ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಸ್ವರಾಜ್ ರನ್ನು ಟ್ರೋಲ್ ಮಾಡಿದ ಟ್ವೀಟ್ ಅನ್ನು ಬೆಂಬಲಿಸುತ್ತೀರಾ?

|
Google Oneindia Kannada News

Recommended Video

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗ್ತಿರೋದ್ಯಾಕೆ

ನವದೆಹಲಿ, ಜುಲೈ 02: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಪರಿ ಟ್ರೋಲ್ ಆಗುತ್ತಿರುವುದೇಕೆ? ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ.

ಕಳೆದ ವಾರ ಅಂತರ್ಧರ್ಮೀಯ ದಂಪತಿಯ ಪಾಸ್ ಪೋರ್ಟ್ ವಿವಾದಕ್ಕೆ ಸಂಬಂಧಿಸಿದಂತೆ, ದಂಪತಿಯನ್ನು ಅವಮಾನ ಮಾಡಿದ ಪಾಸ್ ಪೋರ್ಟ್ ಕಚೇರಿ ಅಧಿಕಾರಿಯನ್ನು ಸುಷ್ಮಾ ಸ್ವರಾಜ್ ವರ್ಗಾವಣೆ ಮಾಡುವಂತೆ ಸೂಚಿಸಿದ್ದರು. ಮುಸ್ಲಿಂ ಓಲೈಕೆಗಾಗಿ ಸುಷ್ಮಾ ಸ್ವರಾಜ್ ಹೀಗೆ ಮಾಡಿದ್ದಾರೆ ಎಂದು ಅವರನ್ನು ಟ್ರೋಲ್ ಹೈಕ್ಳು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.

ಹಿಂದೂ-ಮುಸ್ಲಿಂ ದಂಪತಿಗೆ ಪಾಸ್‌ಪೋರ್ಟ್‌ ಅಧಿಕಾರಿ ಅವಮಾನ ಹಿಂದೂ-ಮುಸ್ಲಿಂ ದಂಪತಿಗೆ ಪಾಸ್‌ಪೋರ್ಟ್‌ ಅಧಿಕಾರಿ ಅವಮಾನ

ಈ ಕುರಿತು ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಾಲ್ ಸಹ ಪ್ರತಿಕ್ರಿಯೆ ನೀಡಿದ್ದು, 'ಇದು ನಮ್ಮ ಕುಟುಂಬಕ್ಕೆ ಅಸಹನೀಯ ನೋವು' ಎಂದಿದ್ದಾರೆ.

ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ ಏನು?

ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಭೇದ ಸಹಜ. ದಯವಿಟ್ಟು ಟೀಕೆ ಮಾಡಿ. ಆದರೆ ಅಸಭ್ಯ ಭಾಷೆ ಬಳಸಬೇಡಿ. ಸಭ್ಯ ಭಾಷೆಯ ಟೀಕೆ ಎಂದಿಗೂ ಪರಿಣಾಮಕಾರಿ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ಪತಿಕ್ರಿಯೆ ನೀಡಿದ್ದಾರೆ. ನಾನು ಜೂನ್ 17 ರಿಂದ 23ರವರೆಗೆ ಭಾರತದಲ್ಲಿರಲಿಲ್ಲ. ಈ ಸಂದರ್ಭದಲ್ಲಿ ಕೆಲವು ಘಟನೆಗಳು ನಡೆದಿವೆ. ಕೆಲವು ಟ್ವೀಟ್ ಮೂಲಕ ನನ್ನನ್ನು ಗೌರವಿಸಲಾಗಿದೆ! ಅವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ವ್ಯಂಗ್ಯವಾಗಿ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಟ್ರೋಲ್ ಬಗ್ಗೆ ಪೋಲ್

ತಾವು ಟ್ವಿಟ್ಟರ್ ನಲ್ಲಿ ಹೀಗೆ ಟ್ರೋಲ್ ಆಗುತ್ತಿರುವ ಕುರಿತು ಟ್ವಿಟ್ಟರ್ ಪೋಲ್ ವೊಂದರಲ್ಲಿ ಜನರ ಅಭಿಪ್ರಾಯವನ್ನು ಸಹ ಸುಷ್ಮಾ ಕೇಳಿದ್ದರು. 'ನಾನು ಕೆಲವು ಟ್ವೀಟ್ ಗಳನ್ನು ಲೈಕ್ ಮಾಡಿದ್ದೇನೆ, ಇದು ಕೆಲವು ದಿನಗಳಿಂದ ನಡೆಯುತ್ತಿದೆ. ಇಂಥ ಟ್ವೀಟ್ ಮಗಳನ್ನು ನೀವು ಒಪ್ಪುತ್ತೀರಾ?' ಎಂದು ಅವರು ಆರಂಭಿಸಿದ್ದ ಟ್ವಿಟ್ಟರ್ ಪೋಲ್ ಗೆ ಶೇ.57 ರಷ್ಟು ಜನ 'ಇಲ್ಲ' ಎಂದು ಪ್ರತಿಕ್ರಿಯಿಸುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಇನ್ನುಳಿದಂತೆ ಶೇ.43 ರಷ್ಟು ಜನ 'ಹೌದು' ಎಂದಿದ್ದಾರೆ.

ಈ ವಿವಾದದ ಮೂಲ ಯಾವುದು?

ತಾನ್ವಿ ಸೇಠ್ ಎಂಬ ಹಿಂದು ಮಹಿಳೆ ಮತ್ತು ಮೊಹಮ್ಮದ್ ಅನಸ್ ಸಿದ್ದಿಕಿ ಎಂಬ ಮುಸ್ಲಿಂ ವ್ಯಕ್ತಿ 2007 ರಲ್ಲಿ ವಿವಾಹವಾಗಿದ್ದರು. ಪಾಸ್ ಪೋರ್ಟ್ ಪಡೆಯಲು ಅವರು ಉತ್ತರ ಪ್ರದೇಶದ ಲಕ್ನೋ ಪಾಸ್ ಪೋರ್ಟ್ ಸೇವಾ ಕೇಂದ್ರದಲ್ಲಿ ಅರ್ಜಿ ಹಾಕಿದ್ದರು. ಆದರೆ ಈ ಸಂದರ್ಭದಲ್ಲಿ ಸಿದ್ದಿಕಿ ಅವರು ಹಿಂದು ಮತಕ್ಕೆ ಮತಾಂತರವಾಗುವಂತೆ ಪಾಸ್ ಪೋರ್ಟ್ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದರು. ಇದು ಭಾರೀ ವಿವಾದ ಸೃಷ್ಟಿಸಿತ್ತು. ಈ ಸಂಬಂಧ ದಂಪತಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ದೂರು ನೀಡಿದ್ದರು. ವಿಷಯ ತಿಳಿದ ಸುಷ್ಮಾ ಸ್ವರಾಜ್, ವಿವಾದ ಸೃಷ್ಟಿಸಿದ್ದ ಪಾಸ್ ಪೋರ್ಟ್ ಸೇವಾ ಕೇಂದ್ರದ ಅಧಿಕಾರಿ ವಿಕಾಸ್ ಮಿಶ್ರಾ ಅವರನ್ನು ವರ್ಗಾವಣೆ ಮಾಡುವಂತೆ ಆದೇಶಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಅವರು ಟ್ವಿಟ್ಟರ್ ನಲ್ಲಿ ಟ್ರೋಲ್ ಆಗಿದ್ದರು.

'ಪಾಸ್ ಪೋರ್ಟ್ ಆಕಾಂಕ್ಷಿಯಾಗಿದ್ದ ಮಹಿಳೆ ಹಿಂದುವಾಗಿದ್ದರೂ, ಅವರ ಮದುವೆ ಪ್ರಮಾಣಪತ್ರದಲ್ಲಿ ಆಕೆಯ ಹೆಸರನ್ನು ಶಾಜಿಯಾ ಅನಾಸ್ ಎಂದು ಬದಲಾಯಿಸಲಾಗಿತ್ತು. ಆದ್ದರಿಂದ ಆಕೆಯ ಗುರುತಿನ ಚೀಟಿಯಲ್ಲಿರುವ ಹೆಸರಿಗೆ ಅನುಗುಣವಾಗಿ ನಾನು ಆಕೆಯ ಬಳಿ ಹೆಚ್ಚಿನ ದಾಖಲೆ ಕೇಳಿದ್ದದೇನಷ್ಟೆ. ಆಕೆಗೆ ಅವಮಾನ ಮಾಡಿಲ್ಲ' ಎಂದು ಮಿಶ್ರಾ ಹೇಳಿದ್ದಾರೆ. ಶಾಜಿಯಾ ಎಂದು ಬದಲಾದ ತಾನ್ವಿ ಹೆಸರಿನಲ್ಲಿ ಮತ್ತೊಂದು ಪಾಸ್ ಪೋರ್ಟ್ ಸಹ ಇದೆ ಎಂಬ ಬಗ್ಗೆಯೂ ಕೆಲವು ಮೂಲಗಳು ಮಾಹಿತಿ ನೀಡಿದ್ದವು.

ಅಸಭ್ಯ ಭಾಷೆಯ ಬಳಕೆ

'ಸುಷ್ಮಾ ಸ್ವರಾಜ್ ಅವರು ಮುಸ್ಲಿಂ ಓಲೈಕೆಯಲ್ಲಿ ತೊಡಗಿದ್ದಾರೆ. ದಯವಿಟ್ತು ಆಕೆಯನ್ನು ಹೊಡೆದು ಬುದ್ಧಿ ಕಲಿಸಿ' ಎಂದು ವ್ಯಕ್ತಿಯೊಬ್ಬ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಾಲ್ ಅವರಿಗೆ ಟ್ವೀಟ್ ಮಾಡಿದ್ದ. ಹಲವರು ಅಸಭ್ಯ ಭಾಷೆಗಳಿಂದ ಅವರನ್ನು ಆಡಿಕೊಂಡಿದ್ದರು. ಇದರಿಂದ ಮನನೊಂದ 'ಸುಷ್ಮಾ, ಟೀಕಿಸಿ, ಆದರೆ ಸಭ್ಯ ಭಾಷೆ ಬಳಸಿ' ಎಂದು ಮನವಿ ಮಾಡಿಕೊಂಡಿದ್ದರು.

English summary
Sushma Swaraj was trolled for days in connection with her helping an inter-faith couple to get their passports, who were allegedly harassed over religion by officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X