ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಸಿಎಂ ಸ್ಥಾನಕ್ಕೆ ಕೇಳಿ ಬಂತು ಅಚ್ಚರಿಯ ಹೆಸರು!

ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಪ್ರಶ್ನೆ ಎಲ್ಲರ ಕುತೂಹಲ ಕೆರಳಿಸಿದೆ. ಈ ನಡುವೆ ಈ ಕುತೂಹಲ ಇನ್ನಷ್ಟು ಹೆಚ್ಚಿಸಲು ಒಂದು ಅಚ್ಚರಿಯ ಹೆಸರನ್ನು ತೇಲಿ ಬಿಡಲಾಗಿದೆ.

By Mahesh
|
Google Oneindia Kannada News

ಲಕ್ನೋ, ಮಾರ್ಚ್ 11: ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಮೋದಿ ಅಲೆಯೊಂದಿಗೆ ಉತ್ತರಪ್ರದೇಶದ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಹೊರಬಂದಿದೆ. 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಭಾರಿ ಬಹುಮತದೊಂದಿಗೆ ಸರ್ಕಾರ ಸ್ಥಾಪನೆಗೆ ಮುಂದಾಗಿದೆ. ಮುಖ್ಯಮಂತ್ರಿ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಪ್ರಶ್ನೆ ಎಲ್ಲರ ಕುತೂಹಲ ಕೆರಳಿಸಿದೆ. ಈ ನಡುವೆ ಈ ಕುತೂಹಲ ಇನ್ನಷ್ಟು ಹೆಚ್ಚಿಸಲು ಒಂದು ಅಚ್ಚರಿಯ ಹೆಸರನ್ನು ತೇಲಿ ಬಿಡಲಾಗಿದೆ.

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲ್ಲಲು ಕಾರಣವೇನು? ಎಂದರೆ ತಕ್ಷಣಕ್ಕೆ 'ಮೋದಿ ಬ್ರ್ಯಾಂಡ್' ಎಂಬ ಉತ್ತರ ಸಿಗುತ್ತದೆ. ಆದರೆ, ಈ ಬಾರಿ ಅಪನಗದೀಕರಣ, ಸರ್ಜಿಕಲ್ ಸ್ಟ್ರೈಕ್, ಮೀಸಲಾತಿ ಹೋರಾಟದ ನಡುವೆ ಮೋದಿ ಬ್ರ್ಯಾಂಡ್ ಮಂಕಾಗುವ ನಿರೀಕ್ಷೆಗಳಿತ್ತು. ಆದರೆ, ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕುವ ರೀತಿಯಲ್ಲಿ ಬಿಜೆಪಿ ಮುನ್ನುಗ್ಗುತ್ತಿದೆ. 300ರ ಗಡಿದಾಟಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಟ್ರೆಂಡ್ ಹೇಳುತ್ತಿದೆ.[ಯುಪಿಯಲ್ಲಿ ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ?]

Live :ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

Will Amit Shah be Modi’s choice as UP CM?

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಉತ್ತರಪ್ರದೇಶದಲ್ಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿರುವ ದಿನೇಶ್ ಶರ್ಮಾ, ಸಂಸದ ಯೋಗಿ ಆದಿತ್ಯಾನಂದ, ಭೂಮಿಹಾರ್ ಜಾತಿಗೆ ಸೇರಿದ ಮನೋಜ್ ಸಿನ್ಹಾ ಅಲ್ಲದೆ ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ, ಉಮಾಭಾರತಿ ಹೆಸರು ಕೂಡಾ ಕೇಳಿ ಬಂದಿದೆ.[ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ 10 ಕಾರಣ]

ಅಮಿತ್ ಶಾಗೆ ಚಾನ್ಸ್: ಗುಜರಾತಿನ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಮೋದಿ ಅವರು ಈ ಬಾರಿ ಅವಕಾಶ ನೀಡುವ ಸಾಧ್ಯತೆಯಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಉತ್ತರಪ್ರದೇಶದ ಗೂಂಡಾರಾಜ್ ಇಮೇಜ್ ಬದಲಾಯಿಸಿ ಕಾನೂನು ಪರಿಪಾಲನೆ ಮಾಡಲು ಅಮಿತ್ ಅವರು ಸೂಕ್ತ ವ್ಯಕ್ತಿ ಎಂಬ ಅಭಿಪ್ರಾಯ ಕೇಳಿ ಬಂದಿದೆ.

English summary
Bharatiya Janata Party (BJP) would form a majority government in Uttar Pradesh, the discourse has completely shifted to who can be the next chief minister of the state.the most surprising name that has cropped up is of BJP chief Amit Shah
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X