ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪಬ್​ಜಿ ಯಾಕೆ ಬ್ಯಾನ್ ಮಾಡಿಲ್ಲ? ಉತ್ತರ ನೀಡಿದ ಕಾಂಗ್ರೆಸ್

|
Google Oneindia Kannada News

ನವದೆಹಲಿ, ಜುಲೈ 28: ಚೀನಾದ ಆ್ಯಪ್ ಗಳನ್ನು ನಿಷೇಧಿಸಿರುವ ನರೇಂದ್ರ ಮೋದಿ ಸರಕಾರ, ಪಬ್​ಜಿ ಯನ್ನು ಯಾಕೆ ಬ್ಯಾನ್ ಮಾಡಿಲ್ಲ ಎನ್ನುವ ಪ್ರಶ್ನೆಯನ್ನು ಎತ್ತಿ, ಅದಕ್ಕೆ ಉತ್ತರವನ್ನೂ ಕಾಂಗ್ರೆಸ್ ನೀಡಿದೆ.

Recommended Video

Japan ಇಲ್ಲಿನ ಪ್ರತಿ ಮನೆಗೂ ಮಾಸ್ಕ್ ಜೊತೆ ದುಡ್ಡು ಕೊಟ್ರು | Oneindia Kannada

ಚೀನಾ ಜೊತೆಗಿನ ಗಲ್ವಾನ್ ಗಡಿ ಸಂಘರ್ಷದ ನಂತರ, ಭಾರತ ಸರಕಾರ ಮೊದಲಿಗೆ 59, ನಂತರ 47 ಆ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಆದರೆ, ಈವರೆಗೂ ಜನಪ್ರಿಯ ಪಬ್​ಜಿಗೆ ನಿಷೇಧ ಹೇರಿಲ್ಲ.

ಖಾದಿ ಹೆಸರಲ್ಲಿ ಮೋದಿ ಚಿತ್ರವಿರುವ ನಕಲಿ ಮಾಸ್ಕ್ ಮಾರಾಟ: ದೂರುಖಾದಿ ಹೆಸರಲ್ಲಿ ಮೋದಿ ಚಿತ್ರವಿರುವ ನಕಲಿ ಮಾಸ್ಕ್ ಮಾರಾಟ: ದೂರು

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ಸಿನ ವಕ್ತಾರ, ಖ್ಯಾತ ವಕೀಲರೂ ಆಗಿರುವ ಅಭಿಷೇಕ್ ಮನು ಸಿಂಘ್ವಿ, ಮೋದಿ ಸರಕಾರವನ್ನು ವ್ಯಂಗ್ಯವಾಡುವ ಟ್ವೀಟ್ ಮಾಡಿದ್ದಾರೆ. ಅವರು ಮಾಡಿದ ಟ್ವೀಟ್ ಹೀಗಿದೆ:

Why PM Modi Not Banning PubG, Congress Leader Abhishek Singhvi Tweet

"ಮೋದಿಜಿ ಪಬ್​ಜಿಯನ್ನು ಬ್ಯಾನ್ ಮಾಡಬೇಕೆಂದು ಬಯಸಿದ್ದರು. ಆದರೆ, ವಾಸ್ತವತೆಯನ್ನು ಅರಿತಿದ್ದಾರೆ. ಯುವಕರು ತಮ್ಮ ಕಲ್ಪನಾ ಲೋಕದಿಂದ ವಾಸ್ತವ ಲೋಕಕ್ಕೆ ಬಂದರೆ, ಉದ್ಯೋಗದ ಬಗ್ಗೆ ಕೇಳಿದರೆ, ಇದು ದೊಡ್ಡ ಸಮಸ್ಯೆಯಾಗಲಿದೆ"ಎಂದು ಸಿಂಘ್ವಿ, ಟ್ವೀಟ್ ಮೂಲಕ, ಮೋದಿ ಸರಕಾರವನ್ನು ಲೇವಡಿ ಮಾಡಿದ್ದಾರೆ.

ಪಬ್​ಜಿ, ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯಾಗಿದ್ದರೂ, ಅದಕ್ಕೆ ಬಂಡವಾಳ ಹರಿದು ಬಂದಿದ್ದು ಚೀನಾ ಮೂಲದ ಕಂಪೆನಿಯಿಂದ. ಪಬ್​ಜಿ ಆ್ಯಪ್, ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿದೆ.

Why PM Modi Not Banning PubG, Congress Leader Abhishek Singhvi Tweet

ಚೀನಾ ಮೂಲದ ಟಿಕ್​ ಟಾಕ್​ ಸೇರಿದಂತೆ 59 ಆ್ಯಪ್​ಗಳನ್ನು ಮೊದಲು ಬ್ಯಾನ್ ಮಾಡಿದ್ದ ಕೇಂದ್ರ ಸರಕಾರ, ಮತ್ತೆ 47 ಆ್ಯಪ್​ಗಳನ್ನು ನಿಷೇಧಿಸಿತ್ತು.

English summary
Why PM Modi Not Banning PubG, Congress Leader Abhishek Singhvi Tweet,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X