• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಟ್ನಾ ರೈಲ್ವೆ ನಿಲ್ದಾಣದ ವೈಫೈ ಹೆಚ್ಚು ಬಳಕೆಯಾಗಿದ್ದು ಬ್ಲೂಫಿಲ್ಮ್ ನೋಡಲು!

By Ramesh
|

ಪಾಟ್ನಾ, ಅಕ್ಟೋಬರ್. 18 : ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ ಉಚಿತ ವೈಫೈ ಸೇವೆ ಬ್ಲೂಫಿಲ್ಮ್ ನೋಡಲು ಹೆಚ್ಚಾಗಿ ಬಳಕೆಯಾಗುತ್ತಿದೆಯಂತೆ. ಹೀಗೆಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ರೈಲು ನಿಲ್ದಾಣಗಳಲ್ಲಿ ಕಲ್ಪಿಸಿರುವ ಉಚಿತ ಇಂಟರ್ನೆಟ್ ಸೇವೆ (ವೈ-ಫೈ) ಅತಿಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದು ಬಿಹಾರದ ಪಟ್ನಾ ರೈಲು ನಿಲ್ದಾಣದಲ್ಲಿ. ಇಲ್ಲಿ ಜನ ಇಂಟರ್ನೆಟ್ ಸಂಪರ್ಕವನ್ನು ಹೆಚ್ಚು ಬಳಸಿರುವುದು ಬ್ಲೂಫಿಲ್ಮ್ ವೀಕ್ಷಿಸಲು. ಪ್ರಯಾಣಿಕರು ಯಾವ ವೆಬ್‌ಸೈಟ್‌ಗೆ ಹೆಚ್ಚು ಭೇಟಿ ನೀಡುತ್ತಾರೆ ಎಂಬ ಬಗ್ಗೆ ಅಧಿಕಾರಿಗಳು ನಡೆಸಿದ ಪರಿಶೀಲನೆಯಿಂದ ಈ ಮಾಹಿತಿ ಬಹಿರಂಗವಾಗಿದೆ.

ಬಿಹಾರದಲ್ಲಿ ವೈ-ಫೈ ಸೌಲಭ್ಯವನ್ನು ಮೊದಲು ಕಲ್ಪಿಸಿದ್ದು ಪಾಟ್ನಾ ರೈಲು ನಿಲ್ದಾಣದಲ್ಲಿ. ಈ ನಿಲ್ದಾಣದ ಮೂಲಕ ಪ್ರತಿನಿತ್ಯ 200ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತವೆ. ಪಟ್ನಾ ನಿಲ್ದಾಣದಲ್ಲಿ ಜನ ಬ್ಲೂಫಿಲ್ಮ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ಅಲ್ಲಿಂದ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ.

ಜತೆಗೆ ಯೂಟ್ಯೂಬ್ ನಲ್ಲಿನ ವಿಡಿಯೊ ವೀಕ್ಷಣೆಗೆ, ವೈ-ಫೈ ಸೌಲಭ್ಯವನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ಅವರು ವಿವರಿಸಿದರು. ಇನ್ನು ಕೆಲವರು ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಕೊಳ್ಳಲು, ಬಾಲಿವುಡ್‌ ಹಾಗೂ ಹಾಲಿವುಡ್‌ ಸಿನಿಮಾ ಡೌನ್‌ಲೋಡ್‌ ಮಾಡಿಕೊಳ್ಳಲು ವೈ-ಫೈ ಬಳಸುತ್ತಿದ್ದಾರೆ ಎಂದರು.

ಕಳೆದ ತಿಂಗಳಷ್ಟೇ ಪಾಟ್ನಾ ರೈಲು ನಿಲ್ದಾಣದಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಆರಂಭಿಸಲಾಗಿತ್ತು. ಇದುವರೆಗೆ ದೇಶದ 23 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಆರಂಭಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
tops the chart in terms of internet search using the free Wi-Fi service, though the maximum searches were for porn sites, a railway official said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more