ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಥುರಾದಲ್ಲಿ ಹೇಮಮಾಲಿನಿ ನಾಲಗೆ ಕಚ್ಚಿಕೊಂಡಿದ್ದೇಕೆ?

By Mahesh
|
Google Oneindia Kannada News

ಮಥುರಾ, ಸೆ.18: ಸಾವಿರಾರು ನಿರ್ಗತಿಕ ಅಬಲೆಯರ ಅಭಯ ಕೇಂದ್ರವಾಗಿರುವ ಉತ್ತರ ಪ್ರದೇಶದ ಪವಿತ್ರ ನಗರ 'ಬೃಂದಾವನದಲ್ಲಿ' ಬಂಗಾಳ ಹಾಗೂ ಬಿಹಾರದ ವಿಧವೆಯರು ಗುಂಪುಗೂಡಬಾರದು ಎಂದು ನಟಿ ಹಾಗೂ ಸಂಸದೆ ಹೇಮಮಾಲಿನಿ ಹೇಳಿಕೆ ನೀಡಿ ನಾಲಗೆ ಕಚ್ಚಿಕೊಂಡಿದ್ದೇಕೆ? ಈ ರೀತಿ ಹೇಳಿಕೆ ನೀಡಲು ಕಾರಣವೇನು? ಇಲ್ಲಿದೆ ಈ ಬಗ್ಗೆ ವಿವರಣೆ

"ಬೃಂದಾವನದ ವಿಧವೆಯರ ಬ್ಯಾಂಕ್ ಖಾತೆಯಲ್ಲಿ ಹಣವಿದೆ, ಉತ್ತಮ ಆದಾಯವಿದೆ, ಉತ್ತಮ ಹಾಸಿಗೆಗಳನ್ನು ಅವರಿಗೆ ಒದಗಿಸಿಕೊಡಲಾಗುತ್ತಿದೆ. ಆದರೆ ಭಿಕ್ಷೆ ಬೇಡುವುದು ಅವರ ಹವ್ಯಾಸವಾಗಿ ಬಿಟ್ಟಿದೆ" ಎಂಬ ಹೇಳಿಕೆ ನೀಡಿ ಮಥುರಾ ಕ್ಷೇತ್ರದ ಸಂಸದೆ ವಿವಾದವನ್ನು ಸೃಷ್ಟಿಸಿದ್ದರು. ತಮ್ಮ ಕ್ಷೇತ್ರ ಪ್ರವಾಸಕ್ಕೆಂದು ಬಂದಿದ್ದ ಹೇಮಮಾಲಿನಿ ಅವರನ್ನು ನೋಡಲು ಬೃಂದಾವನದ ವಿಧವೆಯರು ಕಾತುರರಾಗಿದ್ದರು. [ಕೃಷ್ಣಭಕ್ತೆಯರ ನಿರ್ಲಕ್ಷ್ಯವೇಕೆ?]

65 ವರ್ಷದ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ತನ್ನ ಸಂಸದೀಯ ಕ್ಷೇತ್ರ ಮಥುರಾಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಈ ಹೇಳಿಕೆ ನೀಡಿದ್ದರು. ಮಥುರಾ ಜಿಲ್ಲೆಯಲ್ಲಿ ಪವಿತ್ರ ಬೃಂದಾವನವಿದೆ. "ವೃಂದಾವನದಲ್ಲಿ 20,000 ವಿಧವೆಯರಿದ್ದಾರೆ ಎಂದು ನನಗನಿಸುತ್ತಿದೆ. ನಗರದಲ್ಲಿ ಇನ್ನು ಜಾಗವೇ ಇಲ್ಲ ಎಂಬುದು ನನ್ನ ಅನಿಸಿಕೆ. ಹೇರಳ ಸಂಖ್ಯೆಯ ಜನರು ಬಂಗಾಳದಿಂದ ಇಲ್ಲಿಗೆ ಆಗಮಿಸುತ್ತಾರೆ. ಇದು ಸರಿಯಲ್ಲ. ಅವರು ಬಂಗಾಳದಲ್ಲಿ ಯಾಕೆ ನೆಲೆಸುವುದಿಲ್ಲ? ಅಲ್ಲಿ ಕೂಡ ಉತ್ತಮ ದೇವಸ್ಥಾನಗಳಿವೆ. ಬಿಹಾರದಿಂದ ಬರುವವರಿಗೂ ಇದು ಅನ್ವಯಿಸುತ್ತದೆ" ಎಂದು ಹೇಮಮಾಲಿನಿ ಹೇಳಿದ್ದರು.

ಹೇಮಮಾಲಿನಿ ಹೇಳಿಕೆಯಲ್ಲಿನ ವಿವಾದಗಳೆನು?

ಹೇಮಮಾಲಿನಿ ಹೇಳಿಕೆಯಲ್ಲಿನ ವಿವಾದಗಳೆನು?

* ಬೃಂದಾವನದ ವಿಧವೆಯರ ಬ್ಯಾಂಕ್ ಖಾತೆಯಲ್ಲಿ ಹಣವಿದೆ, ಉತ್ತಮ ಆದಾಯವಿದೆ, ಉತ್ತಮ ಹಾಸಿಗೆಗಳನ್ನು ಅವರಿಗೆ ಒದಗಿಸಿಕೊಡಲಾಗುತ್ತಿದೆ. ಆದರೆ ಭಿಕ್ಷೆ ಬೇಡುವುದು ಅವರ ಹವ್ಯಾಸವಾಗಿ ಬಿಟ್ಟಿದೆ ಇದು ಸರಿಯಲ್ಲ.
* ಪಶ್ಚಿಮ ಬಂಗಾಳ ಹಾಗೂ ಬಿಹಾರದ ವಿಧವೆಯರು ಗುಂಪುಗೂಡಿ ಬೃಂದಾವನದಲ್ಲಿ ಜನದಟ್ಟಣೆ ಹೆಚ್ಚಿಸಬಾರದು.
* ಬೇರೆ ಪ್ರದೇಶಗಳಿಂದ ಬಂದಿರುವ ವಿಧವೆಯರು ಇಲ್ಲಿ ನೆಲೆಗೊಳ್ಳಲು ಉತ್ತಮ ಸೌಲಭ್ಯ ಒದಗಿಸಿಲ್ಲ ಹಾಗೂ ಆಯಾ ರಾಜ್ಯದವರು ಇವರ ಹೊಣೆ ಹೊತ್ತಿಲ್ಲ ಏಕೆ?

ಮಥುರಾದಲ್ಲಿ ಪರಿಸ್ಥಿತಿ ಹೇಗಿದೆ?

ಮಥುರಾದಲ್ಲಿ ಪರಿಸ್ಥಿತಿ ಹೇಗಿದೆ?

ಗಂಡನನ್ನು ಕಳೆದುಕೊಂಡು, ಮಕ್ಕಳಿಂದಲೂ ಪರಿತ್ಯಕ್ತರಾದ ಈ ಅಬಲೆಯರಿಗೆ ಕೃಷ್ಣ ಪರಮಾತ್ಮನ ಆರಾಧನೆ ಮಾನಸಿಕ ನೆಮ್ಮದಿ, ಶಾಂತಿ ಸಿಗುತ್ತಿದೆ. ಮನೆಯಲ್ಲಿ ವಿಧವೆಯರನ್ನು ಇರಿಸಿಕೊಳ್ಳುವುದು ಅಶುಭ ಎಂಬ ಕೆಟ್ಟ ಸಂಪ್ರದಾಯ ಇಂದಿಗೂ ಭಾರತದ ಹಲವೆಡೆ ಜಾರಿಯಲ್ಲಿದೆ. ಇಂಥವರಿಗೆ ಸುಲಭ ಇಂಟರ್ ನ್ಯಾಷನಲ್ ಸಂಸ್ಥೆ ಸೇರಿದಂತೆ ಹಲವು ಸಂಘಟನೆಗಳು ಆಶ್ರಯ ಒದಗಿಸಿವೆ.

ಬಹುತೇಕ ಪಶ್ಚಿಮ ಬಂಗಾಳದ ಮೂಲದವರಾದ ಇಲ್ಲಿನ ವಿಧವೆಯರಲ್ಲಿ ವಯೋವೃದ್ಧೆಯರೇ ಅಧಿಕ ಪ್ರಮಾಣದಲ್ಲಿದ್ದಾರೆ. 2000ಕ್ಕೂ ಅಧಿಕ ಪರರಾಜ್ಯದ ವಿಧವೆಯರು ನೆಲೆಗೊಂಡಿದ್ದು, ಭಿಕ್ಷೆ ಬೇಡಿ ನಿತ್ಯದ ಊಟ ಸಂಪಾದಿಸುತ್ತಿದ್ದಾರೆ. ಇತರೆ ರಾಜ್ಯದಿಂದ ಇಲ್ಲಿಗೆ ವಲಸೆ ಬಂದಿರುವ ವಿಧವೆಯರ ಬಗ್ಗೆ ಸ್ಥಳೀಯರು ಹೆಚ್ಚಿನ ಗಮನ ಹರಿಸುತ್ತಿಲ್ಲ.

ಹೇಮಮಾಲಿನಿಗೆ ಹೆಚ್ಚಿನ ವಿಧವೆಯರು ಮತ ಹಾಕಿಲ್ಲ

ಹೇಮಮಾಲಿನಿಗೆ ಹೆಚ್ಚಿನ ವಿಧವೆಯರು ಮತ ಹಾಕಿಲ್ಲ

ಇಲ್ಲಿನ ಹಿರಿಯ ವಿಧವೆ 95 ವರ್ಷದ ಕಂಚನ್ ಅವರು ಹೇಳುವ ಪ್ರಕಾರ ಇಲ್ಲಿತನಕ ಯಾವುದೇ ರಾಜಕೀಯ ಪಕ್ಷ ಆಶ್ರಮದತ್ತ ಸುಳಿದಿಲ್ಲ. ವೋಟರ್ ಐಡಿ ಕಾರ್ಡ್ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ. ಮನೆಯಿಂದ ಹೊರಗುಳಿದಿರುವ ನಾವು ಈಗ ದೇಶಕ್ಕೂ ಬೇಡವಾಗಿ ಬದುಕಬೇಕೇ? ಎಂದು ಕೃಷ್ಣಭಕ್ತೆಯರು ಪ್ರಶ್ನಿಸುತ್ತಿದ್ದಾರೆ.

ಇತ್ತೀಚೆಗೆ ಆಶ್ರಮವಾಸಿಗಳಲ್ಲಿ ಕೆಲವರು ಆಧಾರ್ ಕಾರ್ಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮತದಾರರರ ಗುರುತಿನ ಚೀಟಿ ಸಿಕ್ಕಿಲ್ಲ. ಜತೆಗೆ ಮತದಾರರ ಪಟ್ಟಿಯಲ್ಲೂ ಆಶ್ರಮವಾಸಿಗಳ ಹೆಸರು ನಾಪತ್ತೆಯಾಗಿದೆ. ಹೀಗಾಗಿ ಮತದಾನ ಇಲ್ಲಿನವರಿಗೆ ಇಲ್ಲಿ ತನಕ ಕಷ್ಟಕರವಾಗಿದೆ ಎಂದು ಮೈತ್ರಿ ಆಶ್ರಮದ ಮ್ಯಾನೇಜರ್ ಸಂತೋಷ್ ಚತುರ್ವೇದಿ ಹೇಳಿದ್ದಾರೆ.

ಹೇಮಮಾಲಿನಿ ನಾಪತ್ತೆಯಾಗಿದ್ದಾರೆ ಎಂದು ಪೋಸ್ಟರ್

ಹೇಮಮಾಲಿನಿ ನಾಪತ್ತೆಯಾಗಿದ್ದಾರೆ ಎಂದು ಪೋಸ್ಟರ್

ಶಿಥಿಲಾವಸ್ಥೆಯಲ್ಲಿರುವ ಆಶ್ರಯ ಮನೆಗೆ ಪ್ರವಾಸ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹೇಮಮಾಲಿನಿ, ತಾನು ಈ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಥುರಾ ಕ್ಷೇತ್ರದಿಂದ ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಹೇಮಮಾಲಿನಿ ಸಂಸತ್ ಪ್ರವೇಶಿಸಿದ್ದರು. ಆದರೆ ಕ್ಷೇತ್ರಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ 'ನಾಪತ್ತೆಯಾಗಿದ್ದಾರೆ' ಎಂದು ಘೋಷಿಸಿ ವ್ಯಂಗ್ಯ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿರುವ ಹೇಮಮಾಲಿನಿ ತನ್ನ ಗೈರು ಹಾಜರಿಗಾಗಿ ಟೀಕೆಗೆ ಗುರಿಯಾಗಿದ್ದರು.

ಸಂಸತ್ತಿನಲ್ಲೂ ಹೇಮಮಾಲಿನಿ ಶೇ 14ರಷ್ಟು ಹೊತ್ತು ಮಾತ್ರ ಹಾಜರಾತಿ ಆಗಿದ್ದರು ಎಂದು ಪಿಆರ್ಎಸ್ ದಾಖಲೆ ತೋರಿಸುತ್ತಿದೆ. ಲೋಕಸಭೆ ಚುನಾವಣೆ 2014 ಸಂದರ್ಭದಲ್ಲಿ ಕ್ಷೇತ್ರದ ಅಭ್ಯರ್ಥಿಯಾಗಿ ವಿಧವೆಯರ ಆಶ್ರಮದತ್ತ ಹೇಮಮಾಲಿನಿ ಸುಳಿದಿರಲಿಲ್ಲ ಎಂಬುದನ್ನು ಮರೆಯುವಂತಿಲ್ಲ.

English summary
BJP's Lok Sabha MP from Mathura-Vrindavan, Hema Malini has courted controversy over her statement that widows from Bengal and Bihar should stay in their respective States, instead of crowding Vrindavan. She made statement after discovering poor living conditions in a shelter home in Vrindavan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X