ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಲಸಿಕೆ ಭಾರತಕ್ಕೆ ಬರುತ್ತಾ?: ಯಾವಾಗ, ಪಡೆಯುವ ಮಾರ್ಗವೇನು?

|
Google Oneindia Kannada News

ರಷ್ಯಾವು ಅಂತಿಮ ಹಂತದ ಲಸಿಕೆಯ ಪ್ರಯೋಗ ನಡೆಸದೆಯೇ ಸಾರ್ವಜನಿಕ ಬಳಕೆಗೆ ಒಪ್ಪಿಗೆ ನೀಡಿದೆ.

Recommended Video

ಮೊಟ್ಟ ಮೊದಲ ಕೊರೊನ ಲಸಿಕೆಯ ಹೆಸರೇನು ಗೊತ್ತಾ? | Oneindia Kannada

ಅನುಮತಿ ದೊರೆತ ವಿಶ್ವದ ಮೊದಲ ಕೊರೊನಾ ಲಸಿಕೆ ಎನ್ನುವ ಖ್ಯಾತಿಗೆ ಲಸಿಕೆ ಪಾತ್ರವಾಗಿದೆ. ಇದಕ್ಕೂ ಮುನ್ನ ಚೀನಾದಲ್ಲಿ ಲಸಿಕೆಯೊಂದಕ್ಕೆ ಅನುಮತಿ ದೊರೆತಿತ್ತು. ಆದರೆ ಅದರ ಬಳಕೆ ಸೀಮಿತವಾಗಿತ್ತು. ಪೀಪಲ್ಸ್ ಲಿಬರೇಷನ್ ಪಕ್ಷದ ಯೋಧರಿಗೆ ಮಾತ್ರ ಲಸಿಕೆ ನೀಡಲಾಗಿತ್ತು.

ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿ ಆಯ್ತು: ಯಾರ ಮೇಲೆ ಮೊದಲ ಪ್ರಯೋಗ? ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿ ಆಯ್ತು: ಯಾರ ಮೇಲೆ ಮೊದಲ ಪ್ರಯೋಗ?

ರಷ್ಯಾದ ಲಸಿಕೆಯನ್ನು ಮಾಸ್ಕೋ ಮೂಲದ ಗಮಲೇಯ ಇನ್‌ಸ್ಟಿಟ್ಯೂಟ್‌ ಅಭಿವೃದ್ಧಿಪಡಿಸುತ್ತಿದೆ. ಲಸಿಕೆ ಮೇಲೆ ಪೂರ್ಣವಾಗಿ ಎರಡು ತಿಂಗಳು ಕಾಲ ಕಾಲ ಕೂಡ ಪ್ರಯೋಗ ನಡೆದಿಲ್ಲ ಹೀಗಾಗಿ, ಲಸಿಕೆ ಸುರಕ್ಷತೆ ಕುರಿತು ನೂರಾರು ಪ್ರಶ್ನೆಗಳೆದ್ದಿವೆ.

ಉತ್ಪಾದನೆ ಮತ್ತು ಲಭ್ಯತೆ

ಉತ್ಪಾದನೆ ಮತ್ತು ಲಭ್ಯತೆ

ಗಮಲೇಯ ಇನ್‌ಸ್ಟಿಟ್ಯೂಟ್ ಹೊರತಾಗಿ ಲಸಿಕೆಯನ್ನು ರಷ್ಯಾದ ಅತಿ ದೊಡ್ಡ ಬಿಸಿನೆಸ್ ಗ್ರೂಪ್ ಆದ ಸಿಸ್ಟೆಮಾದಲ್ಲಿ ಉತ್ಪಾದನೆಯಾಗಲಿದೆ. ಇಲ್ಲಿ ವರ್ಷದಲ್ಲಿ 1.5 ಮಿಲಿಯನ್ ಅಂದರೆ 15 ಲಕ್ಷ ಡೋಸ್‌ಗಳನ್ನು ಉತ್ಪಾದಿಸಲಾಗುತ್ತದೆ. ಅದರ ಸಾಮರ್ಥ್ಯ ವಿಸ್ತರಣೆಗೊಳ್ಳಲಿದೆ.

ರಷ್ಯಾದಿಂದ ಹೊರಗಿನ ರಾಷ್ಟ್ರಗಳಿಗೆ ಸಧ್ಯಕ್ಕಿಲ್ಲ ಲಸಿಕೆ

ರಷ್ಯಾದಿಂದ ಹೊರಗಿನ ರಾಷ್ಟ್ರಗಳಿಗೆ ಸಧ್ಯಕ್ಕಿಲ್ಲ ಲಸಿಕೆ

ರಷ್ಯಾದ ಹೊರಗಿನ ರಾಷ್ಟ್ರಗಳಿಗೆ ಲಸಿಕೆ ಲಭ್ಯವಾಗಲೂ ಇನ್ನೂ ಸ್ವಲ್ಪ ದಿನಗಳು ಕಾಯಬೇಕಿದೆ. 1 ಬಿಲಿಯನ್ ಡೋಸ್ ಲಸಿಕೆಗಾಗಿ ಇತರೆ ದೇಶಗಳು ಬೇಡಿಕೆ ಇಟ್ಟಿವೆ. ಮತ್ತು ವಾರ್ಷಿಕ 500 ಡೋಸ್‌ಗಳನ್ನು ಉತ್ಪಾದಿಸುವುದಾಗಿ ಅಂತಾರಾಷ್ಟ್ರೀಯ ಒಪ್ಪಂದವನ್ನು ಮಾಡಿಕೊಂಡಿದೆ. ಆದರೆ ಲಸಿಕೆಗೆ ಆಸಕ್ತಿ ತೋರಿಸಿದ ರಾಷ್ಟ್ರಗಳ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಭಾರತದಲ್ಲಿ ರಷ್ಯಾ ಲಸಿಕೆ ಪಡೆಯಲು ಎರಡೇ ಮಾರ್ಗ

ಭಾರತದಲ್ಲಿ ರಷ್ಯಾ ಲಸಿಕೆ ಪಡೆಯಲು ಎರಡೇ ಮಾರ್ಗ

ರಷ್ಯಾದ ಲಸಿಕೆಯನ್ನು ಭಾರತ ಪಡೆಯಲು ಎರಡೇ ಮಾರ್ಗಗಳಿವೆ. ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ರಷ್ಯಾದ ಬಳಿ ಲಸಿಕೆಯ ಕೊನೆಯ ಹಂತದ ಪ್ರಯೋಗವನ್ನು ಭಾರತದಲ್ಲಿ ಇಲ್ಲಿನ ಜನರ ಮೇಲೆ ಪ್ರಯೋಗ ಮಾಡುವಂತೆ ಕೇಳಬಹುದಾಗಿದೆ. ವಿದೇಶದಲ್ಲಿ ತಯಾರಾಗುತ್ತಿರುವ ಎಲ್ಲಾ ಲಸಿಕೆಗಳನ್ನು ಭಾರತಕ್ಕೆ ಕರೆತರಲು ಇದೊಂದು ಮಾರ್ಗವಾಗಿದೆ.

ಉತ್ಪಾದನಾ ಒಪ್ಪಂದವಿಲ್ಲ

ಉತ್ಪಾದನಾ ಒಪ್ಪಂದವಿಲ್ಲ

ಎಲ್ಲಾ ರೀತಿಯ ಕಾಯಿಲೆಗಳಿಗೆ ಶೇ. 50 ರಷ್ಟು ಲಸಿಕೆಗಳು ಭಾರತದಲ್ಲೇ ತಯಾರಾಗುತ್ತದೆ. ಕೊರೊನಾ ಸೋಂಕಿಗೆ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ಅವರು ಎಲ್ಲಿ ಅಭಿವೃದ್ಧಿಪಡಿಸಿದರೂ ಭಾರತದಲ್ಲಿಯೂ ಉತ್ಪಾದಿಸಬಹುದಾಗಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಲಸಿಕೆ ತಯಾರಿಸುತ್ತಿರುವ ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ತಮ್ಮ ಲಸಿಕೆಯನ್ನು ಸಾಮೂಹಿಕವಾಗಿ ಉತ್ಪಾದಿಸಲು ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ರಷ್ಯಾದ ಲಸಿಕೆ ಉತ್ಪಾದನೆಗೆ ಈಗ ಯಾವುದೇ ಒಪ್ಪಂದವಿಲ್ಲ.

English summary
Russia has kept its promise, and approved a novel coronavirus vaccine for public use without the final phase of human trials. It is the first coronavirus vaccine to be approved, though a Chinese vaccine has been cleared for ‘limited use’ much earlier, to be administered only on soldiers of the People’s Liberation Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X