• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮಿತ್ ಶಾ ಆಸ್ಪತ್ರೆಗೆ ದಾಖಲು: ಕಾಂಗ್ರೆಸ್ ಮುಖಂಡ ಶಶಿ ತರೂರ್ ಗೆ ಕಾಡಿದ ಪ್ರಶ್ನೆ

|

ನವದೆಹಲಿ, ಆ 3: ಕೊರೊನೊ ಸೋಂಕಿತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುರುಗ್ರಾಮದ ಆಸ್ಪತ್ರೆಯಲ್ಲಿ ದಾಖಲಾಗಿರುವುದಕ್ಕೆ ಕಾಂಗ್ರೆಸ್ ಮುಖಂಡ, ತಿರುವನಂತಪುರಂ ಸಂಸದ ಶಶಿ ತರೂರ್ ಗಂಭೀರ ಪ್ರಶ್ನೆಯೊಂದನ್ನು ಎತ್ತಿದ್ದಾರೆ.

   Siddaramaiah Covid : ಮಾಜಿ ಹಾಗು ಹಾಲಿ ಮುಖ್ಯಮಂತ್ರಿಗಳು ಒಂದೇ ಆಸ್ಪತ್ರೆಯಲ್ಲಿ | Oneindia Kannada

   ಟ್ವೀಟ್ ಒಂದಕ್ಕೆ ಉತ್ತರಿಸುತ್ತಾ ತರೂರ್, ಅಮಿತ್ ಶಾ ಯಾಕೆ ಏಮ್ಸ್ ಆಸ್ಪತ್ರೆಗೆ ದಾಖಲಾಗದೇ , ಬೇರೆ ರಾಜ್ಯದ ಆಸ್ಪತ್ರೆಗೆ ದಾಖಲಾದರು ಎಂದು ಪ್ರಶ್ನಿಸಿದ್ದಾರೆ. ಅಮಿತ್ ಶಾ, ಹರ್ಯಾಣದ, ಗುರುಗ್ರಾಮದಲ್ಲಿರುವ ಮೆದಾಂತ ಆಸ್ಪತ್ರೆಗೆ ದಾಖಲಾಗಿದ್ದಾರೆ.

   ಅಮಿತ್ ಶಾಗೆ ಕೊರೊನಾ, ಮೋದಿ ಸೇರಿ ಕೇಂದ್ರ ನಾಯಕರಿಗೆ ಆತಂಕ!

   "ನವ ಭಾರತಕ್ಕೆ ಏಮ್ಸ್ ದೇವಾಲಯವಿದ್ದಂತೆ, ದೇಶದ ಮೊದಲ ಪ್ರಧಾನಿ ನೆಹರೂ ಅವರ ದೂರದೃಷ್ಟಿ ಇದರಲ್ಲಿ ಗೋಚರಿಸುತ್ತದೆ" ಎಂದು ಶಶಿ ತರೂರ್ ಅವರನ್ನು ಟ್ಯಾಗ್ ಮಾಡಿ, ಟ್ವೀಟ್ ಮಾಡಲಾಗಿತ್ತು.

   ಇದಕ್ಕೆ ಪ್ರತಿಕ್ರಿಯಿಸಿದ ತರೂರ್, "ನಿಜ. ನಮ್ಮ ಗೃಹ ಸಚಿವರು ಕೊರೊನೊ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ರಾಜಧಾನಿಯಲ್ಲೇ ಇರುವ ಏಮ್ಸ್ ಆಸ್ಪತ್ರೆಗೆ ದಾಖಲಾಗುವುದು ಬಿಟ್ಟು, ಪಕ್ಕದ ರಾಜ್ಯದ ಆಸ್ಪತ್ರೆಗೆ ಯಾಕೆ ದಾಖಲಾದರು".

   "ಸಾರ್ವಜನಿಕ ಸಂಸ್ಥೆಗಳು ಜನಸಾಮಾನ್ಯರ ವಿಶ್ವಾಸ ವೃದ್ದಿಸಿಕೊಳ್ಳ ಬೇಕಾದರೆ, ಪ್ರಬಲರ ಪ್ರೋತ್ಸಾಹ ಅತ್ಯಗತ್ಯ"ಎಂದು ಶಶಿ ತರೂರ್ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಭಾನುವಾರ (ಆ 2) ಮಧ್ಯಾಹ್ನ ಅಮಿತ್ ಶಾ ಆಸ್ಪತ್ರೆಗೆ ದಾಖಲಾಗಿದ್ದರು.

   "ಕೊರೊನಾದ ಆರಂಭಿಕ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದೆ. ಸೋಂಕು ಇರುವುದು ದೃಢಪಟ್ಟಿದೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ"ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.

   English summary
   Why Union Home Minister Amit Shah Not Admitted At AIIMS, Congress Leader Shashi Tharoor Questions
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X