• search

ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನಿಡುತ್ತಾರೆ ಏಕೆ?

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಲೈಲಾ, ಫೇಟ್, ಗಿರಿ, ಐಲಾ, ಫಾನ್ ಭಾರತದಲ್ಲಿ ಕಾಣಿಸಿಕೊಂಡಿತ್ತು. ಅಮೆರಿಕದಲ್ಲಿ ಸ್ಯಾಂಡಿ ನಂತರ ಕತ್ರೀನಾ ಹರಿಕೇನ್ ಡ್ಯಾನ್ಸ್ ಮಾಡಿದ್ದಳು. ಪೈಲೀನ್ ಎಂಬ ನೀಲಮಣಿ ದರ್ಶನವಾಗಿತ್ತು. ಹುಡ್ ಹುಡ್ ಅಲ್ಲದೆ ಇನ್ನೂ ಅನೇಕ ಚಂಡ ಮಾರುತಗಳ ಹೆಸರನ್ನು ಕೇಳಿರುತ್ತೀರಿ. ಈಗ ಕಾಟ ಕೊಡುತ್ತಿರುವ ಮಾರುತಕ್ಕೆ ಓಖಿ ಎಂದು ಹೆಸರಿಡಲಾಗಿದೆ.

  ಸಾಮಾನ್ಯವಾಗಿ ಸ್ತ್ರೀನಾಮಗಳನ್ನೇ ಹೆಚ್ಚಾಗಿ ಚಂಡ ಮಾರುತಗಳಿಗೆ ಇಡಲಾಗುತ್ತದೆ ಎಂಬ ನಂಬಿಕೆ ಇದೆ. ಆದರೆ, ಇದು ಅರ್ಧಸತ್ಯ ಮಾತ್ರ. ಪೂರ್ವ ನಿರ್ಧಾರಿತ ಪಟ್ಟಿಯಂತೆ ಅರ್ಧದಷ್ಟು ಮಾತ್ರ ಮಹಿಳೆಯರ ಹೆಸರಿರುತ್ತದೆ. ಮಿಕ್ಕಂತೆ ಪುರುಷರು, ಹಕ್ಕಿಗಳ ಹೆಸರನ್ನು ಇಡಲಾಗುತ್ತದೆ.

  ಓಖಿಗೂ ಮುನ್ನ ಭಾರತೀಯರ ನಿದ್ದೆಕೆಡಿಸಿದ್ದ 7 ಕ್ರೂರ ಚಂಡಮಾರುತ

  ಈ ಹಿಂದೆ ಹುಡ್ ಹುಡ್ ಹೆಸರಿನ ಚಂಡಮಾರುತ ಅಪ್ಪಳಿಸಿತ್ತು. ಇದು ಬುಲ್ ಬುಲ್, ಚಿಟ್ಟೆಗಳ ಹೆಸರನ್ನು ಸೂಚಿಸಲಾಗುತ್ತದೆ. ಹಿಂದೂ ಮಹಾ ಸಾಗರವನ್ನು ಹಂಚಿಕೊಂಡಿರುವ ರಾಷ್ಟ್ರಗಳು ಒಂದೊಂದಾಗಿ ಚಂಡಮಾರುತಕ್ಕೆ ಹೆಸರಿಡುವ ಅವಕಾಶ ಗಿಟ್ಟಿಸುತ್ತಾರೆ

  In Pics : ಓಖಿ ಸೋಕಿದ ಊರೆಲ್ಲ ನೀರೋ ನೀರು, ನೆಲ ನೋಡಿದ ಮರಗಳು

  ಭಾರತದ ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಭಾಗದಲ್ಲಿ ಏಳುವ ಭಾರಿ ಅಲೆಗಳಿಗೆ ಸುಲಭವಾಗಿ ಹೆಸರಿಡುವುದನ್ನು ಇಲಾಖೆ ಅಭ್ಯಾಸ ಮಾಡಿಕೊಂಡಿದೆ.

  ಸ್ತ್ರೀ, ಪುರುಷರಲ್ಲದೆ ಸಂತರ ಹೆಸರು ಬಳಸುವುದೇಕೆ? ದಕ್ಷಿಣ ಏಷ್ಯಾದಲ್ಲಿ ಹೆಸರಿಡುವುದು ಹೇಗೆ? ಮುಂದೆ ಓದಿ...

  ಮಹಿಳೆಯ ಹೆಸರು ಏಕೆ?

  ಮಹಿಳೆಯ ಹೆಸರು ಏಕೆ?

  ಇದು ಕೂಡಾ ಕುತೂಹಲಕಾರಿಯಾಗಿದೆ.ಚಂಡಿಯಂತೆ ಆಡುವ ಮಾರುತಗಳಿಗೆ ಸ್ತ್ರೀಲಿಂಗ ನಾಮಗಳೇ ಇದೆ ಏಕೆ? ಎಂಬ ಪ್ರಶ್ನೆ ಥಟ್ಟನೆ ಬರುವುದು ಸಹಜ. ಎರಡನೇ ಮಹಾ ಸಮರದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು.

  WMO ಅಕ್ಷರ ಮಾಲೆ ಪ್ರಕಾರ ಹೆಸರುಗಳನ್ನು ಬದಲಾಯಿಸುತ್ತಾ ಹೋಗಲು ನಿರ್ಧರಿಸಿತು. ಇದು ಕೂಡಾ ಚಂಡಮಾರುತ ಹೊಡೆತಕ್ಕೆ ಸಿಲುಕಿದ ದೇಶಗಳ ಮನವಿ ಮೇರೆಗೆ ಹೆಸರುಗಳನ್ನು WMO ಸೂಚಿಸುತ್ತಾ ಬಂದಿದೆ. ಒಮ್ಮೆ ಬಳಸಿದ ಹೆಸರನ್ನು 10 ವರ್ಷಗಳವರೆಗೂ ಬಳಸುವುದಿಲ್ಲ. ಇದು ಐತಿಹಾಸಿಕವಾಗಿ ಹಾಗೂ ವಿಮೆ ಹಿಂಪಡೆಯುವುದಕ್ಕೆ ಸುಲಭವಾಗುವಂಥ ವ್ಯವಸ್ಥೆಯಾಗಿದೆ.

  WMO ಹೆಸರುಗಳ ಪಟ್ಟಿ

  WMO ಹೆಸರುಗಳ ಪಟ್ಟಿ

  ಪ್ರಸ್ತುತ ವಿಶ್ವ ಹವಾಮಾನ ಸಂಸ್ಥೆ(WMO) ಸುಮಾರು 6 ಪಟ್ಟಿ ಹೊಂದಿದ್ದು ಸುಮಾರು 21 ಹೆಸರುಗಳಿದೆ.( Q, U, X, Y ಹಾಗೂ Z ಅಕ್ಷರದಿಂದ ಬರುವ ಹೆಸರುಗಳನ್ನು ಬಳಕೆ ಮಾಡುತ್ತಿಲ್ಲ) ಪ್ರತಿ 6 ವರ್ಷಕ್ಕೊಮ್ಮೆ ಪಟ್ಟಿ ಬದಲಾಗುತ್ತದೆ. 2005ರಲ್ಲಿ ಆದಂತೆ ವರ್ಷದಲ್ಲಿ 21ಕ್ಕೂ ಅಧಿಕ ಚಂಡ ಮಾರುತ ಕಂಡು ಬಂದರೆ ಇಂಗ್ಲೀಷ್ ವರ್ಣಮಾಲೆ ಬದಲಿಗೆ ಗ್ರೀಕ್ ವರ್ಣಮಾಲೆ ಅಕ್ಷರದಂತೆ ಹೆಸರು ಸೂಚಿಸಲಾಗುತ್ತದೆ. ಒಂದು ಸಾಗರದಲ್ಲಿ ಕಾಣಿಸಿಕೊಂಡ ಚಂಡಮಾರುತ ಮತ್ತೊಂದು ಸಾಗರಕ್ಕೆ ಸಾಗುವಷ್ಟರಲ್ಲೇ ಅವಸಾನ ಹೊಂದಿ ಮತ್ತೆ ಮೊದಲಿಂದ ಮೇಲಕ್ಕೇದ್ದರೆ ಹೆಸರಿಡುವುದು ಕಷ್ಟ ಕಷ್ಟ. ಆಗ 'ಐಡೆಂಟಿಟಿ' ಬಿಕ್ಕಟ್ಟು ತಲೆ ದೋರುತ್ತದೆ.

  ಪುರುಷರ ಹೆಸರೂ ಬಳಕೆ

  ಪುರುಷರ ಹೆಸರೂ ಬಳಕೆ

  1978ರಲ್ಲಿ ಚಂಡಮಾರುತಗಳಿಗೆ ಮಹಿಳೆಯರ ಜೊತೆಗೆ ಪುರುಷ ಹೆಸರುಗಳನ್ನೂ ಇಡುವುದು ರೂಢಿಗೆ ಬಂತು. ಅಟ್ಲಾಂಟಿಕ್ ಹರಿಕೇನ್ ಹೆಸರುಗಳ ಪಟ್ಟಿಗೆ ಪುರುಷರ ಹೆಸರುಗಳು ಸೇರ್ಪಡೆಗೊಂಡವು. ಸಾಮಾನ್ಯವಾಗಿ ಫ್ರೆಂಚ್ ಹಾಗೂ ಸ್ಪಾನೀಷ್ ಹೆಸರುಗಳನ್ನೇ ಬಳಸಲು ಆರಂಭಿಸಲಾಯಿತು. ಚಂಡ ಮಾರುತದ ಹೊಡೆತಕ್ಕೆ ಸಿಕ್ಕ ರಾಷ್ಟ್ರಗಳ ಭಾಷೆ ಆಧಾರಿಸಿ ಹೆಸರುಗಳನ್ನು ಸೂಚಿಸಲಾಯಿತು. ರಾಕ್ಸಿ ಬೋಲ್ಟನ್ ಅವರು ಮಹಿಳೆಯ ಹೆಸರಿನ ಬದಲಾಗಿ ಯುಎಸ್ ಸೆನೆಟರ್ ಗಳ ಹೆಸರುಗಳನ್ನು ಸೂಚಿಸಿದರು.

  ದಕ್ಷಿಣ ಏಷ್ಯಾದಲ್ಲಿ ಹೇಗೆ?

  ದಕ್ಷಿಣ ಏಷ್ಯಾದಲ್ಲಿ ಹೇಗೆ?

  ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಭಾಗದಲ್ಲಿ ಏಳುವ ಭಾರಿ ಅಲೆಗಳಿಗೆ ಸುಲಭವಾಗಿ ಹೆಸರಿಡುವುದನ್ನು ಇಲಾಖೆ ಅಭ್ಯಾಸ ಮಾಡಿಕೊಂಡಿದೆ. ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮಯನ್ಮಾರ್, ಓಮಾನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್ ಹೀಗೆ ಎಂಟು ರಾಷ್ಟ್ರಗಳು ಹಿಂದೂ ಮಹಾಸಾಗರ ವ್ಯಾಪ್ತಿಗೆ ಬರುತ್ತದೆ. 2000ರ ವರ್ಷದಿಂದ ಚಂಡಮಾರುತಗಳಿಗೆ ಹೆಸರನ್ನಿಡುವ ಪರಿಪಾಠ ರೂಢಿಗೆ ಬಂದಿದೆ. 2004ರಲ್ಲಿ ನಾಮಕರಣಕ್ಕೆ ಹೊಸ ಸೂತ್ರ ಬಳಕೆ ತರಲಾಗಿದೆ.ಮೇಲ್ಕಂಡ ರಾಷ್ಟ್ರಗಳು ಸರದಿ ಪ್ರಕಾರ ಚಂಡಮಾರುತಗಳಿಗೆ ಹೆಸರನ್ನಿಡುತ್ತವೆ.

  ವೈವಿಧ್ಯಮಯ ಹೆಸರುಗಳು

  ವೈವಿಧ್ಯಮಯ ಹೆಸರುಗಳು

  ಭಾರತದಲ್ಲಿ 2004ರಲ್ಲಾದ ಚಂಡಮಾರುತಗಳಿಗೆ ಅಗ್ನಿ, ಆಕಾಶ್, ಬಿಜಲಿ, ಜಲ್ ಹೆಸರನ್ನಿಡಲಾಗಿದೆ. ಲೆಹೆರ್, ಮೇಘ್, ಸಾಗರ್ ಮತ್ತು ವಾಯು ಮೊದಲಾದ ಭಾರತೀಯ ಹವಾಮಾನ ಇಲಾಖೆ ಪಟ್ಟಿಯಲ್ಲಿದೆ. ಇತ್ತೀಚೆಗೆ ಥಾಯ್ಲೆಂಡ್ ನಿಂದ ಮೋರಾ ಹೆಸರು ಸಿಕ್ಕಿತ್ತು.

  ಈಗ 2017ರ ನವೆಂಬರ್ ಅಂತ್ಯ ಡಿಸೆಂಬರ್ ಆರಂಭದ ವಾರದಲ್ಲಿ ಕಾಡುತ್ತಿರುವ ಚಂಡಮಾರುತಕ್ಕೆ ಓಖಿ ಎಂಬ ಹೆಸರನ್ನು ಬಾಂಗ್ಲಾದೇಶ ನೀಡಿದೆ. ಬೆಂಗಾಲಿಯಲ್ಲಿ ಓಖಿ ಎಂದರೆ ಕಣ್ಣು ಎಂದರ್ಥ

  ತಮಿಳುನಾಡು, ಆಂಧ್ರಪ್ರದೇಶ ಕಾಡಿದ್ದ ನೀಲಂ ಚಂಡಮಾರುತಕ್ಕೆ ಪಾಕಿಸ್ತಾನ ಹೆಸರು ನೀಡಿತ್ತು. ಮುರ್ಜಾನ್ ಚಂಡಮಾರುತಕ್ಕೆ ಓಮನ್ ಹೆಸರು ನೀಡಿತ್ತು. ಹೀಗೆ ವಿವಿಧ ರಾಷ್ಟ್ರಗಳು ತಮ್ಮ ಸರದಿ ಬಂದಾಗ ಹೆಸರು ನೀಡುತ್ತವೆ.

  ಅಮೆರಿಕದಲ್ಲಿ ನಾಮಕರಣ ಹೇಗೆ

  ಅಮೆರಿಕದಲ್ಲಿ ನಾಮಕರಣ ಹೇಗೆ

  ಅಮೆರಿಕದಲ್ಲಿ ಸಮಸಂಖ್ಯೆಯ ಬಿರುಗಾಳಿಗಳಿಗೆ ಮಹಿಳೆಯ ಹೆಸರುಗಳು, ಬೆಸಸಂಖ್ಯೆಯ ಬಿರುಗಾಳಿಗಳಿಗೆ ಪುರುಷರ ಹೆಸರುಗಳನ್ನು ಇಡಲಾಗುತ್ತದೆ. ವರ್ಷದ ಮೊದಲ ಬಿರುಗಾಳಿಗೆ ಎ ಅಕ್ಷರ ನಂತರ ಬಿ ಅಕ್ಷರ ಹೀಗೆ ಸರಣಿ ಮುಂದುವರೆಯುತ್ತದೆ. ಇದರ ಜತೆಗೆ ಚಂಡಮಾರುತವೇಳುವ ಪ್ರದೇಶಗಳ ನಿರ್ದಿಷ್ಟ ದೇಶಗಳು ನಾಮಕರಣದ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ. ಅಟ್ಲಾಂಟಿಕ್, ಪೆಸಿಫಿಕ್ ಸಾಗರದಲ್ಲಿ ಅಬ್ಬರಿಸುವ ಚಂಡಮಾರುತಗಳ ಪಟ್ಟಿ ಇಲ್ಲಿ ಸಿಗಲಿದೆ.

  ಮುಂದೆ ನಿರೀಕ್ಷಿಸಬಹುದಾದ ಹೆಸರುಗಳು

  ಮುಂದೆ ನಿರೀಕ್ಷಿಸಬಹುದಾದ ಹೆಸರುಗಳು

  ಜನರು ಸುಲಭವಾಗಿ ನೆನಪಲ್ಲಿಟ್ಟುಕೊಳ್ಳಬಹುದಾದ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸರಳವಾದ ಹೆಸರನ್ನು ಬಳಸಲಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

  ಚಂಡಮಾರುತಗಳಿಗೆ ಹೆಸರನ್ನಿಟ್ಟರೆ ಅದರ ಕಾಲ, ಗುಣ ಹೀಗೆ ಹಲವು ವಿಷಯಗಳನ್ನ ಸುಲಭವಾಗಿ ಸಂಗ್ರಹಿಸಿಡಬಹುದು ಎಂದು ಹವಾಮಾನ ತಜ್ಞರು ಹೇಳುತ್ತಾರೆ.

  ಅಗ್ನಿ, ಆಕಾಶ, ಬಿಜ್ಲಿ, ಜಲ್ ಅಲ್ಲದೆ, ಲೆಹರ್, ಮೇಘ್, ಸಾಗರ್, ವಾಯು ಭಾರತದ ಪಟ್ಟಿಯಲ್ಲಿದೆ. ನಿಲೋಫರ್, ತಿತ್ಲಿ, ಬುಲ್ ಬುಲ್ ಪಾಕಿಸ್ತಾನ ನೀಡಿದ ಹೆಸರುಗಳಾಗಿವೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  How do tropical storms/hurricanes get their names? Why do tropical storms/hurricanes have female names? There is a predetermined list of storm names per region. The names go alphabetically, Latest Cyclone Ockhi's name was given by Bangladesh which in Bengali means ‘eye’.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more