ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸಿಗೆ ಟ್ಯಾಂಪರಿಂಗ್ ಭಯ, ಸೂರತ್ ನಲ್ಲಿ ವೈ-ಫೈ ಸ್ಥಗಿತ

By Sachhidananda Acharya
|
Google Oneindia Kannada News

ಸೂರತ್, ಡಿಸೆಂಬರ್ 18: ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಗಳನ್ನು ಹ್ಯಾಕ್ ಮಾಡಬಹುದು ಮತ್ತು ಟ್ಯಾಂಪರಿಂಗ್ ಮಾಡಬಹುದು ಎಂಬ ಭಯವನ್ನು ಕಾಂಗ್ರೆಸ್ ಅಭ್ಯರ್ಥಿ ವ್ಯಕ್ತಪಡಿಸಿದ್ದರಿಂದ ಸೂರತ್ ನ ಕಾಲೇಜಿನಲ್ಲಿ ವೈ-ಫೈ ಸ್ಥಗಿತಗೊಳಿಸಲಾಗಿದೆ.

LIVE: ಹಿಮಾಚಲ ಪ್ರದೇಶ ಮುನ್ನಡೆ: 22ರಲ್ಲಿ ಬಿಜೆಪಿ 16, ಕಾಂಗ್ರೆಸ್ 6LIVE: ಹಿಮಾಚಲ ಪ್ರದೇಶ ಮುನ್ನಡೆ: 22ರಲ್ಲಿ ಬಿಜೆಪಿ 16, ಕಾಂಗ್ರೆಸ್ 6

ಕಾಮ್ರೇಜ್ ಕ್ಷೇತ್ರದ ಅಶೋಕ್ ಜರಿವಾಲಾ, ಮತಪೆಟ್ಟಿಗೆಗಳನ್ನು ಇಟ್ಟಿರುವ ಗಾಂಧಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕಿಂಗ್ ನಡೆಯಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಅವರು ದೂರು ಕೂಡಾ ನೀಡಿದ್ದರು. ಹೀಗಾಗಿ ಈ ಕಾಲೇಜಿನಲ್ಲಿ ವೈ-ಫೈ ಸ್ಥಗಿತಗೊಳಿಸಲಾಗಿದೆ.

Wi-Fi Service Suspended Near EVMs In Surat

"ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಂ ಸುತ್ತ ವೈ-ಫೈ ಸಿಗುತ್ತಿರುವುದನ್ನು ನಾವು ಗಮನಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೆವು," ಎಂದು ಜರಿವಾಲಾ ಹೇಳಿದ್ದಾರೆ.

ನಾವು ಈ ಬಗ್ಗೆ ಎರಡು ದಿನ ಮೊದಲೇ ದೂರು ನೀಡಿದ್ದೆವು. ಆದರೆ ಒಮ್ಮೆ ವೈ-ಫೈ ಸ್ಥಗಿತಗೊಳಿಸಿ ನಂತರ ಮತ್ತೆ ಆರಂಭಿಸಲಾಯಿತು. ಹ್ಯಾಕಿಂಗ್ ಮತ್ತು ಟ್ಯಾಂಪರಿಂಗ್ ನಡೆಯುವ ಭಯದಲ್ಲಿ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಗುಜರಾತ್ ಚುನಾವಣಾ ರಿಯಾಲಿಟಿ ಶೋ ಫಿನಾಲೆ - LIVEಗುಜರಾತ್ ಚುನಾವಣಾ ರಿಯಾಲಿಟಿ ಶೋ ಫಿನಾಲೆ - LIVE

ಇದೀಗ ಸೂರತ್ ಜಿಲ್ಲಾಧಿಕಾರಿ ಮಹೇಂದ್ರ ಪಟೇಲ್ ಕಾಲೇಜಿಲ್ಲಿ ವೈ-ಫೈ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.

ಈ ಕಾಲೇಜಿನಲ್ಲಿ ಒಲ್ಪಾಡ್, ಮಂಡ್ವಿ, ಮಹುವಾ, ವ್ಯಾರಾ, ಕಾಮ್ರೇಜ್ ಮತ್ತು ಮಂಗ್ರೋಲ್ ಕ್ಷೇತ್ರಗಳ ಮತಪೆಟ್ಟಿಗೆಗಳನ್ನು ಇಡಲಾಗಿದೆ. ಇಲ್ಲಿಯೇ ಇಂದು ಮತಎಣಿಕೆ ನಡೆಯುತ್ತಿದೆ.

English summary
The Wi-Fi service at a college in Surat was suspended after the Congress candidate from the Kamrej Assembly seat complained of possible hacking and tampering with the EVMs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X