ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೃಹತ್ ಸಭೆಯಲ್ಲೂ ಮೈಕ್ ಬಳಸಲಿಲ್ಲವೇಕೆ ಪ್ರಧಾನಿ ಮೋದಿ?

|
Google Oneindia Kannada News

ಜೈಪುರ್, ಅಕ್ಟೋಬರ್ 1: ನರೇಂದ್ರ ಮೋದಿ ತಾವೂ ಸಹ ಸಾಮಾನ್ಯರಲ್ಲಿ ಸಾಮಾನ್ಯರು ಎನ್ನುವಂತೆ ಸಾಕಷ್ಟು ಬಾರಿ ಬಿಂಬಿಸಿಕೊಂಡಿದ್ದಾರೆ. ತಾವೊಬ್ಬ ಪ್ರಧಾನಮಂತ್ರಿ ಅಲ್ಲದೇ ಪ್ರಧಾನ ಸೇವಕ ಎನ್ನುವ ಮಾತಿನಂತೆ ಇತ್ತೀಚಿನ ಅವರ ವರ್ತನೆಯು ಇದೀಗ ಸಖತ್ ಸುದ್ದಿ ಮಾಡಿದೆ.
ಕಳೆದ ಶುಕ್ರವಾರ ರಾಜಸ್ಥಾನದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಬೇಕಿತ್ತು. ಈ ವೇಳೆ ಧ್ವನಿವರ್ಧಕ(ಮೈಕ್) ಅನ್ನು ಬಳಸುವುದಕ್ಕೆ ಪ್ರಧಾನಿ ಮೋದಿ ನಿರಾಕರಿಸಿದ್ದಾರೆ. ರಾತ್ರಿ 10 ಗಂಟೆಯ ಮೇಲೆ ಮೈಕ್ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ನಿಯಮವನ್ನು ಮುರಿಯುವುದು ಬೇಡ ಎಂಬ ಕಾರಣಕ್ಕೆ ಮೈಕ್ ಬಳಸುವುದಿಲ್ಲ ಎಂದು ಮೋದಿ ಹೇಳಿದ್ದರು.

6 ಗಂಟೆಯೊಳಗೆ 442 ಕಿಮೀ ಮುಟ್ಟಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌6 ಗಂಟೆಯೊಳಗೆ 442 ಕಿಮೀ ಮುಟ್ಟಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌

ರಾಜಸ್ಥಾನದ ಅಬು ರಸ್ತೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಭಾಷಣ ಆರಂಭಿಸುವ ಮುನ್ನ ಅಲ್ಲಿನ ಜನರು ಆತ್ಮೀಯವಾಗಿ ಅವರನ್ನು ಸ್ವಾಗತಿಸಿದರು. ಸ್ಥಳದಲ್ಲಿ ನೆರೆದಿದ್ದ ಜನರನ್ನು ಅಭಿನಂದಿಸಲು ಪ್ರಧಾನಿ ಮೋದಿ ತೆರಳಿದ್ದರು.

Why PM Modi rejects to use mic to address the huge gathering at Rajasthan

ಸಾಲು ಸಾಲು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ:
ಇಡೀ ದಿನ ಬಿಡುವಿಲ್ಲದೇ ಸಂಚರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ರಾಜಸ್ಥಾನದ ಅಬು ರೋಡ್‌ಗೆ ಭೇಟಿ ನೀಡುವ ಮುನ್ನ ಮೋದಿ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಅಂಬಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆರತಿ ಬೆಳಗಿದರು. ಇದೇ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುವುದು ಮತ್ತು ದೇವರ ಆರತಿಯನ್ನು ಪ್ರದರ್ಶಿಸುವುದು ಕಂಡುಬಂತು.
ಇದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರಿಗೆ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದರು. ಈ ಕ್ರಮದಿಂದ 80 ಕೋಟಿಗೂ ಹೆಚ್ಚು ಜನರಿಗೆ ಸಹಕಾರಿ ಆಗಲಿದೆ ಎಂದು ಹೇಳಿದರು. ಇಂದು ಗುಜರಾತ್‌ನ ಅಂಬಾಜಿಯಲ್ಲಿ ಬಹುವಿಧದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಹಬ್ಬದ ಸಮಯದಲ್ಲಿ ನನ್ನ ಸಹೋದರಿಯರಿಗೆ ಸಹಾಯ ಮಾಡಲು ಸರ್ಕಾರವು ತನ್ನ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದೆ. ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಕಷ್ಟದ ಸಮಯದಲ್ಲಿ ಪರಿಹಾರ ನೀಡಲು ಕೇಂದ್ರವು ಸುಮಾರು 4 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಅಂಬಾಜಿಯಲ್ಲಿ 7,200 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ನರೇಂದ್ರ ಮೋದಿ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು. ಡಿಜಿಟಲ್ ಮೂಲಕ ಪ್ರಧಾನಿ ಮೋದಿ ಬಿಡುಗಡೆ ಬಟನ್ ಒತ್ತುತ್ತಿದ್ದಂತೆ ಸಾವಿರಾರು ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅಂಬಾಜಿಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ 45,000 ಕ್ಕೂ ಹೆಚ್ಚು ಮನೆಗಳ ಶಂಕುಸ್ಥಾಪನೆಯೂ ಸೇರಿತ್ತು.
ಪ್ರಧಾನಿ ಮೋದಿ ತರಂಗ ಹಿಲ್ - ಅಂಬಾಜಿ - ಅಬು ರೋಡ್ ಹೊಸ ಬ್ರಾಡ್ ಗೇಜ್ ಮಾರ್ಗದ ಶಂಕುಸ್ಥಾಪನೆ ಮತ್ತು ಪ್ರಸಾದ ಯೋಜನೆಯಡಿ ಅಂಬಾಜಿ ದೇವಸ್ಥಾನದಲ್ಲಿ ಯಾತ್ರಾ ಸೌಲಭ್ಯಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಡೀಸಾದ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ರನ್‌ವೇ ಮತ್ತು ಸಂಬಂಧಿತ ಮೂಲಸೌಕರ್ಯಗಳ ನಿರ್ಮಾಣವನ್ನು ಅಡಿಪಾಯ ಹಾಕುವ ಇತರ ಯೋಜನೆಗಳು ಸೇರಿವೆ.

English summary
Why PM Modi rejects to use mic to address the huge gathering at Rajasthan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X