• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರ್‌ಲಿಫ್ಟ್‌ ಮೂಲಕ ಜರ್ಮನಿಯಿಂದ 23 ಮೊಬೈಲ್ ಆಮ್ಲಜನಕ ಘಟಕಗಳ ಸಾಗಣೆ

|

ನವದೆಹಲಿ, ಏಪ್ರಿಲ್ 23: ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿನ ಪ್ರಮಾಣದಿಂದಾಗಿ ಆಸ್ಪತ್ರೆಗೆ ಸೇರುತ್ತಿರುವ ರೋಗಿಗಳ ಸಂಖ್ಯೆ ಅಧಿಕವಾಗಿದೆ. ರೋಗಿಗಳಿಗೆ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದ್ದು, ಆಮ್ಲಜನಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಹೀಗಾಗಿ ಜರ್ಮನಿಯಿಂದ 23 ಮೊಬೈಲ್ ಆಮ್ಲಜನಕ ಘಟಕಗಳನ್ನು ವಿಮಾನಗಳ ಮೂಲಕ ತರಿಸಿಕೊಳ್ಳಲು ರಕ್ಷಣಾ ಸಚಿವಾಲಯ ನಿರ್ಧರಿಸಿ ಪೂರಕ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಪ್ರತಿ ಘಟಕವು ಪ್ರತಿ ನಿಮಿಷಕ್ಕೆ 40 ಲೀಟರ್‌ನಷ್ಟು ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಪ್ರತಿ ಗಂಟೆಗೆ 2400 ಲೀಟರ್‌ಗಳಷ್ಟು ಆಮ್ಲಜನಕ ಉತ್ಪಾದನೆ ಸಾಧ್ಯವಾಗಲಿದೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.

ಆಮ್ಲಜನಕ ಬಿಕ್ಕಟ್ಟಿಗೆ ಮೂರು ಪ್ರಮುಖ ಸಲಹೆ ನೀಡಿದ ಮೋದಿಆಮ್ಲಜನಕ ಬಿಕ್ಕಟ್ಟಿಗೆ ಮೂರು ಪ್ರಮುಖ ಸಲಹೆ ನೀಡಿದ ಮೋದಿ

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಶಸ್ತ್ರಾಸ್ತ್ರ ಪಡೆಗಳ ವೈದ್ಯಕೀಯ ಕೇಂದ್ರದ ಆಸ್ಪತ್ರೆಗಳಲ್ಲಿ ಈ ಮೊಬೈಲ್ ಘಟಕಗಳನ್ನು ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ. ಮುಂದಿನ ವಾರದ ವೇಳೆಗೆ ವಿಮಾನಗಳ ಮೂಲಕ ಈ ಮೊಬೈಲ್ ಘಟಕಗಳು ಭಾರತ ತಲುಪಲಿವೆ ಎಂದು ರಕ್ಷಣಾ ಸಚಿವಾಲಯದ ಪ್ರಧಾನ ವಕ್ತಾರ ಭರತ್ ಭೂಷಣ್ ಬಾಬು ತಿಳಿಸಿದ್ದಾರೆ.

ಈ ಘಟಕಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಣೆ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಘಟಕಗಳನ್ನು ತರಿಸಿಕೊಳ್ಳುವುದಾಗಿ ತಿಳಿದುಬಂದಿದೆ.

ಭಾರತೀಯ ವಾಯುಪಡೆಗೆ ಸರಕು ಸಾಗಿಸುವ ವಿಮಾನಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿದ ಬಳಿಕ ಆಮ್ಲಜನಕ ಘಟಕಗಳನ್ನು ತರಲಾಗುವುದು ಎನ್ನಲಾಗಿದೆ.

English summary
Defence ministry has decided to airlift 23 mobile oxygen generation plants from Germany to tackle shortage of medical oxygen,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X