ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯ ಹೊಸ ಸವಾಲು ಸ್ವೀಕರಿಸಲು ಕಾಂಗ್ರೆಸ್ಸಿಗೆ ಸಾಧ್ಯವೇ?

|
Google Oneindia Kannada News

Recommended Video

ಮೋದಿ ಚಾಲೆಂಜ್ ಸ್ವೀಕರಿಸಿತ್ತಾ ಕಾಂಗ್ರೆಸ್..!?

ಹಾಲೀ ಲೋಕಸಭಾ ಚುನಾವಣೆಯ ಅತ್ಯಂತ ಪ್ರಖರ ಭಾಷಣಗಳಲ್ಲೊಂದು ಎಂದೇ ಹೇಳಬಹುದಾದ, ಜಾರ್ಖಂಡ್ ನಲ್ಲಿನ ಚುನಾವಣಾ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ ರೀತಿಗೆ ಕಾಂಗ್ರೆಸ್ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಖುಲ್ಲಂಖುಲ್ಲಾ ಕಾಂಗ್ರೆಸ್ ವಿರುದ್ದ ಅದರಲ್ಲೂ ಗಾಂಧಿ ಪರಿವಾರದ ವಂಶಪಾರಂಪರ್ಯ ರಾಜಕಾರಣ, ಭ್ರಷ್ಟಾಚಾರದ ವಿರುದ್ದ ಮೋದಿಯ ವಾಗ್ದಾಳಿ, ಉಳಿದಿರುವ ಇನ್ನೆರಡು ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ತಂತ್ರಗಾರಿಕೆಯನ್ನು ಬದಲಾಯಿಸಲಿದೆಯಾ ಎನ್ನುವುದಿಲ್ಲಿ ಪ್ರಶ್ನೆ.

ರಾಜೀವ್ ಗಾಂಧಿ ಹೆಸರಲ್ಲಿ ಚುನಾವಣೆ ಎದುರಿಸಿ: ಕಾಂಗ್ರೆಸ್‌ಗೆ ಮೋದಿ ಸವಾಲುರಾಜೀವ್ ಗಾಂಧಿ ಹೆಸರಲ್ಲಿ ಚುನಾವಣೆ ಎದುರಿಸಿ: ಕಾಂಗ್ರೆಸ್‌ಗೆ ಮೋದಿ ಸವಾಲು

ಇನ್ನೂ ಎರಡು ಹಂತದ ಚುನಾವಣೆ ಬಾಕಿಯಿದೆ, ಅದರಲ್ಲೂ ಪ್ರಮುಖವಾಗಿ ರಾಜಧಾನಿ ದೆಹಲಿಯ ಚುನಾವಣೆ ಇನ್ನೂ ಆಗಬೇಕಿದೆ ಬನ್ನಿ.. ರಾಜೀವ್ ಗಾಂಧಿ ಹೆಸರು ಹೇಳಿಕೊಂಡು ಮತಯಾಚಿಸಿ ನೋಡೋಣ.. ಎಂದು ಮೋದಿ, ಕಾಂಗ್ರೆಸ್ಸಿಗೆ ಚಾಲೆಂಜ್ ಎಸೆದಿದ್ದಾರೆ.

ಭ್ರಷ್ಟಾಚಾರಿ ನಂಬರ್ 1 ಪಟ್ಟಿಯೊಂದಿಗೆ ರಾಜೀವ್ ಗಾಂಧಿ ಬದುಕು ಅಂತ್ಯ : ಮೋದಿಭ್ರಷ್ಟಾಚಾರಿ ನಂಬರ್ 1 ಪಟ್ಟಿಯೊಂದಿಗೆ ರಾಜೀವ್ ಗಾಂಧಿ ಬದುಕು ಅಂತ್ಯ : ಮೋದಿ

ಮೋದಿಯ ಚಾಲೆಂಜ್ ಎದುರಿಸಲು ಬಹುಷಃ ಕಾಂಗ್ರೆಸ್ಸಿಗೆ ಕಷ್ಟವಾಗಬಹುದು, ಯಾಕೆಂದರೆ ಮೋದಿ ಬೊಫೋರ್ಸ್ ವಿಷಯದ ಬಗ್ಗೆ ಮಾತ್ರ ಮಾತನಾಡದೇ, ಇತರ ವಿಚಾರವನ್ನೂ ಕೆದಕುವ ಸಾಧ್ಯತೆ ದಟ್ಟವಾಗಿದೆ.

ರಾಜೀವ್ ಗಾಂಧಿ ನಂಬರ್ ಒನ್ ಭ್ರಷ್ಟ

ರಾಜೀವ್ ಗಾಂಧಿ ನಂಬರ್ ಒನ್ ಭ್ರಷ್ಟ

ರಾಜೀವ್ ಗಾಂಧಿ ನಂಬರ್ ಒನ್ ಭ್ರಷ್ಟ ಎನ್ನುವ ಕಳಂಕದೊಂದಿಗೆ ನಿಧನರಾದರು ಎನ್ನುವ ನನ್ನ ಹೇಳಿಕೆಗೂ ಈಗಲೂ ಬದ್ದನಾಗಿದ್ದೇನೆ. ಬೋಫೋರ್ಸ್ ಹಗರಣವನ್ನು ಹೊತ್ತಿರುವ ರಾಜೀವ್ ಗಾಂಧಿ ಹೆಸರಿನಲ್ಲಿ ಚುನಾವಣೆ ಎದುರಿಸಿ ನೋಡೋಣ ಎಂದು ಕಾಂಗ್ರೆಸ್ಸಿಗೆ ಮೋದಿ ಜಾರ್ಖಂಡ್ ನಲ್ಲಿ ಬಹಿರಂಗ ಸವಾಲು ಎಸೆದಿದ್ದರು.

ಮೋದಿ ಎಸೆದ ಚಾಲೆಂಜ್ ಹಿಂದೆ ಹಲವು ಆಯಾಮಗಳಿವೆ

ಮೋದಿ ಎಸೆದ ಚಾಲೆಂಜ್ ಹಿಂದೆ ಹಲವು ಆಯಾಮಗಳಿವೆ

ಜಾರ್ಖಂಡ್ ನಲ್ಲಿ ಮೋದಿ ಎಸೆದ ಚಾಲೆಂಜ್ ಹಿಂದೆ ಹಲವು ಆಯಾಮಗಳಿವೆ. ಮೋದಿ ಉಲ್ಲೇಖಿಸಿದ್ದು ಪ್ರಮುಖವಾಗಿ, ದೆಹಲಿಯಲ್ಲಿ ಇನ್ನೂ ಚುನಾವಣೆ ನಡೆಯಬೇಕಿದೆ ಎಂದು. ಏಳು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ದೆಹಲಿಯಲ್ಲಿ ಮೇ ಹನ್ನೆರಡರಂದು ಚುನಾವಣೆ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

'ನಮ್ಮ ಕುಟುಂಬವನ್ನು ಅವರು ದ್ವೇಷಿಸಬಹುದು, ಆದರೆ ಮೋದಿ ಬಗ್ಗೆ ಪ್ರೀತಿ ಇದೆ''ನಮ್ಮ ಕುಟುಂಬವನ್ನು ಅವರು ದ್ವೇಷಿಸಬಹುದು, ಆದರೆ ಮೋದಿ ಬಗ್ಗೆ ಪ್ರೀತಿ ಇದೆ'

ಇಂದಿರಾ ಸಾವಿನ ನಂತರ ನಡೆದ ಸಿಖ್ ಸಮುದಾಯದ ಮಾರಣಹೋಮ

ಇಂದಿರಾ ಸಾವಿನ ನಂತರ ನಡೆದ ಸಿಖ್ ಸಮುದಾಯದ ಮಾರಣಹೋಮ

ಬರೀ ಬೊಫೋರ್ಸ್ ಹಗರಣವನ್ನು ಇಟ್ಟುಕೊಂಡು ಮೋದಿ ಮಾತನಾಡಲಾರರು ಎನ್ನುವುದು ಕಾಂಗ್ರೆಸ್ಸಿಗೂ ಗೊತ್ತಿದೆ. ಇಂದಿರಾ ಗಾಂಧಿ ದುರಂತ ಸಾವಿನ ನಂತರ ನಡೆದ ಸಿಖ್ ಸಮುದಾಯದ ಮಾರಣಹೋಮದ ಬಗ್ಗೆ ಮೋದಿ ಮಾತನಾಡದೇ ಇರುತ್ತಾರಾ? ದೆಹಲಿಯಲ್ಲಿ ಸಿಖ್ಕರ ಮತಬ್ಯಾಂಕ್ ಶೇ. ಐದರಷ್ಟರಾದರೂ ಬಿಜೆಪಿಗೆ ಇದೇ ಮ್ಯಾಟರ್. ಬಿಜೆಪಿಯ ಲೆಕ್ಕಾಚಾರವೇ ಇದು.. (ಚಿತ್ರಕೃಪೆ: ವಿಕಿಪೀಡಿಯಾ)

ಬಿಜೆಪಿ-ಆಪ್-ಕಾಂಗ್ರೆಸ್ ನಡುವೆ ತ್ರಿಕೋಣ ಸ್ಪರ್ಧೆ

ಬಿಜೆಪಿ-ಆಪ್-ಕಾಂಗ್ರೆಸ್ ನಡುವೆ ತ್ರಿಕೋಣ ಸ್ಪರ್ಧೆ

ದೆಹಲಿಯಲ್ಲಿ ಬಿಜೆಪಿ-ಆಪ್-ಕಾಂಗ್ರೆಸ್ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ. ಹತ್ತು ಹಲವಾರು ಬಾರಿ ಕೇಜ್ರಿವಾಲ್, ಕಾಂಗ್ರೆಸ್ ಜೊತೆ ಕೈಜೋಡಿಸಲು ಮುಂದಾದರೂ, ರಾಹುಲ್ ಗಾಂಧಿ ಇದಕ್ಕೆ ಒಪ್ಪಿರಲಿಲ್ಲ. ಹಾಗಾಗಿ, ದೆಹಲಿಯ ಎಲ್ಲಾ ಏಳು ಲೋಕಾಭಾ ಕ್ಷೇತ್ರಗಳಲ್ಲಿ ಒಂದು ಕಡೆ ಬಿಜೆಪಿ, ಇನ್ನೊಂದು ಕಡೆ ಆಪ್ ಮತ್ತು ಕಾಂಗ್ರೆಸ್. ಮತವಿಭನೆಯಾಗದೇ ಇರುತ್ತಾ ಎನ್ನುವುದು ಸಿಂಪಲ್ ಲೆಕ್ಕಾಚಾರ.

ರಾಜೀವ್ ಗಾಂಧಿ ನಿಧನರಾದ ದಿನ ಏನಾಯ್ತು. ಮೋದಿಗೆ ರಮ್ಯಾ ನೀತಿಪಾಠ : ಟ್ವಿಟ್ಟಿಗರ ವ್ಯಂಗ್ಯರಾಜೀವ್ ಗಾಂಧಿ ನಿಧನರಾದ ದಿನ ಏನಾಯ್ತು. ಮೋದಿಗೆ ರಮ್ಯಾ ನೀತಿಪಾಠ : ಟ್ವಿಟ್ಟಿಗರ ವ್ಯಂಗ್ಯ

ಮೋದಿಯ ಹೊಸ ಸವಾಲು ಸ್ವೀಕರಿಸಲು ಕಾಂಗ್ರೆಸ್ಸಿಗೆ ಸಾಧ್ಯವೇ?

ಮೋದಿಯ ಹೊಸ ಸವಾಲು ಸ್ವೀಕರಿಸಲು ಕಾಂಗ್ರೆಸ್ಸಿಗೆ ಸಾಧ್ಯವೇ?

ತ್ರಿಕೋಣ ಸ್ಪರ್ಧೆಯೇ ಬಿಜೆಪಿಗಾಗುತ್ತಿರುವ ಅಡ್ವಾಂಟೇಜ್ ಎಂದರೆ ತಪ್ಪಾಗಲಾರದು. ಹಾಗಾಗಿ, ಶೇ. ಐದರಷ್ಟು ಸಿಖ್ಖರ ಪ್ರಾಭಲ್ಯ ದೆಹಲಿಯಲ್ಲಿ ಇದ್ದರೂ, ಕಾಂಗ್ರೆಸ್ಸಿಗೆ ಇವರ ಮತ ಸಿಗುವುದು ಕಷ್ಟ ಎಂದೇ ಹೇಳಬಹುದು. ಜಗದೀಶ್ ಟೈಟ್ಲರ್, ಸಜ್ಜನ್ ಕುಮಾರ್, ಕಮಲ್ ನಾಥ್ ಮೇಲೆ ಆ ಸಮುದಾಯಕ್ಕೆ ಇರುವ ಕೋಪ ಇನ್ನೂ ಅಷ್ಟಿಷ್ಟಲ್ಲ. ಇದೇ, ಬಿಜೆಪಿಗಾಗುವ ವರದಾನ.

English summary
Will Congress accept Prime Minister Narendra Modi new challenge, Come to fray in the name of Rajiv Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X