ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Reject Zomato: ಹಿಂದಿ ಕಲಿಯಲೇ ಬೇಕು ಎಂದ ಜೊಮ್ಯಾಟೋಗೆ ತಮಿಳರ ತರಾಟೆ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಇದೀಗ Reject Zomato ಎನ್ನುವುದು ಟ್ರೆಂಡ್ ಆಗುತ್ತಿದೆ. ಹಾಗಾದರೆ ಜೊಮ್ಯಾಟೋ ಮೇಲೆ ಜನರು ಸಿಟ್ಟಿಗೇಳಲು ಕಾರಣವೇನು ಎಂಬುದರ ಕುರಿತು ಮಾಹಿತಿ ಇಲ್ಲಿ ನೀಡಲಾಗಿದೆ.

ಹಿಂದಿ ನಮ್ಮ ರಾಷ್ಟ್ರ ಭಾಷೆ. ಎಲ್ಲರೂ ಸ್ವಲ್ಪವಾದರೂ ಹಿಂದಿಯನ್ನ ಕಲಿಯಬೇಕಾದದ್ದು ಸರ್ವೇ ಸಮಾನ್ಯ ಎಂದು ಜ್ಯೊಮ್ಯಾಟೋ ಫುಡ್ ಡೆಲಿವರಿ ಅಪ್ಲಿಕೇಷನ್ ತಮಿಳು ಗ್ರಾಹಕರ ಜೊತೆ ಚಾಟ್ ಮಾಡಿರುವ ಚಿತ್ರವೊಂದು ಈಗ ಸಾಕಷ್ಟು ವೈರಲ್ ಆಗಿದೆ.

ಜೊಮ್ಯಾಟೋ ತಮಿಳುನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರೆ ತಮಿಳು ಅರ್ಥವಾಗುವವರನ್ನೆ ನೀವು ಕಂಪನಿಗೆ ಸೇರಿಸಿಕೊಳ್ಳಿ ಎಂದು ಗ್ರಾಹಕ ಕೇಳಿದಾಗ ಜೊಮ್ಯಾಟೋ ಪುಡ್ ಡೆಲಿವರಿ ಸಂಸ್ಥೆ ಈ ರೀತಿಯಾಗಿ ಹೇಳಿಕೆ ಕೊಟ್ಟಿದೆ.

Why RejectZomato Is Trending On Twitter; Know Reason Here

ಇದು ತಮಿಳಿಗರ ಕೋಪಕ್ಕೆ ಕಾರಣವಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಹಿಂದಿ ಭಾಷೆಯನ್ನ ದಕ್ಷಿಣ ಭಾರತೀಯರ ಮೇಲೆ ಬಲವಂತವಾಗಿ ಹೇರುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಇದು #reject_zomato ಎಂಬ ಟ್ರೆಂಡಿಗ್ ನೊಂದಿಗೆ ಟ್ವಿಟ್ಟರ್‌ ಅಲ್ಲಿ ವೈರಲ್ ಆಗಿದೆ. ಜೊಮ್ಯಾಟೋ ಅಪ್ಲಿಕೇಷನ್‌ ಅನ್ನು Uninstall ಮಾಡುವಂತೆ ಕಡಿಮೆ ರೇಟಿಂಗ್ ಕೊಡುವಂತೆ ಸೋಶಿಯಲ್ ಮೀಡಿಯಗಳಲ್ಲಿ ತಮಿಳರು ಒತ್ತಾಯಿಸುತ್ತಿದ್ದಾರೆ.

ತಮಿಳುನಾಡಿನ ವಿಕಾಸ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಜೊಮ್ಯಾಟೋದಿಂದ ಫುಡ್ ಆರ್ಡರ್ ಮಾಡಿದ್ದೆ ಆದರೆ ಒಂದು ಮಿಸ್ ಆಗಿತ್ತು ಹೀಗಾಗಿ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಆಗಿರುವುದನ್ನು ವಿವರಿಸಿದೆ. ನಿಮಗೆ ಹಿಂದಿ ತಿಳಿದಿಲ್ಲ ಅಥವಾ ನೀವು ಹಿಂದಿಯಲ್ಲಿ ಮಾತನಾಡಿಲ್ಲವೆಂದರೆ ಫಂಡ್ ರಿಪೇಯ್‌ಮೆಂಟ್ ಆಗುವುದಿಲ್ಲ ಎಂದು ಬೆದರಿಸಿದ್ದರು.

ಹಾಗೆಯೇ ಅವರು ತಮ್ಮ ಚಾಟ್‌ನ ಸ್ಕ್ರೀನ್‌ಶಾಟ್‌ ಶೇರ್ ಮಾಡಿದ್ದಾರೆ. ಪ್ರತಿಕ್ರಿಯೆಯಾಗಿ ಜೊಮ್ಯಾಟೋ ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದು, ಸಮಸ್ಯೆ ಬಗೆಹರಿಸಲು ಬೇಕಾದ ಎಲ್ಲಾ ದಾಖಲೆಯನ್ನು ಪಡೆದಿದೆ.

ಆದರೆ ನೆಟಿಜನ್ ಇನ್ನೂ ಆಕ್ರೋಶಗೊಂಡಿದ್ದಾರೆ, ಸಾರ್ವಜನಿಕರ ಕ್ಷಮೆ ಯಾಚಿಸಬೇಕು ಎಂದು ಕೇಳಿದೆ.

ಆನ್‌ಲೈನ್ ದಿನ ಡೆಲಿವರಿಯಿಂದ ಹೊರಬಂದ ಜೊಮ್ಯಾಟೋ: ಆನ್‌ಲೈನ್‌ ಫುಡ್‌ ಡೆಲಿವರಿ ದೈತ್ಯ ಜೊಮ್ಯಾಟೋ, ತಾನು ದಿನಸಿ ಸಾಮಾಗ್ರಿಗಳ ಡೆಲಿವರಿ ಸೇವೆಯನ್ನು ನಿಲ್ಲಿಸುವುದಾಗಿ ಹೇಳಿಕೆ. ಸೆಪ್ಟೆಂಬರ್‌ 17 ರಿಂದ ಈ ಸೇವೆಯನ್ನು ಅಂತ್ಯಗೊಳಿಸುವುದಾಗಿ ಜೊಮ್ಯಾಟೋ ಘೋಷಣೆ ಮಾಡಿದೆ. ಅಂದಹಾಗೆ ಜೊಮ್ಯಾಟೋ ಕಳೆದರಡು ವರ್ಷದಲ್ಲಿ ಈ ಘೋಷಣೆ ಮಾಡುತ್ತಿರುವುದು ಇದು ಎರಡನೇ ಬಾರಿ.

ತಾನು ದಿನಸಿ ಸಾಮಗ್ರಿಗಳ ಡೆಲಿವರಿ ಸೇವೆಯನ್ನು ನಿಲ್ಲಿಸುವುದಾಗಿ ಈಗಾಗಲೇ ತನ್ನ ದಿನಸಿ ಪಾರ್ಟ್ನರ್‌ಗಳೊಂದಿಗೆ ಜೊಮ್ಯಾಟೋ ಹೇಳಿಕೊಂಡಿದೆ. ಕ್ಲಪ್ತ ಸಮಯಕ್ಕೆ ದಿನಸಿ ಸಾಮಾಗ್ರಿಗಳ ಡೆಲಿವರಿ ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಹಕರಿಗೆ ಅನಾನುಕೂಲವಾಗುತ್ತಿದೆ. ಹೀಗಾಗಿ ದಿನಸಿ ಸೇವೆಯನ್ನು ನಿಲ್ಲಿಸಲು ಜೊಮ್ಯಾಟೋ ಮುಂದಾಗಿದೆ.

ತಾನೇ ಆರ್ಡರ್‌ಗಳನ್ನು ತೆಗೆದುಕೊಂಡು, ಸರಿಯಾದ ಸಮಯಕ್ಕೆ ಡೆಲಿವರಿ ಮಾಡದೇ ಗ್ರಾಹಕರನ್ನು ಕಳೆದುಕೊಳ್ಳುವ ಬದಲು, ಈಗಾಗಲೇ ತಾನು ಹೂಡಿಕೆ ಮಾಡಿರುವ, ಡೆಲಿವರಿ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿರುವ ಗ್ರೋಫರ್ಸ್‌ ಮೂಲಕ ದಿನಸಿ ಡೆಲಿವರಿ ಮಾಡುವ ಚಿಂತನೆಯಲ್ಲಿ ಜ್ಯೊಮ್ಯಾಟೋ ಇದೆ. ಇದರಿಂದ ಉತ್ತಮ ವ್ಯವಹಾರ ಸಾಧಿಸಬಹುದು ಎನ್ನುವ ನಿರೀಕ್ಷೆಯಲ್ಲಿರುವ ಕಂಪನಿ, ಶೇರುದಾರರಿಗೂ ಉತ್ತಮ ಲಾಭ ನೀಡಲು ಸಾಧ್ಯ ಎಂದು ಅಂದಾಜಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜೊಮ್ಯಾಟೋ, 'ಸದ್ಯ ದಿನಸಿ ಡೆಲಿವರಿ ಮಾಡುತ್ತಿರುವ ನಮ್ಮ ವ್ಯವಸ್ಥೆ ಸರಿ ಇಲ್ಲ. ಇದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿಲ್ಲ. ನಮ್ಮ ದಿನಸಿ ಪಾರ್ಟ್ನರ್‌ಗಳಿಗೂ ಇದು ಬಳಕೆ ಸ್ನೇಹಿಯಾಗಿಲ್ಲ. ಹೀಗಾಗಿ ಈ ಸೇವೆಯನ್ನೇ ನಾವು ಸ್ಥಗಿತಗೊಳಿಸುತ್ತಿದ್ದೇವೆ' ಎಂದು ಹೇಳಿದೆ.

ಅಲ್ಲದೇ 15 ನಿಮಿಷಗಳಲ್ಲಿ ದಿನಸಿ ಡೆಲಿವರಿ ಮಾಡುವುದಾಗಿ ಈ ಸೇವೆ ಆರಂಭಿಸಿದ್ದ ಜೊಮ್ಯಾಟೋಗೆ ಸರಿಯಾದ ಸಮಯದಲ್ಲಿ ಡೆಲಿವರಿ ಸಾಧ್ಯವಾಗುತ್ತಿಲ್ಲ. ದಿನಸಿ ಅಂಗಡಿಗಳಲ್ಲಿ ವಸ್ತುಗಳ ಅಲಭ್ಯತೆ ಹಾಗೂ ವಿವಿಧ ವಸ್ತುಗಳ ಅಭ್ಯತೆ ಇಲ್ಲದೇ ಇರುವುದರಿಂದ ಗ್ರಾಹಕರೂ ತೊಂದರೆಗೆ ಒಳಗಾಗಿದ್ದಾರೆ. ಇದು ಗ್ರಾಹಕರಿಗೆ ಅತೀ ಕೆಟ್ಟ ಅನುಭವ ಉಂಟು ಮಾಡಿದೆ. ಹೀಗಾಗಿ ಈ ಸೇವೆ ನಿಲ್ಲಿಸಲಾಗುತ್ತಿದೆ ಎಂದು ಜ್ಯೊಮ್ಯಾಟೋ ಹೇಳಿದೆ.

'ಕಳೆದೆರಡು ತಿಂಗಳಿನಿಂದ ನಾವು ಈ ಬಗ್ಗೆ ಪ್ರಯೋಗ ಮಾಡಿದ್ದು, ನಮ್ಮ 15 ದಿನದ ಡೆಲಿವರಿ ಯೋಜನೆಯ ಸಕ್ಸಸ್‌ ರೇಟ್‌ ತುಂಬಾ ಕಡಿಮೆ ಇದೆ. ಇದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ' ಎಂದು ಜೊಮ್ಯಾಟೋ ಹೇಳಿದೆ.

English summary
he food delivery app Zomato always manages to get limelight, sometimes with its fun banter on Twitter while other times for its controversy. Recently, Zomato faced criticism on Twitter as #Reject Zomato, trended on the microblogging site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X