ಮಿಜೋರಾಂ ಚುನಾವಣೆ: ಆಡಳಿತ ವಿರೋಧಿ ಅಲೆ ಜಯಿಸಬಲ್ಲದೆ ಕಾಂಗ್ರೆಸ್?
ಮಿಜೋರಾಂ ವಿಧಾನಸಭೆಯ 40 ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಲಿದೆ. ಪುಟ್ಟ ರಾಜ್ಯ ಮಿಜೋರಾಂನಲ್ಲೆ ಈ ಹಿಂದಿನ ಅಂದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಏನಾಗಿತ್ತು ಅನ್ನೋದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಆಗ 40 ಸ್ಥಾನಗಳ ಪೈಕಿ 34ರಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿತ್ತು.
ಎಂಎನ್ ಎಫ್ ನಿಂದ 31 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೆ, ಆ ಪೈಕಿ 5 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಮಿಜೋರಾಂ ಪೀಪಲ್ಸ್ ಕಾನ್ಫರೆನ್ಸ್ (ಎಂಪಿಸಿ) 1 ಸ್ಥಾನ ಗಳಿಸುವಲ್ಲಿ ಸಫಲವಾಗಿತ್ತು.
ಕಾಂಗ್ರೆಸ್ ಅಧಿಪತ್ಯದ ಮಿಜೋರಾಂನಲ್ಲಿ ನ.28ರಂದು ಮತದಾನ
ಅದಕ್ಕೂ ಹಿಂದಿನ ಚುನಾವಣೆಯಲ್ಲಿ, 2008ರ ವಿಧಾನಸಭೆ ಚುನಾವಣೆಯಲ್ಲಿ 32 ಸ್ಥಾನಗಳನ್ನು ಕಾಂಗ್ರೆಸ್ ಜಯಿಸಿತ್ತು. ಎಂಎನ್ ಎಫ್ 3 ಸ್ಥಾನ, ಎಂಪಿಸಿ 2, ದ ಝೋರಂ ನ್ಯಾಷನಲಿಸ್ಟ್ ಪಾರ್ಟಿ (ಝೆಡ್ ಎನ್ ಪಿ) 2 ಹಾಗೂ ಮರಾಲ್ಯಾಂಡ್ ಡೆಮಾಕ್ರಟಿಕ್ ಫ್ರಂಟ್ 1 ಸ್ಥಾನಗಳನ್ನು ಪಡೆದಿದ್ದವು.
ಮಿಜೋರಾಂ ಚುನಾವಣೆ 2013:
40 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 25, 2013ರದು ಮತದಾನ ನಡೆದಿತ್ತು. 6.9 ಲಕ್ಷ ಮತದಾರರು ಇದ್ದರು. ಒಟ್ಟಾರೆ 142 ಅಭ್ಯರ್ಥಿಗಳಿದ್ದರು. ಅದರಲ್ಲಿ ಕಾಂಗ್ರೆಸ್ ನಿಂದ 40, ಮಿಜೋರಾಂ ಡೆಮಾಕ್ರಟಿಕ್ ಅಲೈಯನ್ಸ್ (ಎಂಡಿಎ) 40 ಇದ್ದರು. ಆ ಮೈತ್ರಿ ಕೂಟದೊಳಗೆ ಮಿಜೋ ನ್ಯಾಷನಲ್ ಫ್ರಂಟ್ 31, ಮಿಜೋರಾಂ ಪೀಪಲ್ ಕಾನ್ಫರೆನ್ಸ್ 8, ಮರಾಲ್ಯಾಂಡ್ ಡೆಮಾಕ್ರಟಿಕ್ ಫ್ರಂಟ್ ನ ಒಬ್ಬರು ಅಭ್ಯರ್ಥಿ ಇದ್ದರು.
ಝೋರಂ ನ್ಯಾಷನಲಿಸ್ಟ್ ಪಾರ್ಟಿಯ 38, ಭಾರತೀಯ ಜನತಾ ಪಕ್ಷದ 17, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ 2 ಹಾಗೂ ಜೈ ಮಹಾ ಭಾರತ್ ಪಕ್ಷದ ಒಬ್ಬರು ಅಭ್ಯರ್ಥಿ ಅಖಾಡದಲ್ಲಿದ್ದರು.
ರಾಜ್ಯ | ರಾಜಧಾನಿ |
ಮಿಜೋರಾಂ | ಐಜ್ ವಾಲ್ |
ಜಿಲ್ಲೆಗಳ ಸಂಖ್ಯೆ | 8 |
ವಿಧಾನಸಭಾ ಕ್ಷೇತ್ರಗಳು | 40 |
ಒಟ್ಟಾರೆ ಜನಸಂಖ್ಯೆ | 10.9 ಲಕ್ಷ |
ನಗರ ಪ್ರದೇಶದ ಜನಸಂಖ್ಯೆ | 5.6 ಲಕ್ಷ |
ಗ್ರಾಮೀಣ ಭಾಗದ ಜನಸಂಖ್ಯೆ | 5.2 ಲಕ್ಷ |
ಜಿಡಿಪಿ(2018-19) | 11,458 ಕೋಟಿ |
ಸಾಕ್ಷರತೆ ಪ್ರಮಾಣ (2011) | 91.58% |
ಲಿಂಗಾನುಪಾತ(2011) | 976 |
ಸದ್ಯದ ಆಡಳಿತಾರೂಢ ಪಕ್ಷ | ಕಾಂಗ್ರೆಸ್ |
ಒಟ್ಟು ಮತದಾರರ ಸಂಖ್ಯೆ | 7,68,181 |
ಒಟ್ಟಾರೆ ಮತದಾನ ಕೇಂದ್ರಗಳು | 1,164 |
ಎಂಎನ್ ಎಫ್ ಹಾಗೂ ಕಾಂಗ್ತೆಸ್ ಮಧ್ಯೆ ಈ ಬಾರಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು. ಕಳೆದ ಎರಡು ಚುನಾವಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿದೆ. ಆದರೆ ಎರಡು ಪಕ್ಷಗಳ ಮಧ್ಯದ ಮತ ಪ್ರಮಾಣದ ಅಂತರ ಹೆಚ್ಚೇನಿಲ್ಲ.
ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ: ತಿಳಿಯಬೇಕಾದ 7 ಸಂಗತಿ
2013ರ ಚುನಾವಣೆಯಲ್ಲಿ ಕಾಂಗ್ರೆಸ್ 2,55,917 (ಒಟ್ಟಾರೆ ಮತ ಪ್ರಮಾಣ 44.63 ಪರ್ಸೆಂಟ್) ಮತ ಪಡೆದಿದ್ದರೆ, ಎಂಎನ್ ಎಫ್ 1,64,305 (28.65 ಪರ್ಸೆಂಟ್) ಮತಗಳನ್ನು ಗಳಿಸಿತ್ತು. 2008ರಲ್ಲಿ ಈ ಮತ ಪ್ರಮಾಣ ಮತ್ತೂ ಕಡಿಮೆ ಇತ್ತು. ಕಾಂಗ್ರೆಸ್ 1,95,614 (38.89 ಪರ್ಸೆಂಟ್) ಮತ ಪಡೆದಿದ್ದರೆ, ಎಂಎನ್ ಎಫ್ ಗೆ 1,54,132 (30.65 ಪರ್ಸೆಂಟ್) ಮತಗಳು ಬಂದಿದ್ದವು.