಜನಸಂಖ್ಯೆ 10.9 ಲಕ್ಷ
ನಗರ ಪ್ರದೇಶದ ಜನಸಂಖ್ಯೆ 5.6 ಲಕ್ಷ
ಗ್ರಾಮೀಣ ಭಾಗದ ಜನಸಂಖ್ಯೆ 5.2 ಲಕ್ಷ
ಜಿಡಿಪಿ(2018-19) 11,458 ಕೋಟಿ
ಸಾಕ್ಷರತೆ ಪ್ರಮಾಣ (2011) 91.58%
ಲಿಂಗಾನುಪಾತ(2011) 976
ಸದ್ಯದ ಆಡಳಿತಾರೂಢ ಪಕ್ಷ ಕಾಂಗ್ರೆಸ್
ಒಟ್ಟು ಮತದಾರರ ಸಂಖ್ಯೆ 7,68,181
ಒಟ್ಟಾರೆ ಮತದಾನ ಕೇಂದ್ರಗಳು 1,164

ಎಂಎನ್ ಎಫ್ ಹಾಗೂ ಕಾಂಗ್ತೆಸ್ ಮಧ್ಯೆ ಈ ಬಾರಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು. ಕಳೆದ ಎರಡು ಚುನಾವಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿದೆ. ಆದರೆ ಎರಡು ಪಕ್ಷಗಳ ಮಧ್ಯದ ಮತ ಪ್ರಮಾಣದ ಅಂತರ ಹೆಚ್ಚೇನಿಲ್ಲ.

ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ: ತಿಳಿಯಬೇಕಾದ 7 ಸಂಗತಿಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ: ತಿಳಿಯಬೇಕಾದ 7 ಸಂಗತಿ

2013ರ ಚುನಾವಣೆಯಲ್ಲಿ ಕಾಂಗ್ರೆಸ್ 2,55,917 (ಒಟ್ಟಾರೆ ಮತ ಪ್ರಮಾಣ 44.63 ಪರ್ಸೆಂಟ್) ಮತ ಪಡೆದಿದ್ದರೆ, ಎಂಎನ್ ಎಫ್ 1,64,305 (28.65 ಪರ್ಸೆಂಟ್) ಮತಗಳನ್ನು ಗಳಿಸಿತ್ತು. 2008ರಲ್ಲಿ ಈ ಮತ ಪ್ರಮಾಣ ಮತ್ತೂ ಕಡಿಮೆ ಇತ್ತು. ಕಾಂಗ್ರೆಸ್ 1,95,614 (38.89 ಪರ್ಸೆಂಟ್) ಮತ ಪಡೆದಿದ್ದರೆ, ಎಂಎನ್ ಎಫ್ ಗೆ 1,54,132 (30.65 ಪರ್ಸೆಂಟ್) ಮತಗಳು ಬಂದಿದ್ದವು.

English summary
With polling for the 40 seats Mizoram assembly set to be held tomorrow, it is worth recalling what happened in the previous 2013 elections in the north eastern state. In 2013, Congress swept the polls by winning 34 of the 40 seats in the Mizoram Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X