ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಷ್ಟೊಂದು ಗಂಭೀರ ಪೋಸ್ ಯಾಕೆ? ರಾಹುಲ್‌ಗೆ ಅಮಿತ್ ಶಾ ಲೇವಡಿ

|
Google Oneindia Kannada News

ಡೆಹರಾಡೂನ್, ಫೆಬ್ರವರಿ 2: ಸಂಸತ್‌ನಲ್ಲಿ ಶುಕ್ರವಾರ ಬಜೆಟ್ ಮಂಡನೆ ವೇಳೆ ಗಂಭೀರ ವನದರಾಗಿ ಕುಳಿತಿದ್ದ ರಾಹುಲ್ ಗಾಂಧಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.

ಮೈತ್ರಿಕೂಟದ ಪ್ರಧಾನಿ ಯಾರು? ಅಮಿತ್ ಶಾ ಮಾಡಿದ ಜೋಕ್ ಇದುಮೈತ್ರಿಕೂಟದ ಪ್ರಧಾನಿ ಯಾರು? ಅಮಿತ್ ಶಾ ಮಾಡಿದ ಜೋಕ್ ಇದು

ಯಾವಾಗಲೂ ಘರ್ಜಿಸುವ ವಿರೋಧಪಕ್ಷಗಳ ನಾಯಕರು ಪಿಯೂಷ್ ಗೋಯಲ್ ಬಜೆಟ್ ಮಂಡನೆ ಮಾಡುವ ವೇಳೆ ಗಂಭೀರವಾಗಿ ಕಾಣಿಸುತ್ತಿದ್ದರು ಎಂದು ಅವರು ಅಣಕಿಸಿದ್ದಾರೆ.

ಬಜೆಟ್ ಮಂಡನೆ ವೇಳೆ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ಇತರೆ ನಾಯಕರು ಗಂಭೀರರಾಗಿ ಕುಳಿತಿದ್ದ ಚಿತ್ರ ಎಲ್ಲೆಡೆ ವೈರಲ್ ಆಗಿದೆ.

why so serious at budget speech amit shah asked rahul gandhi

ಡೆಹರಾಡೂನ್‌ನಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನೀವು (ರಾಹುಲ್) ಏಕೆ ಅಷ್ಟೊಂದು ಗಂಭೀರರಾಗಿದ್ದಿರಿ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ನೀಮಗೇಕೆ ನಗಲು ಸಾಧ್ಯವಾಗಲಿಲ್ಲ? ರೈತರಿಗಾಗಿ ಮಾಡಿದ ಘೋಷಣೆಗಳನ್ನು ಏಕೆ ನೀವು ಶ್ಲಾಘಿಸಲಿಲ್ಲ?' ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಇರುವುದು ಗಾಂಧಿ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ: ಶಾ ಕಾಂಗ್ರೆಸ್ ಇರುವುದು ಗಾಂಧಿ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ: ಶಾ

ರಾಮಮಂದಿರದ ಕುರಿತು ಸಹ ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.

9 ಪ್ರಧಾನಿ ಅಭ್ಯರ್ಥಿಗಳ ಮಹಾಘಟಬಂಧನ ದುರಾಸೆಯ ಪ್ರತಿರೂಪ: ಶಾ ಕಿಡಿ! 9 ಪ್ರಧಾನಿ ಅಭ್ಯರ್ಥಿಗಳ ಮಹಾಘಟಬಂಧನ ದುರಾಸೆಯ ಪ್ರತಿರೂಪ: ಶಾ ಕಿಡಿ!

ರಾಮ ಜನ್ಮಭೂಮಿ ನ್ಯಾಸ್ ಸೇರಿದಂತೆ ವಿವಿಧ ಮಾಲೀಕರಿಗೆ 42 ಎಕರೆ ಭೂಮಿಯನ್ನು ಮರಳಿ ನೀಡುವ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ವಿನಾಕಾರಣ ಗದ್ದಲ ಸೃಷ್ಟಿಸಿದೆ ಎಂದು ಆರೋಪಿಸಿದ ಅವರು, 'ರಾಹುಲ್ ಬಾಬಾ, ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ. ನಿಮಗೆ ರಾಮ ಮಂದಿರ ಬೇಕೋ ಅಥವಾ ಬೇಡವೋ?' ಎಂದು ಕೇಳಿದ್ದಾರೆ.

English summary
BJP President Amit Shah asked Rahul Gandhi, why you were so serious on when finance minister Piyush Goyal presented the budget. Why couldn't you smile?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X