ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 2ನೇ ಅಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಲು ಕಾರಣವೇನು?

|
Google Oneindia Kannada News

ನವದೆಹಲಿ, ಏಪ್ರಿಲ್ 18: ದೇಶದಲ್ಲಿ ಕೊರೊನಾ ಎರಡನೇ ಅಲೆಯು ಜನರನ್ನು ನಿದ್ದೆಗೆಡಿಸಿದೆ, ಎರಡನೇ ಅಲೆಯ ಪ್ರಮುಖ ಅಂಶವೆಂದರೆ ಈ ಬಾರಿ ಕೊರೊನಾವೈರಸ್ ಪಾಸಿಟಿವಿಟಿ ದರ ಪ್ರಮಾಣ ಹೆಚ್ಚಿದೆ.

ಕೊರೊನಾ ಸೋಂಕಿನ ಪರೀಕ್ಷೆಗೆ ಒಳಗಾಗುತ್ತಿರುವ ಮಂದಿಯನ್ನು ಗಮನಿಸಿದರೆ ಹಿಂದೆಂದಿಗಿಂತಲೂ ಪ್ರಮಾಣ ಹೆಚ್ಚಾಗಿದೆ.ಕಳೆದ ವರ್ಷ ಅತಿ ಹೆಚ್ಚು ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿತ್ತು, ಅದರಲ್ಲಿ ಕೆಲವೇ ಕೆಲವು ಮಂದಿಗೆ ಮಾತ್ರ ಕೊರೊನಾ ಸೋಂಕು ದೃಢಪಡುತ್ತಿತ್ತು. ಆದರೆ ಈ ಬಾರಿ ಕೊರೊನಾ ಪರೀಕ್ಷೆ ಮಾಡಿಸಿದ ಬಹುತೇಕರಿಗೆ ಸೋಂಕು ಇರುವುದು ಖಚಿತವಾಗುತ್ತಿದೆ.

ಮುಂಬೈ ಹಾಫ್ ಕಿನ್ ಸಂಸ್ಥೆಗೆ ಕೊರೊನಾ ಲಸಿಕೆ ಉತ್ಪಾದಿಸಲು ಅನುಮತಿಮುಂಬೈ ಹಾಫ್ ಕಿನ್ ಸಂಸ್ಥೆಗೆ ಕೊರೊನಾ ಲಸಿಕೆ ಉತ್ಪಾದಿಸಲು ಅನುಮತಿ

ಅತಿ ವೇಗವಾಗಿ ಕೊರೊನಾ ಸೋಂಕು ಹರಡುತ್ತಿರುವುದು ಪಾಸಿಟಿವಿಟಿ ದರ ಏರಿಕೆಗೆ ಕಾರಣವಾಗಿದೆ. ಕಳೆದ ಒಂದು ವಾರದಲ್ಲಿ ಶೇ.13.5ಕ್ಕಿಂತ ಹೆಚ್ಚು ಪರೀಕ್ಷೆಗಳು ನಡೆದಿವೆ, ಪರೀಕ್ಷೆಗಳನ್ನು ಹೆಚ್ಚಿಸಿಲ್ಲ, ಪಾಸಿಟಿವಿಟಿ ದರ ಹೆಚ್ಚಾಗಿದೆ, ಪಾಸಿಟಿವಿಟಿ ದರವು ಸಮುದಾಯದಲ್ಲಿ ರೋಗ ಹರಡುವಿಕೆಯ ಅಳತೆ ಎಂದೇ ಹೇಳಬಹುದು.

 Why Second Wave Of Covid-19 Has A Higher Positivity Rate

ಅತಿ ಹೆಚ್ಚು ಪಾಸಿಟಿವಿಟಿ ದರವು ಕಳೆದ ಎರಡು ತಿಂಗಳುಗಳಲ್ಲಿ ವೈರಸ್ ಹೆಚ್ಚು ವೇಗವಾಗಿ ಹರಡುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ, ಕಳೆದ ಬಾರಿಗೆ ಹೋಲಿಸಿದರೆ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಿದೆ.

ಮೊದಲ ಕೊರೊನಾ ಅಲೆಯ ಸಂದರ್ಭದಲ್ಲಿ ಕಳೆದ ವರ್ಷ ಜುಲೈ ಕೊನೆಯ ವಾರದಲ್ಲಿ ಪಾಸಿಟಿವಿಟಿ ಪ್ರಮಾಣವು ಉತ್ತುಂಗಕ್ಕೇರಿತ್ತು. ಹಾಗೆಯೇ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಪಾಸಿಟಿವಿಟಿ ಪ್ರಮಾಣ ಹೆಚ್ಚುತ್ತಲೇ ಇದ್ದರೂ ಕೊರೊನಾ ಸೋಂಕಿತರ ಪ್ರಮಾಣ ಕ್ರಮೇಣವಾಗಿ ಕುಸಿದಿತ್ತು.

ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ: ಸಂಕಷ್ಟದಲ್ಲಿ ಡಬ್ಬಾವಾಲಾಗಳುಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ: ಸಂಕಷ್ಟದಲ್ಲಿ ಡಬ್ಬಾವಾಲಾಗಳು

ಕಳೆದ ಜುಲೈನಲ್ಲಿ ಭಾರತವು ನಿತ್ಯ 5 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿತ್ತು, ತಿಂಗಳ ಅಂತ್ಯದ ವೇಳೆಗೆ ಪರೀಕ್ಷೆಗಳ ಸಂಖ್ಯೆ ಕ್ರಮೇಣವಾಗಿ ಏರಿಕೆಯಾಗತೊಡಗಿತು. ಆಗಸ್ಟ್ ಮೂರನೇ ವಾರದ ವೇಳೆಗೆ 10 ಲಕ್ಷವನ್ನು ತಲುಪಿತ್ತು.

ಸೆಪ್ಟೆಂಬರ್‌ನಲ್ಲಿ ಕಂಡುಬಂದಿದ್ದ ಕೊರೊನಾ ಪ್ರಕರಣಗಳಿಗಿಂತ ಈಗಿನ ಪ್ರಕರಣಗಳು ಸುಮಾರು 2.5 ಪಟ್ಟು ಹೆಚ್ಚಿವೆ. ಹಾಗೆಂದ ಮಾತ್ರ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಿಲ್ಲ ಅದು ಸ್ಥಿರವಾಗಿಯೇ ಇದೆ ಆದರೆ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪಾಸಿಟಿವ್ ದರವಿದೆ, ಶೇ.15ಕ್ಕಿಂತಲೂ ಹೆಚ್ಚಿದೆ, ನಿತ್ಯ 14 ರಿಂದ 15 ಲಕ್ಷ ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ದೆಹಲಿಯಲ್ಲಿ ನಿತ್ಯ 1 ಲಕ್ಷ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

English summary
India’s coronavirus cases numbers: One of the several remarkable features about this second wave of infections in India has been the very high positivity rate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X