ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಗಾಂಧಿ ಮತ್ತೆ ಅಧ್ಯಕ್ಷೆ: ಆಯ್ಕೆಗೆ ಕಾರಣವೇನು?

|
Google Oneindia Kannada News

ನವದೆಹಲಿ, ಆಗಸ್ಟ್ 11: ಸೋನಿಯಾ ಗಾಂಧಿ ಅವರು ಎಐಸಿಸಿಯ ಮಧ್ಯಂತರ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ. ಸುಧೀರ್ಘವಾಗಿ ಎಐಸಿಸಿ ಅಧ್ಯಕ್ಷಗಿರಿ ನಿಭಾಯಿಸಿ ಇನ್ನು ಸಾಕೆಂದು ಬಿಟ್ಟು ಹೋಗಿದ್ದ ಅವರನ್ನು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ರಾಹುಲ್ ಗಾಂಧಿ ಅವರು ಎಐಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ತಿಂಗಳುಗಳ ಕಾಲ ಕಾಂಗ್ರೆಸ್‌ನ ಇರಿ ತಲೆಗಳು ಹಲವು ಸಭೆಗಳನ್ನು ನಡೆಸಿದ್ದಾಗ್ಯೂ ಯಾವುದೇ ಗಾಂಧಿ ಕುಟುಂಬೇತರ ವ್ಯಕ್ತಿಯನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಸೋತಿದ್ದಾರೆ.

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಆಯ್ಕೆಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಆಯ್ಕೆ

ಆದರೆ ಕಾಂಗ್ರೆಸ್ ಪಕ್ಷದ ಚಿಂತಕರ ಛಾವಡಿ ಸದಸ್ಯರು ಮತ್ತೆ ಸೋನಿಯಾ ಗಾಂಧಿ ಅವರನ್ನೇ ಎಡತಾಕಿದ್ದಕ್ಕೆ ಕಾರಣಗಳೂ ಇವೆ.

Why Sonia Gandhi selected as AICC president again

ಸೋನಿಯಾ ಗಾಂಧಿ ಅವರು ಎಐಸಿಸಿಯ ಅಧ್ಯಕ್ಷೆಯಾಗಿ ಸುಧೀರ್ಘ 19 ವರ್ಷ ಆಡಳಿತ ಕಾರ್ಯನಿರ್ವಹಿಸಿದ್ದಾರೆ. 1998 ರಲ್ಲಿ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರು ಅಧಿಕಾರವಹಿಸಿಕೊಂಡು 2017 ರಲ್ಲಿ ತಮ್ಮ ಸ್ಥಾನವನ್ನು ಮಗ ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟಿದ್ದರು. ಆದರೆ ಈಗ ಮತ್ತೆ ಅವರನ್ನೇ ಅಧ್ಯಕ್ಷ ಸ್ಥಾನ ಹುಡುಕಿಕೊಂಡು ಬಂದಿದೆ.

ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಿದ ಸಿಡಬ್ಲುಸಿ ಪ್ರಕಾರ ಅತ್ಯಂತ ಸಂಕಷ್ಟದಲ್ಲಿರುವ ಕಾಂಗ್ರೆಸ್‌ ಅನ್ನು ಮೇಲೆತ್ತುವ ಶಕ್ತಿ ಸೋನಿಯಾ ಗಾಂಧಿ ಅವರಿಗೆ ಇದೆ. ಅಲ್ಲದೆ ಸೋನಿಯಾ ಅವರ ಚರಿಷ್ಮಾ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬಲಿದೆ. ಅಲ್ಲದೆ ಅವರಿಗೆ ಕಾಂಗ್ರೆಸ್ ಅನ್ನು ಮುನ್ನೆಡಸಿ ಅಪಾರ ಅನುಭವವೂ ಇದೆ.

ಈ ಸಮಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸ್ಪೂರ್ತಿ ಹೆಚ್ಚಿಸುವ ಅತ್ಯಂತ ಹೆಚ್ಚು ಪರಿಚಿತ, ಗೌರವಾನ್ವತ, ಅನುಭವಿ ಹಾಗೂ ಪ್ರಶ್ನಾತೀತ ನಾಯಕರ ಅಗತ್ಯವಿತ್ತು ಹಾಗಾಗಿಯೇ ಈ ಸ್ಥಾನಕ್ಕೆ ಸೋನಿಯಾ ಗಾಂಧಿ ಅವರು ಸೂಕ್ತ ಆಯ್ಕೆ ಆಗಿದ್ದಾರೆ ಎಂದು ಸಿಡಬ್ಲುಸಿ ಸದಸ್ಯರು ಹೇಳಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾಜ್ ಸಿಂಧ್ಯಾ, ಮುಕುಲ್ ವಾಸ್ನಿಕ್ ಅವರುಗಳ ಹೆಸರು ಚಾಲ್ತಿಯಲ್ಲಿದ್ದವು, ಇವು ಮಾತ್ರವಲ್ಲದೆ, ಪ್ರಿಯಾಂಕಾ ಗಾಂಧಿ ಅವರ ಹೆಸರೂ ಸಹ ಚರ್ಚೆಗೆ ಬಂದಿತ್ತು. ಆದರೆ ಈಗಿನ ಕಷ್ಟದ ಸಮಯದಲ್ಲಿ ಅನುಭವಿ ನಾಯಕರ ಅವಶ್ಯಕತೆ ಇರುವ ಕಾರಣ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.

ಸೋನಿಯಾ ಗಾಂಧಿ ಅವರು 1998 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಚುಕ್ಕಾಣಿ ಹಿಡಿದಿದ್ದಾಗಲೂ ಸಹ ಕಾಂಗ್ರೆಸ್ ಸಂಕಷ್ಟದಲ್ಲಿತ್ತು. ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ದೊಡ್ಡದಾಗಿ ತಲೆದೂರಿತ್ತು, ಪಕ್ಷವೂ ಸಹ ಇಳಿಜಾರಿನಲ್ಲಿತ್ತು. ಆದರೆ ಅವರು ಆ ಸಮಯದಲ್ಲಿ ಪಕ್ಷವನ್ನು ಕಟ್ಟಿ ಎರಡು ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ತಂದರು. ಹಾಗಾಗಿ ಈಗ ಮತ್ತೊಮ್ಮೆ ಅವರ ಮೇಲೆ ನಂಬಿಕೆ ಇರಿಸಿ ಕಾಂಗ್ರೆಸ್‌ ಅನ್ನು ಅವರ ಮಡಿಲಿಗೆ ಹಾಕಲಾಗಿದೆ.

English summary
Why Sonia Gandhi elected as AICC president again. She announced as Congress interim president by CWC members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X