• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೈಲಟ್ ನಿಗೂಢವಾಗಿ ನಾಪತ್ತೆಯಾಗುವಾಗ ಪತ್ನಿಯೇ ಟ್ರಾಫಿಕ್ ಕಂಟ್ರೋಲರ್!

|

ಪಾಲ್ವಾಲ್(ಹರ್ಯಾಣ), ಜೂನ್ 07: ಸೋಮವಾರ(ಜೂನ್ 03) ಚೀನಾ ಗಡಿಯಲ್ಲಿ ನಾಪತ್ತೆಯಾದ ಭಾರತೀಯ ಸೇನೆಗೆ ಸೇರಿದ An-32 ವಿಮಾನ ಇನ್ನೂ ಪತ್ತೆಯಾಗಿಲ್ಲ. ಅದರಲ್ಲಿದ್ದ 13 ಜನರ ಕತೆ ಏನಾಯಿತು ಎಂಬ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಆದರೆ ನೋವಿನ ಸಂಗತಿ ಎಂದರೆ An-32 ವಿಮಾನವನ್ನು ಮುನ್ನಡೆಸುತ್ತಿದ್ದ ಪೈಲಟ್ ಆಶೀಶ್ ತನ್ವಾರ್ ಅವರ ಪತ್ನಿ ಸಂದ್ಯಾ ತನ್ವಾರ್ ಅವರು ವಿಮಾನ ನಾಪತ್ತೆಯಾಗುವ ಸಂದರ್ಭದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಆಗಿದ್ದರು ಎಂಬ ವಿಷಯವನ್ನು ಆಶೀಶ್ ಅವರ ಕುಟುಂಬಸ್ಥರೇ ತಿಳಿಸಿದ್ದಾರೆ.

ಕಾಣೆಯಾದ ಎಎನ್ 32 ವಿಮಾನ ಹುಡುಕಾಟಕ್ಕೆ ಇಸ್ರೊ ನೆರವು

ಪತಿ ವಿಮಾನ ಚಾಲನೆ ಮಾಡುವಾಗ ಪತ್ನಿಯೇ ಏರ್ ಟ್ರಾಫಿಕ್ ಕಂಟ್ರೋಲರ್ ಆಗಿದ್ದರು. ಅಸ್ಸಾಂನ ಜೋಹ್ರಾತ್ ವಾಯುನೆಲೆಯಿಂದ ಜೂನ್ 3 ರಂದು ಮಧ್ಯಾಹ್ನ 1ಗಂಟೆ ಸುಮಾರಿಗೆ ಈ ವಿಮಾನ ಟೇಕಾಫ್ ಆಗಿತ್ತು. ಪತಿ ಎಂದಿನಂತೆಯೇ ವಿಮಾನ ಚಾಲನೆ ಮಾಡುತ್ತಿರುವುದನ್ನು ಪತ್ನಿ ಸಂದ್ಯಾ ನೋಡಿದ್ದರು. ತಮ್ಮ ಕೆಲಸದಲ್ಲಿ ನಂತರ ತಲ್ಲೀನರಾಗಿದ್ದರು. ಆದರೆ ಟೇಕಾಫ್ ಆದ ಅರ್ಧ ಗಂಟೆಯಲ್ಲೇ ವಿಮಾನ ರಾಡರ್ ಸಂಪರ್ಕ ಕಳೆದುಕೊಂಡಿತ್ತು. ಏರ್ ಟ್ರಾಫಿಕ್ ಕಂಟ್ರೋಲರ್ ಆಗಿದ್ದ ಸಂಧ್ಯಾ ಅವರಿಗೆ ಪತಿ ಇದ್ದ ವಿಮಾನ ನಾಪತ್ತೆಯಾದ ಸುದ್ದಿ ತಕ್ಷಣವೇ ತಿಳಿದಿತ್ತಾದರೂ ಏನೂ ಮಾಡುವಂತಿರಲಿಲ್ಲ. ಏನೋ ಸಮಸ್ಯೆಯಾಗಿರಬೇಕು, ಬಂದೇ ಬರುತ್ತಾರೆ ಎಂದುಕೊಂಡು ನಾಲ್ಕುದಿನವಾದರೂ ಆ ವಿಮಾನದ ಸುಳಿವೂ ಪತ್ತೆಯಾಗಿಲ್ಲ!

ಮತ್ತೆ ಪತಿಯನ್ನು ನೋಡುತ್ತೇನೋ ಇಲ್ಲವೋ!

ಮತ್ತೆ ಪತಿಯನ್ನು ನೋಡುತ್ತೇನೋ ಇಲ್ಲವೋ!

ಪೈಲಟ್ ಆಶೀಶ್ ವಿಮಾನ ಚಲಾಯಿಸುವಾಗ ಆತನನ್ನು ನೋಡಿದ್ದಷ್ಟೆ. ಆತ ಇದುವರೆಗೂ ಪತ್ತೆಯಿಲ್ಲ. ಅವರನ್ನು ಮತ್ತೆ ನೋಡುತ್ತೇನೋ ಇಲ್ಲವೋ ಎಂಬ ಆತಂಕದಲ್ಲೇ ಸಂಧ್ಯಾ ದಿನ ದೂಡುತ್ತಿದ್ದಾರೆ.

ಹೆತ್ತ ಕರುಳಿಗೆ ಸಂಕಟ

ಹೆತ್ತ ಕರುಳಿಗೆ ಸಂಕಟ

"ನನ್ನ ಮಗ ಮತ್ತು ಸೊಸೆ ಇಬ್ಬರೂ ಹಿಂದಿನ ತಿಂಗಳಷ್ಟೇ ಮನೆಗೆ ಬಂದಿದ್ದರು. ಥೈಲೆಂಡ್ ಪ್ರವಾಸಕ್ಕೆ ಹೋಗಿದ್ದ ಅವರು ನಂತರ ಮತ್ತೆ ಕೆಲಸಕ್ಕೆ ತೆರಳಿದ್ದರು. ಇಬ್ಬರೂ ಕೆಲವೇ ದಿನಗಳಲ್ಲಿ ಹಿಂದಿರುಗುತ್ತೇವೆ ಎಂದು ಹೇಳಿ ಆಶೀಶ್ ತೆರಳಿದ್ದ. ಆದರೆ ಈಗಾಗಲೇ ನಾಲ್ಕು ದಿನವಾಗಿದೆ. ಆಶೀಶ್ ನ ಸುಳಿವೂ ಪತ್ತೆಯಾಗಿಲ್ಲ" ಎಂದು ಆಶೀಶ್ ತಾಯಿ ಸರೋಜ್ ತನ್ವಾರ್ ಕಣ್ಣೀರು ಹಾಕುತ್ತಾರೆ.

ಚೀನಾ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆಯ ಏರ್ ಕ್ರಾಫ್ಟ್ ನಾಪತ್ತೆ

ಆತ ಭಾರತಲ್ಲಿ ಇಲ್ಲವೇ ಇಲ್ಲ ಎನ್ನುವ ತಾಯಿ!

ಆತ ಭಾರತಲ್ಲಿ ಇಲ್ಲವೇ ಇಲ್ಲ ಎನ್ನುವ ತಾಯಿ!

"ಆ ವಿಮಾನ ಚೀನಾದ ಗಡಿಯನ್ನು ದಾಟಿದೆ ಎಂದು ನನಗೆ ಬಲವಾಗಿ ಅನ್ನಿಸುತ್ತಿದೆ. ಆದರೂ ಸರ್ಕಾರ ಏಕೆ ಚೀನಾ ಸರ್ಕಾರದೊಂದಿಗೆ ಈ ಬಗ್ಗೆ ಮಾತುಕತೆ ನಡೆಸುತ್ತಿಲ್ಲ? ಕಾರ್ಯಾಚರಣೆಯೇನೋ ನಡೆಯುತ್ತಿದೆ. ಆದರೆ ಹವಾಮಾನ ವೈಪರೀತ್ಯದಿಂದ ಸರಿಯಾಗಿ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ನಾವು ಏನು ಮಾಡಬೇಕು?" ಎಂಬುದು ತಾಯಿಯ ಪ್ರಶ್ನೆ!

ಕುಟುಂಬವೇ ಸೇನೆಗಾಗಿ ಮೀಸಲು!

ಕುಟುಂಬವೇ ಸೇನೆಗಾಗಿ ಮೀಸಲು!

ಆಶಿಶ್ ತನ್ವಾರ್ ಅವರ ಪೂರ್ತಿ ಕುಟುಂಬವೇ ಸೇನೆಗೆ ತಮ್ಮ ಬದುಕನ್ನು ಮೀಸಲಿರಿಸಿದೆ. ಅವರ ಕುಟುಂಬದಲ್ಲಿ ಬಹುಪಾಲು ಎಲ್ಲರೂ ವಾಯುಸೇನೆ ಇಲ್ಲವೇ ಭೂಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಆಶೀಶ್ ಅವರೂ ಸೇನೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು. 2015 ರಲ್ಲಿ ಪೈಲಟ್ ಆಗಿ ಸೇರಿಕೊಂಡ ಆಶೀಶ್ ಗೆ ಪೈಲಟ್ ಆಗಿ ನಾಲ್ಕು ವರ್ಷಗಳ ಅನುಭವವೂ ಇದೆ. ಆಶೀಶ್ ಅವರ ಪತ್ನಿ ಸಂಧ್ಯಾ ಫೈಟ್ ಲೆಫ್ಟಿನೆಂಟ್ ಆಗಿ, ಭಾರತೀಯ ವಾಯುಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

English summary
Ashish Tnwar who is a pilot of An 32 aircraft, which was missing Mysterious since 4 days has not traced yet. But an unfortunate thing is that his wife Sandhya Tanwar was the Air traffic controller when aircraft was missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more